
ಶ್ರೀನಗರ(ಜು.5): ಜಮ್ಮು ಕಾಶ್ಮೀರ(Jammu&Kashmir)ದಲ್ಲಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಪ್ರತ್ಯೇಕವಾದ ವೈಭವೀಕರಿಸುವಂತಹ ವಿಚಾರಗಳನ್ನು ಸೇರಿಸಿದ್ದಕ್ಕೆ ಶಿಕ್ಷಣ ಇಲಾಖೆಯ 8 ಹೊರ ಗುತ್ತಿಗೆ ಸಿಬ್ಬಂದಿಯನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಜಾಗೊಳಿಸಿದ್ದಾರೆ.
ಪರ್ಸನಾಲಿಟೀಸ್ ಅಂಡ್ ಲೆಜೆಂಡ್ಸ್ ಆಫ್ ಜಮ್ಮು ಕಾಶ್ಮೀರ(Personalities and Legends of Jammu & Kashmir), ಗ್ರೇಟ್ ಪರ್ಸನಾಲಿಟೀಸ್ ಆಫ್ ಜಮ್ಮು ಮತ್ತು ಕಾಶ್ಮೀರ(Great Personalities of Jammu and Kashmir Book) ಎಂಬ ಪುಸ್ತಕದಲ್ಲಿ ಮಕ್ಯೂಲ್ ಭಟ್, ಸೈಯದ್ ಅಲಿ ಶಾ ಗಿಲಾನಿ, ಮಸರತ್ ಆಲಂ ಮತ್ತು ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಅವರಂತಹ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ಯುವ ಪೀಳಿಗೆಗೆ ಮಾದರಿಗಳಾಗಿ ವೈಭವೀಕರಿಸಲಾಗಿದೆ. ಈ ಬಗ್ಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಆಕ್ಷೇಪಿಸಿದ್ದವು. ಇದರ ಬೆನ್ನಲ್ಲೇ ಸರ್ಕಾರ ಆ ಪುಸ್ತಕಗಳನ್ನು ವಾಪಸ್ ಪಡೆದಿದೆ. ಮಾತ್ರವಲ್ಲದೇ ಪುಸ್ತಕ ರಚನೆಯಲ್ಲಿ ಭಾಗಿಯಾಗಿದ್ದವರನ್ನು ವಜಾಗೊಳಿಸಿದೆ.
ಶಾಲಾ ಪಠ್ಯಪುಸ್ತಕದಲ್ಲಿ ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸುವ ಪಾಠದ ಬದಲು ಜಮ್ಮುಕಾಶ್ಮೀರ ಮಕ್ಕಳ ತಲೆಯಲ್ಲಿ ಇನ್ನಷ್ಟು ಪ್ರತ್ಯೇಕವಾದ ಕಸ ತುಂಬುವ ಭಾರತವನ್ನು ವಿಭಜಿಸಲು ಸಂಚು ರೂಪಿಸಲಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಇದರಲ್ಲಿ ಭಾಗಿಯಾದವರನ್ನ ಬಂಧಿಸಿ ವಿಚಾರಣೆಗೊಳಪಡಿಸಕು, ಇದರ ಹಿಂದೆ ವ್ಯವಸ್ಥಿತ ಸಂಚಿದೆ, ಯಾರಿದ್ದಾರೆ? ತನಿಖೆಗೊಳಪಡಿಸಬೇಕು ಆಗ್ರಹಿಸಿದೆ.
ಇದೊಂದು ವ್ಯವಸ್ಥಿತ ಶೈಕ್ಷಣಿಕ ಜಿಹಾದ್ ಆಗಿದ್ದು, ಚಿಕ್ಕ ವಯಸಿನಲ್ಲೇ ಮಕ್ಕಳ ತಲೆಯಲ್ಲಿ ಪ್ರತ್ಯೇಕತಾವಾದ ತುಂಬುವ ಪ್ರಯತ್ನವಾಗಿದೆ. ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರ ತಮ್ಮ ಇಲಾಖೆಯ ಶಿಕ್ಷಣ ಸಚಿವೆ ಸಕೀನಾ ಇಟೂ ಅವರನ್ನು ವಜಾಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