ಕುಟುಂಬವೊಂದು ಶ್ವಾನದ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿ ಊರಿಗೆ ಊಟ ಹಾಕಿದ್ದಾರೆ.
ಇತ್ತೀಚೆಗೆ ಶ್ವಾನಗಳು ಸೆಲೆಬ್ರಿಟಿಗಳಾಗುತ್ತಿವೆ. ಶ್ವಾನದ ಮಾಲೀಕರು ತಮ್ಮ ಮನೆ ಮಕ್ಕಳಿಗಿಂತ ತುಸು ಹೆಚ್ಚೆ ಪ್ರೀತಿಯಿಂದ ಅವುಗಳನ್ನು ಸಲಹುತ್ತಿರುವುದರಿಂದ ಅವುಗಳಿಗೆ ಹುಟ್ಟುಹಬ್ಬ ಮದುವೆ ಎಲ್ಲವನ್ನೂ ಶ್ವಾನಪ್ರಿಯರು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ನೋಯ್ಡಾದ ಮಕ್ಕಳಿಲ್ಲದ ದಂಪತಿ ತಮ್ಮ ಮನೆಯ ಶ್ವಾನಕ್ಕೆ ಪಕ್ಕದ ಮನೆ ಶ್ವಾನದೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಸಿ ಬ್ಯಾಂಡ್ ಭಜಂತ್ರಿಯೊಂದಿಗೆ ಪಕ್ಕದ ಮನೆಗೆ ಕಳುಹಿಸಿಕೊಟ್ಟಿದ್ದರು. ಅದೇ ರೀತಿ ಈಗ ಕುಟುಂಬವೊಂದು ಶ್ವಾನದ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿ ಊರಿಗೆ ಊಟ ಹಾಕಿದ್ದಾರೆ.
ಅಂದಹಾಗೆ ಜಾರ್ಖಂಡ್‌ನ ಧನ್ಬಾದ್‌ನಲ್ಲಿ(Dhanbad) ಈ ವಿಚಿತ್ರ ಘಟನೆ ನಡೆದಿದೆ. ಶ್ವಾನ ಕುಟುಂಬದ ನೆಂಟರು, ಬಂಧುಗಳು, ಆತ್ಮೀಯರ ಸಮ್ಮುಖದಲ್ಲಿ ಶ್ವಾನಕ್ಕೆ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಶ್ವಾನ ಹುಟ್ಟುಹಬ್ಬಕ್ಕಾಗಿ ಮನೆಯನ್ನು ಸುಂದರವಾಗಿ ಅಲಂಕರಿಸಲಾಗಿದ್ದು, ಎಲ್ಲರೂ ಮನೆ ಮದುವೆಯಂತೆ (Wedding) ಅಲಂಕಾರದೊಂದಿಗೆ ತಯಾರಾಗಿದ್ದಾರೆ. ಶ್ವಾನದ ಮಾಲೀಕ ಶ್ವಾನವನ್ನು ತನ್ನ ಮಗುವಿನಂತೆ ಎತ್ತಿಕೊಂಡಿದ್ದು, ಆತನ ಪತ್ನಿ ಶ್ವಾನಕ್ಕೆ ಮುತ್ತಿಕ್ಕಿ ಬಳಿಕ ಕೇಕ್ ಕಟ್ ಮಾಡಲಾಗುತ್ತದೆ.
