ಅರವಿಂದ್ ಕೇಜ್ರಿವಾಲ್‌ಗೆ ಸಿಗದ ಮಧ್ಯಂತರ ರಿಲೀಫ್ - ನಾಳೆ ಮತ್ತೆ ತಿಹಾರ್ ಜೈಲಿಗೆ ರಿಟರ್ನ್

By Mahmad Rafik  |  First Published Jun 1, 2024, 5:32 PM IST

ಸಿಎಂ ಅರವಿಂದ್ ಕೇಜ್ರಿವಾಲ್ ಪಡೆದುಕೊಂಡಿರುವ ಮಧ್ಯಂತರ ಜಾಮೀನು ಜೂನ್ 1ರಂದು ಮುಕ್ತಾಯವಾಗಲಿದೆ. ಭಾನುವಾರ (ಜೂನ್ 2) ತಿಹಾರ್ ಜೈಲಾಧಿಕಾರಿಗಳ ಮುಂದೆ ಅರವಿಂದ್ ಕೇಜ್ರಿವಾಲ್ ಹಾಜರಾಗಬೇಕಿದೆ.


ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ನಾಳೆ ಮತ್ತೆ (ಜೂನ್ 2) ತಿಹಾರ್ ಜೈಲಿಗೆ ಹಿಂದಿರುಗಬೇಕಿದೆ. ನ್ಯಾಯಾಲಯ ಮಧ್ಯಂತರ ಜಾಮೀನು ಅರ್ಜಿಯ (Interim bail) ಆದೇಶವನ್ನು ಜೂನ್ 5ಕ್ಕೆ ಕಾಯ್ದಿರಿಸಿದೆ. ಈ ಹಿನ್ನೆಲೆ ಮಧ್ಯಂತರ ಜಾಮೀನು ಪಡೆದುಕೊಂಡಿರುವ ಸಿಎಂ ಕೇಜ್ರಿವಾಲ್ ತಿಹಾರ್ ಜೈಲಿಗೆ (Tihar Jail) ಹಿಂದಿರುಗಬೇಕಿದೆ. ವೈದ್ಯಕೀಯ ಕಾರಣ ನೀಡಿ ಒಂದು ವಾರದ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅರವಿಂದ್ ಕೇಜ್ರಿವಾಲ್ ಅನಾರೋಗ್ಯದಿಂದ ಬಳಲುತ್ತಿದ್ದು  ಚಿಕಿತ್ಸೆಯ ಅಗತ್ಯವಿದೆ ಎಂದು ಸಿಎಂ ಆಪ್ತರು ಹೇಳಿದ್ದಾರೆ. 

ಆಪ್ ನಾಯಕರು ಸಲ್ಲಿಸಿದ್ದ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದ ಜಾರಿ ನಿರ್ದೇಶನಾಲಯ (Enforcement Directorate), ಎಎಪಿ ನಾಯಕರು ಅರವಿಂದ್ ಕೇಜ್ರಿವಾಲ್ ಆರೋಗ್ಯದ ಕುರಿತು ಸುಳ್ಳು ಮಾಹಿತಿ ನೀಡಿದ್ದು, ಸತ್ಯವನ್ನು ಮರೆಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿತ್ತು. ಅರವಿಂದ್ ಕೇಜ್ರಿವಾಲ್ ಅವರನ್ನು ಬೇಕಿದ್ರೆ ನಾವೇ ದೆಹಲಿಯ ಏಮ್ಸ್ (All India Institute of Medical Science) ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇವೆ. ಅವಶ್ಯಕತೆ ಬಿದ್ರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಸಿದ್ಧ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮುಂದೆ ತನ್ನ ವಾದವನ್ನು ಮಂಡಿಸಿತ್ತು.

Tap to resize

Latest Videos

ಲೋಕಸಮರದಲ್ಲಿ ಹುಟ್ಟಿಕೊಂಡಿದೆ ಹೊಸ ಲೆಕ್ಕಾಚಾರ! ಅಮಿತ್ ಶಾಗೆ ಪಟ್ಟಕಟ್ಟಲು ಮೋದಿ ಪ್ರಯತ್ನ?

