
ನವದೆಹಲಿ: ಇಸ್ಲಾಂ ಧರ್ಮ ಭಾರತಕ್ಕೆ ಬಂದಿದ್ದಲ್ಲ. ಅದು ಸೃಷ್ಟಿಯಾಗಿದ್ದೇ ಭಾರತದಲ್ಲಿ ಎಂದು ಇಸ್ಲಾಮಿಕ್ ವಿದ್ವಾಂಸರ ಮುಂಚೂಣಿ ಸಂಸ್ಥೆಯಾದ, ಶತಮಾನಗಳಷ್ಟು ಹಳೆಯದಾದ ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಪ್ರತಿಪಾದಿಸಿದ್ದಾರೆ.
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಶುಕ್ರವಾರ ನಡೆದ ಜಮಿಯತ್‌ನ 34ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮದನಿ, ಈ ನೆಲದ ವಿಶೇಷತೆ ಏನೆಂದರೆ, ಇದು ಖುದಾ ಅಬು- ಅಲ್- ಬಷರ್‌ನ ಮೊದಲ ಪೈಗಂಬರರ ಭೂಮಿ. ಅವರು ಮೊದಲು ಬಂದಿದ್ದೇ ಇಲ್ಲಿಗೆ. ಇದು ಇಸ್ಲಾಂನ ಜನ್ಮಭೂಮಿ. ಮುಸ್ಲಿಮರ ಮೊದಲ ತಾಯ್ನಾಡು. ಹೀಗಾಗಿ ಇಸ್ಲಾಮ್ (Islam) ಬೇರೆ ಕಡೆಯಿಂದ ಬಂತು ಎಂದು ಹೇಳುವುದು ಅಥವಾ ಯೋಚಿಸುವುದು ಸಂಪೂರ್ಣ ತಪ್ಪು ಹಾಗೂ ಆಧಾರ ರಹಿತ. ಇಸ್ಲಾಂ ಎಂಬುದು ಈ ದೇಶದ ಧರ್ಮ. ಎಲ್ಲ ಧರ್ಮಗಳಿಗಿಂತ ಅತ್ಯಂತ ಹಳೆಯ ಧರ್ಮ. ಹೀಗಾಗಿ ಭಾರತ ಎಂಬುದು ಹಿಂದಿ ಮುಸ್ಲಿಮರಿಗೆ ಅತ್ಯುತ್ತಮ ದೇಶ ಎಂದು ಹೇಳುತ್ತೇನೆ ಎಂದು ತಿಳಿಸಿದರು.
Udupi: ಪುತ್ತಿಗೆ ಶ್ರೀ ಕೈಯಲ್ಲಿ ಇಸ್ಲಾಂ ಪುಸ್ತಕ! ಈ ವಿವಾದದ ರಹಸ್ಯವೇನು ಗೊತ್ತಾ?
ಮುಸ್ಲಿಮರ ಬಗ್ಗೆ ಪೂರ್ವಾಗ್ರಹ, ದ್ವೇಷ ಹೆಚ್ಚುತ್ತಿದೆ. ಅಲ್ಪಸಂಖ್ಯಾತರ (minorities) ವಿರುದ್ಧ ಹಿಂಸೆಗೆ ಕುಮ್ಮಕ್ಕು ನೀಡುವವರ ವಿರುದ್ಧ ಪ್ರತ್ಯೇಕ ಕಾನೂನುವೊಂದನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.
ಮೋದಿ ಭಾಗವತ್‌ಗೆ ಸೇರಿದಷ್ಟೇ ಭಾರತ ನನಗೂ ಸೇರಿದ್ದು,
ಭಾರತ ನಮ್ಮ ದೇಶ ಇದು ನಮಗೆ ಸೇರಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಈ ದೇಶ ಎಷ್ಟು ಸಂಬಂಧಿಸಿದೆಯೋ ಅಷ್ಟೇ ಮೊಹಮ್ಮದ್‌ಗೂ ಸಂಬಂಧಿಸಿದೆ. ಈ ವಿಷಯದಲ್ಲಿ ಅವರಿಗಿಂತ ಒಂದಿಂಚು ಹೆಚ್ಚಿಲ್ಲ, ಕಡಿಮೆ ಇಲ್ಲ, ಅಥವಾ ಅವರು ಮಹಮ್ಮದ್‌ಗಿಂತ ಒಂದಿಂಚು ಹೆಚ್ಚು ಕಡಿಮೆ ಇಲ್ಲ ಎಂದು ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೊಹಮ್ಮದ್ ಮದನಿ ಹೇಳಿದ್ದಾರೆ.
ನಾನು ಇಸ್ಲಾಂ ಧರ್ಮ ಅನುಸರಿಸುತ್ತಿಲ್ಲ; ಧರ್ಮವನ್ನು ಟಾರ್ಗೇಟ್ ಮಾಡಿದವರಿಗೆ ಉರ್ಫಿ ಖಡಕ್ ತಿರುಗೇಟು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