ಹರಿಯಾಣದಲ್ಲಿ ವೈದ್ಯರು ಜೀನ್ಸ್‌, ಬ್ಯಾಕ್‌ಲೆಸ್‌ ಟಾಪ್‌, ಸ್ಕರ್ಟ್‌ ಧರಿಸೋ ಹಾಗಿಲ್ಲ!

Published : Feb 11, 2023, 05:29 PM IST
ಹರಿಯಾಣದಲ್ಲಿ ವೈದ್ಯರು ಜೀನ್ಸ್‌, ಬ್ಯಾಕ್‌ಲೆಸ್‌ ಟಾಪ್‌, ಸ್ಕರ್ಟ್‌ ಧರಿಸೋ ಹಾಗಿಲ್ಲ!

ಸಾರಾಂಶ

ಹರಿಯಾಣದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಡ್ರೆಸ್‌ ಕೋಡ್‌ಅನ್ನು ಜಾರಿ ಮಾಡಲಾಗಿದೆ. ಮಹಿಳಾ ವೈದ್ಯರು ಸ್ಟೈಲಿಶ್‌ ಆದ ಡ್ರೆಸ್‌ಗಳನ್ನು ಧರಿಸುವಂತಿಲ್ಲ. ಆಭರಣಗಳು ಹಾಗು ಉದ್ದ ಉಗುರುಗಳನ್ನು ಬಿಡುವಂತಿಲ್ಲ ಎಂದು ಹೇಳಲಾಗಿದೆ. ಇನ್ನು ಪುರುಷ ವೈದ್ಯರು ಜೀನ್ಸ್‌, ಟಿಶರ್ಟ್‌ ಹಾಗೂ ಸ್ಲಿಪ್ಪರ್‌ಗಳನ್ನು ಧರಿಸಿ ಬರುವಂತಿಲ್ಲ ಎಂದು ಆದೇಶ ನೀಡಲಾಗಿದೆ.

ಚಂಡೀಗಢ (ಫೆ.11): ಕರ್ನಾಟಕದಲ್ಲಿ ಶಾಲೆಗಳಲ್ಲಿ ಸಮವಸ್ತ್ರ ಧರಿಸೋ ವಿಚಾರ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಇರುವಾಗಲೇ ಹರಿಯಾಣ ಸರ್ಕಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಹರಿಯಾಣದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಫ್ಯಾಶನ್‌ ಎನಿಸಿಕೊಳ್ಳುವ ಬಟ್ಟೆಗಳನ್ನು ಧರಿಸುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸರ್ಕಾರ ಡ್ರೆಸ್‌ ಕೋಡ್‌ ಜಾರಿ ಮಾಡಿದೆ. ಫ್ಯಾಶನ್‌ ಬಟ್ಟೆಗಳಾದ ಜೀನ್ಸ್‌, ಪಲಾಜೋ, ಬ್ಯಾಕ್‌ಲೆಸ್‌ ಟಾಪ್‌, ಸ್ಕರ್ಟ್‌ಗಳನ್ನು ಆಸ್ಪತ್ರೆ ಆವರಣದಲ್ಲಿ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಡ್ರೆಸ್‌ ಕೋಡ್‌ ಮಾತ್ರವಲ್ಲ, ಹೇರ್‌ಸ್ಟೈಲ್‌ ಕೂಡ ಹೀಗೇ ಇರಬೇಕು ಎಂದು ಇಲಾಖೆ ಹೇಳಿದೆ. ಬೇಕಾಬಿಟ್ಟಿಯಾಗಿ ತಲೆಗೂದಲನ್ನು ಬಿಟ್ಟು ಬರೋದಿಕ್ಕೆ ನಿಷೇಧ ಹೇರಿದೆ. ಪುರುಷರಿಗೆ ಶರ್ಟ್‌ನ ಕಾಲರ್‌ಗಿಂತ ಕೆಳಗೆ ಕೂದಲು ಬರಬಾರದು ಎಂದು ಹೇಳಿದ್ದರೆ. ಮಹಿಳಾ ವೈದ್ಯರು ಸ್ಟೈಲಿಶ್‌ ಡ್ರೆಸ್‌, ಭಾರೀ ಆಭರಣಗಳು ಹಾಗೂ ಮೇಕಪ್‌ ಮಾಡಿಕೊಂಡು ಬರುವಂತಿಲ್ಲ ಎನ್ನಲಾಗಿದೆ. ಇನ್ನು ಅವರ ಕೈಬೆರಳಿನ ಉಗುರುಗಳು ಕೂಡ ಬಹಳ ಉದ್ದವಾಗಿ ಇರುವಂತಿಲ್ಲ. ಡ್ರೆಸ್ ಕೋಡ್ ಪಾಲಿಸದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಗೈರುಹಾಜರೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಹೊಸ ಡ್ರೆಸ್‌ ಕೋಡ್‌ನಲ್ಲಿ ಯಾವುದೇ ಬಣ್ಣದ ಜೀನ್ಸ್‌, ಡೆನಿಮ್‌ ಸ್ಕರ್ಟ್‌ಗಳು, ಡೆನಿಮ್‌ ಡ್ರೆಸ್ಗಳು, ಸ್ವೆಟ್‌ ಶರ್ಟ್‌ಗಳು, ಶಾರ್ಟ್‌, ಸ್ಲಾಕ್ಸ್‌ ಡ್ರೆಸ್‌, ಸ್ಕರ್ಟ್‌, ಪಲಾಜೋ, ಸ್ಟ್ರೆಚ್‌ ಟಿಶರ್ಟ್‌ ಹಾಗೂ ಪ್ಯಾಂಟ್‌, ಫಿಟ್ಟಿಂಗ್ ಪ್ಯಾಂಟ್‌, ಕ್ಯಾಪ್ರಿ, ಹಿಪ್‌ ಹಗ್ಗರ್‌ ಸ್ವೆಟ್‌ ಪ್ಯಾಂಟ್‌, ಸ್ಟ್ರಾಪ್‌ಲೆಸ್‌ ಅಥವಾ ಬ್ಯಾಕ್‌ಲೆಸ್‌ ಟಾಪ್‌, ಕ್ರಾಪ್‌ ಟಾಪ್‌, ಶಾರ್ಟ್‌ ಟಾಪ್‌ ಫ್ರಂ ವೈಸ್ಟ್‌ ಲೈನ್‌, ಡೀಪ್‌ ನೆಕ್‌ ಟಾಪ್‌, ಟ್ಯಾಂಕ್‌ ಟಾಪ್‌, ಆಫ್‌ ಶೋಲ್ಡರ್‌ ಬ್ಲೌಸ್‌ ಹಾಗೂ ಸ್ನೀಕರ್‌ ಸ್ಲಿಪ್ಪರ್‌ಗಳನ್ನು ಆಸ್ಪತ್ರೆಯ ವೈದ್ಯರಾಗಲಿ ಸಿಬ್ಬಂದಿಗಳಾಗಲಿ ಧರಿಸುವಂತಿಲ್ಲ ಎನ್ನಲಾಗಿದೆ.