ಇಂದು ಮಧ್ಯಂತರ ಜಾಮೀನು ಅವಧಿ ಮುಕ್ತಾಯ 

ಸಿಎಂ ಅರವಿಂದ್ ಕೇಜ್ರಿವಾಲ್ ಪಡೆದುಕೊಂಡಿರುವ ಮಧ್ಯಂತರ ಜಾಮೀನು ಜೂನ್ 1ರಂದು ಮುಕ್ತಾಯವಾಗಲಿದೆ. ಭಾನುವಾರ (ಜೂನ್ 2) ತಿಹಾರ್ ಜೈಲಾಧಿಕಾರಿಗಳ ಮುಂದೆ ಅರವಿಂದ್ ಕೇಜ್ರಿವಾಲ್ ಹಾಜರಾಗಬೇಕಿದೆ. ವೈದ್ಯಕೀಯ ಪರೀಕ್ಷೆಗಳಿಗಾಗಿ ಏಳು ದಿನದ ಜಾಮೀನು ವಿಸ್ತರಣೆ ಮಾಡಬೇಕೆಂದು ಎಎಪಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ತುರ್ತಾಗಿ ಅರ್ಜಿ ವಿಚಾರಣೆ ನಡೆಲು ನಿರಾಕರಿಸಿತ್ತು. ಈ ಹಿನ್ನೆಲೆ ಎಎಪಿ ದೆಹಲಿ ಕೋರ್ಟ್ ಮೊರೆ ಹೋಗಿತ್ತು. ಅರವಿಂದ್ ಕೇಜ್ರಿವಾಲ್ ನಿಯಮಿತ ಜಾಮೀನು ಪಡೆಯಲು ವಿಚಾರಣಾ ನ್ಯಾಯಾಲಯದಲ್ಲಿ ಅವಕಾಶವಿದೆ. ಹಾಗಾಗಿ ಈ ಮನವಿಯನ್ನು ಪರಗಣಿಸಲಾಗುವುದಿಲ್ಲ ಎಂದು ದೆಹಲಿ ಕೋರ್ಟ್ ಹೇಳಿತ್ತು. 

ನಾನು ಯಾವುದಕ್ಕೂ ಹೆದರಲ್ಲ

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್, ಜೂನ್ 2ರಂದು ತಿಹಾರಿನ ಜೈಲಾಧಿಕಾರಿಗಳ ಮುಂದೆ ಶರಣಾಗೋದಾಗಿ ಹೇಳಿದ್ದಾರೆ. ನಾನು ಜೈಲಿಗೆ ಹೋದ ಬಳಿಕ ವಯಸ್ಸಾದ ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದರು. ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ತಿಹಾರ್ ಜೈಲಿಗೆ ಹೋಗುತ್ತೇನೆ. ಈ ಬಾರಿ ನನ್ನನ್ನು ಮತ್ತಷ್ಟು ಹಿಂಸಿಸಬಹುದು. ಆದ್ರೆ ನಾನು ಯಾವುದಕ್ಕೂ ಹೆದರಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ಪ್ರಧಾನಿ ಮೋದಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಡ್ಕೊಂಡ್ರು ಮನವಿ!

ನನ್ನ ಅನುಪಸ್ಥಿತಿಯಲ್ಲಿ ಸಚಿವರು ಮತ್ತು ಪಕ್ಷದ ಮುಖಂಡರು ದೆಹಲಿಯ ಜನತೆಗಾಗಿ ಕೆಲಸ ಮಾಡಲಿದ್ದಾರೆ. ನಾನು ನಿಮ್ಮ ನಡುವೆ ಇರಲ್ಲ ಎಂದು ಚಿಂತಿಸಬೇಡಿ. ಎಲ್ಲಾ ಕೆಲಸಗಳು ನಡೆಯುತ್ತವೆ. ಪ್ರತಿ ತಾಯಿ ಮತ್ತು ಸಹೋದರಿಗೆ ತಿಂಗಳಿಗೆ 1000 ರೂಪಾಯಿಗಳನ್ನು ನೀಡಲು ಪ್ರಾರಂಭಿಸುತ್ತೇನೆ. ನೀವೆಲ್ಲರೂ ಖುಷಿಯಾಗಿದ್ರೆ ನಾನು ಸಹ ಸಂತೋಷವಾಗಿರುತ್ತೇನೆ ಎಂದು ಅರವಿಂದ್ ಕೇಜ್ರಿವಾಲ್ ಭಾವನಾತ್ಮಕವಾಗಿ ಮಾತನಾಡಿದರು. 

click me!