ಡಾಂಬರ್ ಹಾಕಿದ ಹೊಸ ರಸ್ತೆ ನಾಲ್ಕೇ ದಿನದಲ್ಲಿ ಗುಂಡಿಮಯ! ಒಂದೇ ಮಳೆಗೆ ಬಯಲಾಯ್ತು ಕಾಮಗಾರಿ ಅಸಲಿ ಕಥೆ!

Published : Jul 05, 2026, 11:14 AM IST
Newly asphalted Hadapsar mundhwa road caves in within four days raising safety concerns

ಸಾರಾಂಶ

ಪುಣೆಯಲ್ಲಿ ಹೊಸದಾಗಿ ನಿರ್ಮಿಸಿದ ಹಡಪ್ಸರ್–ಮುಂಧ್ವಾ ರಸ್ತೆಯು, ಕೇವಲ ನಾಲ್ಕೇ ದಿನದಲ್ಲಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. ಈ ಕಳಪೆ ಕಾಮಗಾರಿಯಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿದ್ದು, ಪುಣೆ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ (ಜು.5): ಮಹಾರಾಷ್ಟ್ರದಲ್ಲಿ ಪುಣೆಯಲ್ಲಿ ಹೊಸದಾಗಿ ರಸ್ತೆ ನಿರ್ಮಿಸಿ ಡಾಂಬರ್ ಹಾಕುವ ಕೆಲಸ ಮುಗಿಸಿದ ಕೇವಲ ನಾಲ್ಕೇ ದಿನದಲ್ಲಿ ನಿನ್ನೆ ಸುರಿದ ಮಳೆಗೆ ರಸ್ತೆಯ ತುಂಬಾ ಹೊಂಡ-ಗುಂಡಿಗಳು ಬಿದ್ದಿರುವುದು ಮಹಾರಾಷ್ಟ್ರದಾದ್ಯಂತ ರಸ್ತೆಯ ಗುಣಮಟ್ಟದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಹಳೆ ರಸ್ತೆ ಮಳೆಗೆ ಗುಂಡಿ ಬಿದ್ದಿದೆ ಎನ್ನಬಹುದು ಆದರೆ ರಸ್ತೆ ನಿರ್ಮಿಸಿ ಕೇವಲ ವಾರದೊಳಗೆ ಸುರಿದ ಒಂದು ಮಳೆಗೆ ರಸ್ತೆ ಈ ಪ್ರಮಾಣದಲ್ಲಿ ಗುಂಡಿ ಬಿದ್ದಿದೆ ಎಂದರೆ ಇದು ಯಾವ ರೀತಿ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸಿರಹುದು ಎಂದು ಪ್ರಶ್ನೆಗಳು ಕೇಳಿಬಂದಿವೆ.

ಹಡಪ್ಸರ್-ಮುಂಧ್ವಾ ರಸ್ತೆ:

ಹಡಪ್ಸರ್–ಮುಂಧ್ವಾ ರಸ್ತೆಯ ಒಂದು ಭಾಗದಲ್ಲಿ ಡಾಂಬರ್ ಹಾಕಿ ಕೆಲವೇ ದಿನಗಳಾಗಿವೆ. ಈಗ ಈ ರಸ್ತೆ ಪ್ರಯಾಣ ಮಾಡಲು ಯೋಗ್ಯವಲ್ಲದ ರೀತಿ ರಸ್ತೆ ಮೇಲೆ ಗುಂಡಿಗಳು ತುಂಬಿವೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸುವುದು ಅಪಾಯಕಾರಿ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ನಿರ್ಮಿಸಿದ ರಸ್ತೆ ಇಷ್ಟು ಹಾಳಾಗುವುದು ಹೇಗೆ ಸಾಧ್ಯ? ಒಂದೋ ಕಾಮಗಾರಿ ಗುಣಮಟ್ಟ ಸರಿಯಾಗಿಲ್ಲ. ಬೇಕಾಬಿಟ್ಟಿಯಾಗಿ ನಿರ್ಮಿಸಿ ಮೇಲೆ ಡಾಂಬರ್ ಹಾಕಿರುವ ಸಾಧ್ಯತೆ ಹೆಚ್ಚಿದೆ. ರಸ್ತೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ ತಕ್ಷಣ ಈ ಬಗ್ಗೆ ತನಿಖೆ ಮಾಡಿ, ರಸ್ತೆ ಆದಷ್ಟು ಬೇಗ ದುರಸ್ತಿ ಮಾಡುವಂತೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಪುಣೆ ಮಹಾನಗರ ಪಾಲಿಕೆ ವಿರುದ್ಧ ಕಿಡಿ

ಈ ಘಟನೆ ಬಳಿಕ ಪುಣೆ ಮಹಾನಗರ ಪಾಲಿಕೆ (PMC) ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಮಳೆಗಾಲಕ್ಕೂ ಮುನ್ನ ನಡೆದ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಬೇಕೆಂದು ಒತ್ತಾಯಿಸಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಲೆ ಕೇಸ್ ತನಿಖೆ ನಡೆಯುತ್ತಿರುವಾಗಲೇ ಕೇತನ್ ಅಗರ್ವಾಲ್ ಕುಟುಂಬದಲ್ಲಿ ಮತ್ತೊಂದು ಸಾವು
ರೈಲುಗಳಿಗೂ ನಿವೃತ್ತಿ ಇದೆಯಾ? ಹಳೆಯ ರೈಲುಗಳನ್ನು ಏನು ಮಾಡುತ್ತಾರೆ? ಇಲ್ಲಿದೆ ಮಾಹಿತಿ