ಡ್ರೆಸ್‌ ಕೋಡ್‌ ಸೂಚನೆಗಳು: ಭದ್ರತೆ, ಸಾರಿಗೆ, ಸ್ವಚ್ಛತೆ ಮತ್ತು ಅಡುಗೆ ಸಿಬ್ಬಂದಿ ಸಮವಸ್ತ್ರದಲ್ಲಿ ಇರುವುದು ಕಡ್ಡಾಯ. ಆಸ್ಪತ್ರೆ ಸಿಬ್ಬಂದಿಗೆ ನೇಮ್‌ಪ್ಲೇಟ್‌ ಕಡ್ಡಾಯ. ಇದರಲ್ಲಿ ಉದ್ಯೋಗಿಯ ಹೆಸರು ಮತ್ತು ಸ್ಥಾನವನ್ನು ಹೊಂದಿರುವುದು ಕಡ್ಡಾಯವಾಗಿದೆ. ನರ್ಸಿಂಗ್ ಸಿಬ್ಬಂದಿ ಹೊರತುಪಡಿಸಿ, ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಅನ್ನು ಉಳಿದವರು ಧರಿಸಬಹುದು. ಬಟ್ಟೆ ತುಂಬಾ ತೆರೆದಿರಬಾರದು ಅಥವಾ ಬಿಗಿಯಾಗಿರಬಾರದು. ವಿಶೇಷವಾದ ಹೇರ್‌ಸ್ಟೈಲ್‌ ಹಾಗೂ ಹೇರ್‌ಕಟ್‌ ಮಾಡುವ ಹಾಗಿಲ್ಲ. ಡ್ರೆಸ್ ಕೋಡ್‌ಗೆ ಬಣ್ಣವನ್ನು ನಿರ್ಧರಿಸುವ ಹಕ್ಕನ್ನು ಸಿವಿಲ್ ಸರ್ಜನ್‌ಗಳಿಗೆ ನೀಡಲಾಗಿದೆ.

