
ನವದೆಹಲಿ: ಪಾಕಿಸ್ತಾನದ ಮೇಲೆ ಭಾರತ ಇತ್ತೀಚೆಗೆ ನಡೆಸಿದ ದಾಳಿಗೆ ‘ಆಪರೇಷನ್ ಸಿಂದೂರ’ ಎಂದು ಹೆಸರಿಟ್ಟಿದ್ದಕ್ಕೆ ಎಸ್ಪಿ ಸಂಸದೆ, ನಟಿ ಜಯಾ ಬಚ್ಚನ್ ಆಕ್ಷೇಪಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಪಹಲ್ಗಾಂ ಉಗ್ರ ದಾಳಿಯು ಹಲವಾರು ಮಹಿಳೆಯರ ಸಿಂದೂರವನ್ನು ನಾಶಪಡಿಸಿದೆ. ಹೀಗಿದ್ದಾಗ ಕಾರ್ಯಾಚರಣೆಗೆ ಸಿಂದೂರ ಎಂದು ಹೆಸರಿಡುವ ಅಗತ್ಯವೇನಿತ್ತು? ನೀವು ನೇಮಿಸಿಕೊಂಡಿರುವ ಬರಹಗಾರರಿಗೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ’ ಎಂದರು. ಆಗ ಸದನದಲ್ಲಿ ಕೋಲಾಹಲ ಉಂಟಾಯಿತು. ಜಯಾ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಆಪರೇಷನ್ ಸಿಂದೂರ'ಕ್ಕೆ ಸಲ್ಮಾನ್ ಟ್ವೀಟ್
ಸಿನಿಮಾಗಳಲ್ಲಿ ಕೋಟಿಕೋಟಿ ಪಡೆದು ದೇಶಪ್ರೇಮದ ನಟನೆ ಮಾಡಿ, ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವನ್ನೇ ಪಡೆದುಕೊಳ್ಳುವ ಖಾನ್ ನಟರ ಬಂಡವಾಳ ಇದಾಗಲೇ ಬಟಾ ಬಯಲಾಗಿ ಹೋಗಿದೆ. 'ಆಪರೇಷನ್ ಸಿಂದೂರ' ವಾಗಿ ಇಷ್ಟು ದಿನವಾದರೂ ಒಂದೇ ಒಂದು ಮಾತನ್ನು ಬಾಲಿವುಡ್ನ ಈ ನಟರ ಬಾಯಿಯಿಂದ ಹೊರ ಬಂದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇಷ್ಟೆಲ್ಲಾ ಟ್ರೋಲ್ ಆಗುತ್ತಿದ್ದರೂ, ಪಾಕಿಸ್ತಾನದ ವಿರುದ್ಧ ಇವರಿಗೆ ಬಾಯಿಯೇ ಬರುತ್ತಿಲ್ಲ.
