State Against Journalists: ಪತ್ರಕರ್ತರ ದನಿ ಅಡಗಿಸಲು ಪೊಲೀಸ್‌ ಬಳಕೆ ಆಗಕೂಡದು: ಸುಪ್ರೀಂ ಕೋರ್ಟ್

By Kannadaprabha NewsFirst Published Dec 11, 2021, 9:30 AM IST
Highlights

*ಪತ್ರಕರ್ತರನ್ನು ಬಗ್ಗಬಡಿಯಲು ಪೊಲೀಸ್‌ ಬಳಕೆ ಮಾಡಬಾರದು
*ಭಿನ್ನ ಅಭಿಪ್ರಾಯಗಳು ಮತ್ತು ಗ್ರಹಿಕೆಗಳು ಸಾಮಾನ್ಯ : ಸುಪ್ರಿಂ
*ಸಂಪಾದಕರು ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌‌ ರದ್ದು

ನವದೆಹಲಿ (ಡಿ. 11): ರಾಜಕೀಯ ಅಭಿಪ್ರಾಯ (political opinion) ಅಥವಾ ಪತ್ರಕರ್ತರನ್ನು (journalists) ಬಗ್ಗಬಡಿಯಲು ರಾಜ್ಯ ಪೊಲೀಸ್‌ ಪಡೆಯನ್ನು (Police Force) ಎಂದಿಗೂ ಬಳಕೆ ಮಾಡಬಾರದು ಎಂದು ಸುಪ್ರೀಂಕೋರ್ಟ್‌ (Supreme Curt) ಶುಕ್ರವಾರ ಅಭಿಪ್ರಾಯಪಟ್ಟಿದೆ. ನ್ಯಾ ಎಸ್‌.ಕೆ ಕೌಲ್ ಮತ್ತು ಎಂ.ಎಂ.ಸುಂದ್ರೇಶ್‌ ಅವರನ್ನೊಳಗೊಂಡ ಪೀಠವು ಪಶ್ಚಿಮ ಬಂಗಾಳದಲ್ಲಿ ಪ್ರಕಟವಾದ ಲೇಖನಗಳಿಗೆ ಸಂಬಂಧಿಸಿದಂತೆ ನ್ಯೂಸ್‌ ವೆಬ್ ಪೋರ್ಟಲ್‌ನ ಸಂಪಾದಕರು ಮತ್ತು ಇತರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳನ್ನು‌ (FIR) ರದ್ದುಗೊಳಿಸಿ ರಾಜಕೀಯ ವರ್ಗವು ಆತ್ಮಾವಲೋಕನಕ್ಕೆ ಒಳಗಾಗುವಂತೆ ಕರೆ ನೀಡಿದೆ. 

ಆಂಗ್ಲ ಭಾಷೆಯ Opindia.com ನ ಸಂಪಾದಕ ನೂಪುರ್ ಜೆ ಶರ್ಮಾ (Nupur J Sharma), ಅದರ ಸಂಸ್ಥಾಪಕ ಮತ್ತು CEO ಸೇರಿದಂತೆ ಯೂಟ್ಯೂಬರ್ ಅಜೀತ್ ಭಾರ್ತಿ (YouTuber Ajeet Bharti) ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯಲು ರಾಜ್ಯ ನಿರ್ಧರಿಸಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ದವೆ (Siddhartha Dave) ಅವರು ಪೀಠಕ್ಕೆ ತಿಳಿಸಿದ್ದಾರೆ. ಈ ವೇಳೆ ನ್ಯಾಯಾಲಯ ಈ ಅಭಿಪ್ರಯಾ ನೀಡಿದೆ. ಇದೇ ವೇಳೆ ವೈವಿದ್ಯತೆಯೇ ಈ ದೇಶದ ಹೆಮ್ಮೆ, ಇಲ್ಲಿ ವಿಭಿನ್ನ ಅಭಿಪ್ರಾಯಗಳು ಮತ್ತು ಗ್ರಹಿಕೆಗಳು ಸಾಮಾನ್ಯ. ಅದು ಪ್ರಜಾಪ್ರಭುತ್ವಕ್ಕೆ ಅಗತ್ಯ ಸಹ ಎಂದು ಹೇಳಿದೆ.