ಡ್ರೆಸ್‌ ಕೋಡ್‌ ಮಾಡಲು ಕಾರಣವೇನು: ಆಸ್ಪತ್ರೆಯ ರೋಗಿಗಳಿಂದಲೇ ಈ ಕುರಿತಾಗಿ ದೂರು ದಾಖಲಾಗಿದ್ದವು. ವೈದ್ಯರು ಹಾಗೂ ಸಿಬ್ಬಂದಿಗಳು ಆಸ್ಪತ್ರೆಯ ಶುದ್ಧ ಡ್ರೆಸ್‌ಗಳ ಬದಲಿಗೆ, ಪಲಾಜೋ, ಎಂಬ್ರಾಯ್ಡರಿ ಸೂಟ್‌, ಪೈಜಾಮಾ ಟಾಪ್‌, ಶಾರ್ಟ್‌ ಕುರ್ತಾ, ಬಿಗಿಯಾದ ಟಿ ಶರ್ಟ್‌ ಧರಿಸಿ ಮಹಿಳಾ ವೈದ್ಯರು ಬರುತ್ತಿದ್ದರು. ಪುರುಷರ ವೈದ್ಯರು, ಜೀನ್ಸ್‌, ಟಿ ಶರ್ಟ್‌, ಸ್ಪೋರ್ಟ್ಸ್‌ ಶೂ, ಸ್ನೀಕರ್ಸ್‌ ಧರಿಸಿ ಆಸ್ಪತ್ರೆಗೆ ಬರುತ್ತಿದ್ದರು. ಇದು ಅತಿಯಾದ ಕಾರಣ ಈ ನಿರ್ಧಾರ ಮಾಡಲಾಗಿದೆ.

 

ಶಿವ 'ತಪಸ್ವಿ' ಅದಕ್ಕಾಗಿ ಆರೆಸ್ಸೆಸ್‌ 'ಹರ್ ಹರ್‌ ಮಹಾದೇವ್‌' ಅನ್ನೋದಿಲ್ಲ: ರಾಹುಲ್‌ ಗಾಂಧಿ!

ಎಲ್ಲಾ ಉದ್ಯೋಗಿಗಳಿಗೆ ನಿಯಮಗಳು ಅನ್ವಯಿಸುತ್ತವೆ: ಹರಿಯಾಣ ಸರ್ಕಾರದ ಈ ಆದೇಶವು ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಗುತ್ತಿಗೆ ನೌಕರರು ಮತ್ತು ಆಸ್ಪತ್ರೆಯ ಸಿಬ್ಬಂದಿ ಸಹ ಇದನ್ನು ಅನುಸರಿಸಬೇಕು. ಕ್ಲಿನಿಕಲ್ ಮತ್ತು ಪ್ಯಾರಾಮೆಡಿಕಲ್ ಹೊರತುಪಡಿಸಿ, ಸ್ವಚ್ಛತೆ, ಭದ್ರತೆ, ಸಾರಿಗೆ, ತಾಂತ್ರಿಕ ಮತ್ತು ಅಡುಗೆಮನೆಯಲ್ಲಿ ಕೆಲಸ ಮಾಡುವವರಿಗೆ ಸಮವಸ್ತ್ರ ಅಗತ್ಯ. ಆಡಳಿತಾತ್ಮಕ ಕೆಲಸಗಳನ್ನು ನೋಡಿಕೊಳ್ಳುವ ಅಧಿಕಾರಿಗಳು ಕೂಡ ಫಾರ್ಮಲ್‌ ಡ್ರೆಸ್‌ಗಳನ್ನು ಧರಿಸಬೇಕು ಎನ್ನಲಾಗಿದೆ.

 

ಹರಿಯಾಣದ ಕ್ರೀಡಾ ಸಚಿವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ವೈದ್ಯರು ಯಾರು, ರೋಗಿಗಳು ಯಾರು ಅನ್ನೋದೇ ಗೊತ್ತಾಗೋದಿಲ್ಲ: ಹರಿಯಾಣದ ಆರೋಗ್ಯ ಸಚಿವ ಈ ಬಗ್ಗೆ ಮಾತನಾಡಿದ್ದು, ಖಾಸಗಿ ಆಸ್ಪತ್ರೆಗೆ ಹೋಗಿ ನೋಡಿ, ಒಬ್ಬನೇ ಒಬ್ಬ ಉದ್ಯೋಗಿ ಸಮವಸ್ತ್ರ ಇಲ್ಲದೆ ಕಾಣಿಸೋದಿಲ್ಲ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಯಾರು, ರೋಗಿಗಳು ಯಾರು ಅನ್ನೋದೇ ಗೊತ್ತಾಗೋದಿಲ್ಲ. ಹಾಗಾಗಿ ಸಿಬ್ಬಂದಿಗಳಿಗೆ ಡ್ರೆಸ್‌ ಕೋಡ್‌ ಜಾರಿ ಮಾಡಿದ್ದೇವೆ. ಡ್ರೆಸ್‌ ಕೋಡ್‌ ಅನ್ನು ನಾವು ವಿನ್ಯಾಸ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..