War of Words in RS: ಸಂಸತ್‌ನಲ್ಲಿ ಜಯಾ ಬಚ್ಚನ್‌, ಸಚಿವ ಪಿಯೂಷ್‌ ಗೋಯಲ್‌ ಮಧ್ಯೆ ವಾಕ್ಸಮರ

By Suvarna NewsFirst Published Dec 11, 2021, 2:03 PM IST
Highlights
  • ಜಯಾ ಬಚ್ಚನ್‌ ಹಾಗೂ ಸಚಿವ ಪಿಯೂಷ್‌ ಗೋಯಲ್‌ ಮಧ್ಯೆ ವಾಕ್ಸಮರ
  • ನೇರವಾಗಿ ಮಾತನಾಡುವಂತೆ ಜಯಾ ಬಚ್ಚನ್‌ ತಾಕೀತು
  • ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ ಬಿಸಿ ಏರಿದ ಮಾತು

ನವದೆಹಲಿ(ಡಿ.11): ಸಂಸತ್‌ನ ಚಳಿಗಾಲದ ಅಧಿವೇಶನ(Winter Session of Parliament)ದಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ ಹಾಗೂ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌(Piyush Goyal)ಮಧ್ಯೆ ದೊಡ್ಡ ವಾಕ್ಸಮರವೇ ನಡೆಯಿತು.  ಹೊದಿಕೆ ಸುತ್ತಿ ಹೊಡೆಯುವ ಬದಲು ನೇರವಾಗಿ ವಿಷಯಕ್ಕೆ ಬಂದು ಮಾತನಾಡಿ ಎಂದು ಜಯಾ ಬಚ್ಚನ್ ಸಚಿವ ಪಿಯೂಷ್‌ ಗೋಯಲ್‌ಗೆ ಹೇಳಿದರು. 

ಪ್ರಶ್ನೋತ್ತರ ಅವಧಿಯಲ್ಲಿ ಗ್ರೇಟರ್‌ ನೋಯ್ಡಾದ ಬಗ್ಗೆ ವಿಷಯ ಪ್ರಸ್ತಾಪಿಸಿದ ಜಯಾ ಬಚ್ಚನ್‌(Jaya Bachchan) ಗ್ರೇಟರ್‌ ನೋಯ್ಡಾ(Greater Noida)ದ ಅಭಿವೃದ್ಧಿ ಬಗ್ಗೆ ಕೇಂದ್ರ ಸರ್ಕಾರದ ಯೋಜನೆಗಳ ಪಾರದರ್ಶಕತೆ ಬಗ್ಗೆಗೋಯಲ್‌ ಅವ ಬಳಿ ಪ್ರಶ್ನೆ ಮಾಡಿದರು. ಈ ವೇಳೆ ಜಯಾ ಬಚ್ಚನ್‌ ಗಾಳಿಯಲ್ಲಿ ಗುಂಡು ಹಾರಿಸದೆ, ನೇರವಾಗಿ ಮಾತನಾಡುವಂತೆ  ಪಿಯೂಷ್‌ ಗೋಯಲ್‌(Piyush Goyal) ಅವರಿಗೆ ಹೇಳಿದರು.

ಅತ್ತೆ ಜಯಾ ಬಚ್ಚನ್‌ಗೆ ಶತ್ರು, ಸೊಸೆ ಐಶ್ವರ್ಯಾಗೆ ಕ್ಲೋಸ್‌ ಫ್ರೆಂಡ್‌!

ಈ ವೇಳೆ ಮಾತನಾಡಿದ ಪಿಯೂಷ್‌ ಗೋಯಲ್‌, ಉತ್ತರ ಪ್ರದೇಶ(Uttar Pradesh)ದ ಮೆಗಾಸಿಟಿಯಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಯೋಗಿ ಆದಿತ್ಯನಾಥ್(Yogi Adityanath) ಸರ್ಕಾರವು ವಿದ್ಯುತ್ ಮಾರ್ಗಗಳನ್ನು ಸ್ಥಾಪಿಸಿದೆ, ರಸ್ತೆಗಳು, ಚರಂಡಿಗಳನ್ನು ಮತ್ತು ಇತರ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಿದೆ ಎಂದು ಹೇಳಿದರು.  ಅಲ್ಲದೇ ಗ್ರೇಟರ್ ನೋಯ್ಡಾದಲ್ಲಿ 156 ಎಕರೆ ಪ್ರದೇಶದಲ್ಲಿ ಐದು ದೊಡ್ಡ ಕೈಗಾರಿಕೆ ಸಂಸ್ತೆಗಳು ತಮ್ಮ ಘಟಕಗಳನ್ನು ಸ್ಥಾಪಿಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಅತ್ತೆ ಜೊತೆ ಸೇರಿ ಪತಿ ವಿರುದ್ಧ ಪಿತೂರಿ ನಡೆಸುತ್ತಾರಂತೆ ಐಶ್ವರ್ಯಾ ರೈ !