धनबाद में एक पालतू कुत्ते की जन्मदिन पार्टी को देख लोग बोले ‘क़िस्मत सहो तो ऐसी’ pic.twitter.com/yRc9iqgQFo
— Shubhankar Mishra (@shubhankrmishra)ಅಲ್ಲದೇ ಈ ಶ್ವಾನದ ಸಮಾರಂಭಕ್ಕೆ ಬಂದ ಅತಿಥಿಗಳು ಶ್ವಾನಕ್ಕೆ(Dog) ಉಡುಗೊರೆಗಳನ್ನು (Gift) ಕೂಡ ತಂದಿದ್ದರು. ಧನ್ಬಾದ್‌ನ ಲೋಯಾಬಾದ್‌ನಲ್ಲಿ(Loyabad) ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೀಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ವಾನದ ಹೆಸರು ಅಕ್ಸರ್, ಅಕ್ಸರ್‌ನ ಪೋಷಕರಾದ ಸುಮಿತ್ರಾ ಕುಮಾರಿ (Sumitra Kumari) ಹಾಗೂ ಸಂದೀಪ್ ಕುಮಾರ್ ಈ ಕಾರ್ಯಕ್ರಮವಾಗಿ ಸುಂದರವಾದ ಆಮಂತ್ರಣ ಪತ್ರವನ್ನು ಕೂಡ ಸಿದ್ಧಪಡಿಸಿದ್ದರು. ಅಷ್ಟೇ ಅಲ್ಲದೇ ಶ್ವಾನಕ್ಕಾಗಿ 4500 ರೂಪಾಯಿ ಮೊತ್ತದ ಬಟ್ಟೆಯನ್ನು ಕೊಂಡು ತಂದಿದ್ದರು. ಒಟ್ಟಿನಲ್ಲಿ ಯಾವುದರಲ್ಲೂ ಕಡಿಮೆ ಇಲ್ಲದಂತೆ ತಮ್ಮ ಶ್ವಾನದ ಹುಟ್ಟುಹಬ್ಬವನ್ನು ಈ ದಂಪತಿ ಆಚರಿಸಿದ್ದಾರೆ.
Pet birthday: ನಾಯಿ ಸಾಕಲು ಬಿಡದ್ದಕ್ಕೆ ಮನೆ ಬಿಟ್ಟು ಬಂದರು..! ಶ್ವಾನದ ಬರ್ತ್‌ಡೇಗೆ ಸ್ಪೆಷಲ್ ಬಿರಿಯಾನಿ
ಇನ್ನು ಈ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳದಿಂದಲೂ ಕೂಡ ಅತಿಥಿಗಳು ಆಗಮಿಸಿದ್ದರು. ಅತಿಥಿಗಳು ಭಾರಿ ಮೌಲ್ಯದ ಉಡುಗೊರೆಯನ್ನು ಕೂಡ ಈ ಶ್ವಾನಕ್ಕಾಗಿ ತಂದಿದ್ದು, ಮೂರು ಬಂಗಾರದ ಲಾಕೆಟ್‌ಗಳು (gold lockets) ಕೂಡ ಶ್ವಾನಕ್ಕೆ ಕೊಡುಗೆಯಾಗಿ ಸಿಕ್ಕಿದೆ. ಇತ್ತ ಕೇಕ್ ಕತ್ತರಿಸುವ ವೇಳೆ ಶ್ವಾನಕ್ಕೆ ಆರತಿಯನ್ನು ಕೂಡ ಮಾಡಲಾಯಿತು.
ಪ್ರೀತಿಯ ಶ್ವಾನದ ಬರ್ತ್‌ಡೇಗೆ ಅದ್ದೂರಿ ಪಾರ್ಟಿ... ಯುವಕ ಖರ್ಚು ಮಾಡಿದ್ದು ಎಷ್ಟು ಲಕ್ಷ...?
ಶ್ವಾನ ಅಕ್ಸರ್(Aksar) ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಇದ್ದು, ನಮ್ಮ ಜೊತೆಯೇ ಊಟ ಹಾಗೂ ನಿದ್ದೆ ಮಾಡುತ್ತದೆ. ನಾನು ಈ ಹಿಂದೆ ಪಂಜಾಬ್‌ನಲ್ಲಿ ಕೆಲಸ ಮಾಡುತ್ತಿದೆ. ಅಲ್ಲಿ ಜನ ಶ್ವಾನವನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ನಾನು ಗಮನಿಸಿದ್ದೆ. ಹೀಗಾಗಿ ನಮಗೂ ಶ್ವಾನದ ಮೇಲೆ ಆತ್ಮೀಯತೆ ಶುರುವಾಯಿತು. ಇದಾದ ಬಳಿಕ ನಾವು ರಸ್ತೆ ಬದಿ ಇದ್ದ 20 ದಿನಗಳ ಶ್ವಾನವೊಂದನ್ನು ಮನೆಗೆ ಕರೆತಂದೆವು. ಇಂದು ಅದ್ಧೂರಿಯಾಗಿ ಅದರ ಹುಟ್ಟುಹಬ್ಬವನ್ನು (birthday) ಆಚರಿಸಿದೆವು ಎಂದು ಸಂದೀಪ್ (Sandeep) ಹೇಳಿಕೊಂಡಿದ್ದಾರೆ.