Omicron Fear In Schools : ಒಮಿಕ್ರೋನ್‌ ಭೀತಿಯಲ್ಲೂ ಶಾಲೆಗಳಲ್ಲಿ ಹಾಜರಿ ಏರಿಕೆ

ಕಳೆದ ವರ್ಷ ಜೂನ್ 26 ರಂದು, ಸಂಪಾದಕ ನೂಪುರ್ ಜೆ ಶರ್ಮಾ  ಹಾಗೂ ಇತರ ಅರ್ಜಿದಾರರ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ದಾಖಲಿಸಲಾದ ಮೂರು ಎಫ್‌ಐಆರ್‌ಗಳಲ್ಲಿನ ಮುಂದಿನ ಪ್ರಕ್ರಿಯೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.  ಪಶ್ಚಿಮ ಬಂಗಾಳ ಸರ್ಕಾರದ ನಿರಂತರ ದಬ್ಬಾಳಿಕೆ ಕಾರಣದಿಂದಾಗಿ ಉನ್ನತ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ  ಅರ್ಜಿಯಲ್ಲಿ, ಶರ್ಮಾ ಮತ್ತು ಇತರರು ಹೇಳಿದ್ದರು. ಮಾಧ್ಯಮ ವರದಿಗಳನ್ನು ತಡೆಯುವ ಪ್ರಯತ್ನದಲ್ಲಿ ತಮ್ಮ ವಿರುದ್ಧ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ‌

Shakti Mills gangrape case: 3 ರೇಪಿಸ್ಟ್‌ಗಳ ಗಲ್ಲು ಶಿಕ್ಷೆ, ಜೀವಾವಧಿಯಾಗಿ ಬದಲು!

2013ರಲ್ಲಿ ಸೆಂಟ್ರಲ್‌ ಮುಂಬೈನ ಶಕ್ತಿಮಿಲ್ಸ್‌ ಆವರಣದಲ್ಲಿ 22 ವರ್ಷದ ಫೋಟೋ ಜರ್ನಲಿಸ್ಟ್ (Photo Journalist) ಮೇಲೆ ನಡೆದ ಸಾಮೂಹಿಕ ಅತ್ಯಾಚಾರ (Shakti Mills gangrape case) ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ (Bombay High Court) ಜೀವಾವಧಿ ಶಿಕ್ಷೆಗೆ ಇಳಿಸಿದೆ. ಈ ಪ್ರಕರಣದ ದೋಷಿಗಳಾದ ವಿಜಯ್‌ ಜಾಧವ್‌, ಮೊಹಮ್ಮದ್‌ ಕ್ವಾಸಿಂ ಬೆಂಗಾಲಿ ಶೇಖ್‌ ಮತ್ತು ಮೊಹಮ್ಮದ್‌ ಅನ್ಸಾರಿಗೆ 7 ವರ್ಷಗಳ ಹಿಂದೆಯೇ ವಿಚಾರಣಾಧೀನ ನ್ಯಾಯಾಲಯವೊಂದು ಗಲ್ಲು ಶಿಕ್ಷೆ (Death Penalty) ವಿಧಿಸಿತ್ತು. 

Brigadier LS Lidder Funeral: ದುಃಖಿಸದೆ ಬೀಳ್ಕೊಡುವೆ: ಹುತಾತ್ಮ ಬ್ರಿಗೇಡಿಯರ್‌ ಲಿಡ್ಡರ್‌ ಪತ್ನಿ ಭಾವುಕ ನುಡಿ

ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಅತ್ಯಾಚಾರವೆಸಗಿದ ದೋಷಿಗಳಿಗೆ ಮರಣದಂಡನೆ ವಿಧಿಸುವುದರಿಂದ ತಮ್ಮ ಕೃತ್ಯದ ಪಾಪಪ್ರಜ್ಞೆ ಕಾಡುವುದಿಲ್ಲ. ಹೀಗಾಗಿ ತಮ್ಮ ತಪ್ಪಿನ ಅರಿವಾಗಲು ಅವರು ಸಾಯುವವರೆಗೆ ಜೈಲು ಶಿಕ್ಷೆಗೆ ಅರ್ಹವಾಗಿದ್ದಾರೆ. ಇದರಿಂದ ಜೀವನದುದ್ದಕ್ಕೂ ಪಶ್ಚಾತ್ತಾಪ ಪಡುತ್ತಾರೆ ಎಂದಿದೆ.

ಮರಣದಂಡನೆ ಬದಲು

ನ್ಯಾಯಮೂರ್ತಿ ಸಾಧನಾ ಜಾಧವ್ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚೌಹಾಣ್ ಅವರ ವಿಭಾಗೀಯ ಪೀಠವು ಅಪರಾಧಿಗಳಾದ ವಿಜಯ್ ಜಾಧವ್, ಮೊಹಮ್ಮದ್ ಕಾಸಿಂ ಶೇಖ್ ಮತ್ತು ಮೊಹಮ್ಮದ್ ಅನ್ಸಾರಿ ಅವರಿಗೆ ನೀಡಲಾದ ಮರಣದಂಡನೆಯನ್ನು ಎತ್ತಿಹಿಡಿಯಲು ನಿರಾಕರಿಸಿತು. ಪೀಠವು ಆಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು

click me!