ಬಾಲಿವುಡ್ ನಟಿ ಫಲಕ್ ನಾಜ್ ಅವರು ಕೂಡ ಬಾಲಿವುಡ್ನ ಮುಸ್ಲಿಮ್ ನಟರ ವಿರುದ್ಧ ಕಿಡಿ ಕಾರಿದ್ದರು. 'ಥೂ ನಿಮ್ಮ ಜನ್ಮಕ್ಕೆ... ಸ್ವಲ್ಪನಾದ್ರೂ ನಾಚಿಕೆ ಇದ್ಯಾ? ನಿಮ್ಮನ್ನು ಇಂಡಸ್ಟ್ರಿಯ ಸಹೋದರರು ಎನ್ನಲು ನಾಚಿಕೆ ಆಗುತ್ತದೆ. ನಿಮ್ಮನ್ನು ನೀವು ಏನು ಅಂದುಕೊಂಡಿರುವಿರಿ? ಭಾರತದ ಅನ್ನ ಉಂಡು, ಇಂಥ ಸನ್ನಿವೇಶದಲ್ಲಿಯೂ ಒಂದೂ ಮಾತು ನಿಮ್ಮ ಬಾಯಿಂದ ದೇಶದ ಪರವಾಗಿ ಬರಲ್ಲ ಅಲ್ವಾ? ಎಲ್ಲಿ ನಿಮ್ಮ ಪಾಕಿಸ್ತಾನದ ಅಭಿಮಾನಿಗಳಿಗೆ ತೊಂದರೆ ಆಗತ್ತೆ ಎನ್ನುವ ಯೋಚನೆ ನಿಮಗೆ. ನನಗೂ ಪಾಕಿಸ್ತಾನದ ಫ್ಯಾನ್ಸ್ ಇದ್ದಾರೆ. ಆದರೆ ದೇಶಭಕ್ತಿ ಮೊದಲು ಅನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಈ ದೇಶದ ಮುಸ್ಲಿಮರು ಎನ್ನುವುದಕ್ಕೆ ನಾಚಿಕೆಯಾಗುತ್ತದೆ. ಈ ದೇಶದಲ್ಲಿ ಮುಸ್ಲಿಮರನ್ನು ಜನರು ಯಾಕೆ ನಂಬುವುದಿಲ್ಲ ಎಂದು ಯಾವಾಗಲೂ ಎನ್ನಿಸುತ್ತಿತ್ತು. ಈಗ ಅದು ಅರ್ಥವಾಗಿದೆ. ನಿಮ್ಮನ್ನು ನೋಡಿಯೇ ಎಲ್ಲರ ನಂಬಿಕೆಯೂ ಹೊರಟು ಹೋಗಿದೆ...' ಎನ್ನುತ್ತಲೇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ, ಇದರ ನಡುವೆಯೇ ಸಲ್ಮಾನ್ ಖಾನ್ ಈಗ ಎಲ್ಲಿ ಅಭಿಮಾನಿಗಳು ತಮ್ಮ ವಿರುದ್ಧ ತಿರುಗಿ ಬೀಳುತ್ತಾರೋ ಎನ್ನುವ ಕಾರಣಕ್ಕೆ, ಒಂದು ಟ್ವೀಟ್ ಮಾಡಿ ಮತ್ತಷ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಉಗ್ರರ ದಾಳಿಯ ಬಗ್ಗೆಯಾಗಲೀ, ಆಪರೇಷನ್ ಸಿಂದೂರದ ಬಳಿಕ ಪಾಕಿಸ್ತಾನದ ನೀಚ ಕೃತ್ಯದ ಬಗ್ಗೆಯಾಗಲೀ, ಹೋಗಲಿ ಕೊನೆಯ ಪಕ್ಷ ಭಾರತವನ್ನು ಸಪೋರ್ಟ್ ಮಾಡಿ, ನಮ್ಮ ಯೋಧರಿಗೆ ಶಹಬ್ಬಾಸ್ಗಿರಿ ಕೊಡುವುದಾಗಲೀ... ಹೂಂ... ಹೂಂ... ಯಾವುದೂ ಇಲ್ಲ. ಈಗ ಒಂದು ಟ್ವೀಟ್ ಮಾಡಿದ್ದಾರೆ. ಅದೇನೆಂದರೆ, 'ಕದನವಿರಾಮ ಘೋಷಣೆಯಾಗಿದ್ದಕ್ಕೆ ಥ್ಯಾಂಕ್ ಗಾಡ್' ಎಂದಿದ್ದಾರೆ. ಅಷ್ಟೇ. ಇನ್ನು ಇವರ ಬಗ್ಗೆ ಜಾಲತಾಣದಲ್ಲಿ ಉರಿ ಹೊತ್ತಿಕೊಳ್ಳದೇ ಇರುತ್ತದೆಯಾ? ಹಿಗ್ಗಾಮುಗ್ಗಾ ಟ್ರೋಲ್ಗೆ ಒಳಗಾದ ಬಳಿಕ ಈಗ ಅವರು ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