ಯೋಗಿ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರಾರಂಭಿಸಲಾದ ಯೋಜನೆಗಳು ಹೇಗೆ ಪೂರ್ಣಗೊಳ್ಳುತ್ತಿವೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ. ಈಗ  ಒಂದು ಸರ್ಕಾರ ಪ್ರಸ್ತಾವನೆ ಮಾಡುತ್ತಿದೆ, ಅದಕ್ಕೆ ಮುಂದಿನ ಸರ್ಕಾರವು ಯೋಜನೆಗಳನ್ನು ರೂಪಿಸುತ್ತದೆ ಮತ್ತು ಮುಂದಿನ ಸರ್ಕಾರ ಅದನ್ನು ಕಾರ್ಯಗತಗೊಳಿಸುತ್ತದೆ ಎಂಬಂತಿದ್ದ ಕಾಲ ಈಗ ಹೋಗಿದೆ.  ಈಗ ಒಳ್ಳೆಯ ದಿನಗಳು ಬಂದಿವೆ. ನೀವು ಸಂತೋಷಪಡಬೇಕು ಮತ್ತು ಯುಪಿಯಲ್ಲಿ ನಡೆಯುತ್ತಿರುವ ಕೆಲಸವನ್ನು ಪ್ರಶಂಸಿಸಬೇಕು, ”ಎಂದು ಗೋಯಲ್ ಹೇಳಿದರು.
ಇಷ್ಟು ಹೇಳಿದ ನಂತರವೂ  ಬಚ್ಚನ್, ಗೋಯಲ್ ಅವರ ಪ್ರತಿಕ್ರಿಯೆ ನೀಡುತ್ತಿರುವವರೆಗೂ ಉದ್ದಕ್ಕೂ ಜೋರಾಗಿ ಪ್ರತಿಭಟಿಸುವುದನ್ನು ಮುಂದುವರೆಸಿದರು, ಈ ವೇಳೆ ಸದನದ ಉಪ ಸಭಾಪತಿ ಹರಿವಂಶ್ ಸಿಂಗ್ ಅವರು ಎರಡೂ ಕಡೆಯವರು ಸಭ್ಯತೆಯನ್ನು ಕಾಯ್ದುಕೊಳ್ಳುವಂತೆ ಒತ್ತಾಯಿಸಿದರು.

ಈ ಹಿಂದೆ 2020ರಲ್ಲಿ ಬಾಲಿವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾದ ಬಗ್ಗೆ ಸಂಸದ ರವಿ ಕಿಶನ್‌(MP Ravi Kishan) ದೂಷಣೆ ಮಾಡಿದ್ದಕ್ಕೆ ಜಯಾ ಬಚ್ಚನ್‌ ಸಂಸತ್‌ನಲ್ಲಿ ವಾಕ್ಸಮರ ನಡೆಸಿದ್ದರು. ಈ ವೇಳೆ ಹಿರಿಯ ನಟಿ  ಹಾಗೂ ಬಿಜೆಪಿ ನಾಯಕಿ ಜಯಪ್ರದಾ(Jayaprada) ರವಿ ಕಿಶನ್‌ಗೆ ಬೆಂಬಲ ಸೂಚಿಸಿ, ವಿಷಯವನ್ನು ರಾಜಕೀಯ ಮಾಡಿದ್ದಕ್ಕೆ ಜಯಾ ಬಚ್ಚನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಡ್ರಗ್ಸ್ ವ್ಯಸನದಿಂದ ಯುವಜನರನ್ನು ರಕ್ಷಿಸುವ ನಿಟ್ಟಿನಲ್ಲಿ ನಾನು ರವಿಒ ಕಿಶನ್ ಹೇಳಿಕೆ ಬೆಂಬಲಿಸುತ್ತೇನೆ. ನಾವು ಡ್ರಗ್ಸ್ ವಿರುದ್ಧ ಧ್ವನಿ ಎತ್ತಿ ಯುವಜನರನ್ನು ರಕ್ಷಿಸಬೇಕು. ಈ ವಿಚಾರದಲ್ಲಿ ಜಯಾ ಬಚ್ಚನ್ ಅವರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ ಇದನ್ನು ರಾಜಕೀಯ ಮಾಡಬಾರದಿತ್ತು. ಅಂತಹ ಹೇಳಿಕೆ ನೀಡಲು ಆಕೆಗೆ ಹಕ್ಕಿಲ್ಲ ಎಂದಿದ್ದರು. ಜಯಾ ಬಚ್ಚನ್ ಈ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಆಕೆ ಯುವ ಜನರ ಡ್ರಗ್ಸ್ ವ್ಯಸನದ ಬಗ್ಗೆ ಹೇಳಬಹುದಿತ್ತು.  ಸುಶಾಂತ್‌(Sushant)ನಂತೆ ಇನ್ನೊಂದು ಘಟನೆ ನಡೆಯಬಾರದು ಎಂದು ಆ ಸಂದರ್ಭದಲ್ಲಿ ಜಯಪ್ರದಾ ಹೇಳಿದ್ದರು.  ನಟ ಸುಶಾಂತ್‌ ಸಿಂಗ್‌ ರಾಜಪೂತ್‌ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಡ್ರಗ್ಸ್ ವಿಚಾರವಾಗಿ ಬಾಲಿವುಡ್‌ನ್ನು ಆರೋಪಿಸಿದ್ದಕ್ಕೆ  ಜಯಾ ಬಚ್ಚನ್ ಸಂಸತ್ತಿನ ಶೂನ್ಯ ವೇಳೆಯಲ್ಲಿ ಧ್ವನಿ ಎತ್ತಿದ್ದರು.

click me!