ಪರಶುರಾಮ ಸೃಷ್ಟಿಯ ನಾಡು ಎಂದೇ ವಿಶ್ವದಲ್ಲಿ ಪ್ರಸಿದ್ಧಿಯಾಗಿದೆ. ಧಾರ್ಮಿಕ ಪರಂಪರೆ, ಸಾಂಸ್ಕೃತಿಕ ಪರಂಪರೆ ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಸುಹೊಕ್ಕಿದೆ. ಇಲ್ಲಿನ ಕೋಆಪರೇಟೀವ್ ಸೊಸೈಟಿ ಜನರ ಬದುಕನ್ನೇ ಬದಲಿಸಿ ಸಾಧನೆಯ ಪಥದಲ್ಲಿದೆ ಎಂದು ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಮಿತ್ ಶಾ ಭಾಷಣದ ಹೈಲೈಟ್ಸ್ ಇಲ್ಲಿದೆ.
ಪುತ್ತೂರು(ಫೆ.11); ಸಹಕಾರಿ ಸಂಸ್ಥೆಯ ಬೆಳೆವಣಿಗೆ ಒಂದು ಭಾಗದ ಜನರ ಬದುಕನ್ನು ಹೇಗೆ ಬದಲಿಸುತ್ತದೆ ಅನ್ನೋದು ಕ್ಯಾಂಪ್ಕೋ ಸಾಧನೆಯಿಂದ ಸ್ಪಷ್ಟವಾಗುತ್ತಿದೆ. ಬಡವರಿಗೆ ಮನೆ, ಮನೆಯೊಳಗೆ ವಿದ್ಯುತ್, ನೀರು, ಗ್ಯಾಸ್ ಸಿಲಿಂಡ್, ಶೌಚಾಲಯ ನಮ್ಮ ಸರ್ಕಾರ ನೀಡಿದೆ. ಇನ್ನ ರೈತರಿಗೆ ಪಿಎಂ ಸಮ್ಮಾನ್ ನಿಧಿಯಿಂದ ವಾರ್ಷಿಕ ನಿಧಿಯನ್ನು ನೀಡಲಾಗುತ್ತಿದೆ. ಕ್ಯಾಂಪ್ಕೋ ಅಗ್ರಿ ಮಾಲ್ ಶಿಲನ್ಯಾಸ ಮಾಡಲಾಗಿದೆ. ಇಲ್ಲಿ ಕೃಷಿ ಸಲಕರಣೆ, ಕೀಟನಾಶ, ರಸಗೊಬ್ಬರ ಸೇರಿದಂತೆ ಎಲ್ಲವೂ ಈ ಅಗ್ರಿ ಮಾಲ್‌ನಲ್ಲಿ ಒಂದೇ ಕಡೆ ಸಿಗಲಿದೆ. ಇದು ಸಹಕಾರಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತದ ಮೊದಲ ಅಗ್ರಿ ಮಾಲ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಪುತ್ತೂರಿನ ಕ್ಯಾಂಪ್ಕೋ ಸುವರ್ಣ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಂಡ ಅಮಿತ್ ಶಾ, ಭಾರತ್ ಮಾತಾ ಕಿ ಜೈಯ ಘೋಷಣೆಯೊಂದಿಗೆ ತಮ್ಮ ಭಾಷಣ ಆರಂಭಿಸಿದರು. ನಾನಿಂದು ಪುತ್ತೂರಿಗೆ ಆಗಮಿಸಿದ್ದೇನೆ. ಇದು ಪವಿತ್ರ ಭೂಮಿಯಾಗಿದೆ. ಪರಶುರಾಮ ಸೃಷ್ಟಿಯ ನಾಡು ಎಂದೇ ವಿಶ್ವದಲ್ಲಿ ಪ್ರಸಿದ್ಧಿಯಾಗಿದೆ. ಧಾರ್ಮಿಕ ಪರಂಪರೆ, ಸಾಂಸ್ಕೃತಿಕ ಪರಂಪರೆ ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಸುಹೊಕ್ಕಿದೆ. ಈಗಷ್ಟೇ ನಾನು ಕಾಂತಾರ ನೋಡಿದೆ. ದಕ್ಷಿಣ ಕನ್ನಡದಲ್ಲಿನ ಸಂಸ್ಕೃತಿ ಯಾವ ರೀತಿ ಮೇಳೈಸಿದೆ ಅನ್ನೋದು ತಿಳಿಯಿತು ಎಂದು ಅಮಿತ್ ಶಾ ಹೇಳಿದ್ದಾರೆ.
ರಾಣಿ ಅಬ್ಬಕ್ಕಗೆ, ಮಂಗಳಾದೇವಿ, ಕದ್ರಿ ಮಂಜುನಾಥ, ಮಹಲಿಂಗೇಶ್ವರ ಮಂದಿರಕ್ಕೆ ಪ್ರಣಾಮ ಸಲ್ಲಿಸಿದ ಅಮಿತ್ ಶಾ ಭಾಷಣ ಮುಂದುವರಿಸಿದರು. ಈ ಭಾಗದಲ್ಲಿ ಅಡಕೆ, ತೆಂಗು, ರಬ್ಬರು, ಭತ್ತ ಸೇರಿದಂತೆ ಹಲವು ಬೆಳೆಗಳು ಇಲ್ಲಿ ಬೆಳೆಯುತ್ತಾರೆ. ನಾವು ಗುಜರಾತಿ ಜನರು ಸುಪಾರಿ ತಿನ್ನುವಾಗ ಯಾವಾಗಲೂ ಮಂಗಳೂರ ಜನರನ್ನು ನೆನೆಪಿಸಿಕೊಳ್ಳುತ್ತೇವೆ. ಗುಜರಾತ್ ಜನರು ಸುಪಾರಿ ತಿಂದರೆ, ದಕ್ಷಿಣ ಕನ್ನಡ ಜನರು ಸುಪಾರಿ ಅಡಕೆ ಬೆಳೆಯುತ್ತಾರೆ ಎಂದರು.
ಸಹಕಾರಿ ಸಂಸ್ಥೆಯ ಬೆಳೆವಣಿಗೆ ಒಂದು ಭಾಗದ ಜನರ ಬದುಕನ್ನು ಹೇಗೆ ಬದಲಿಸುತ್ತದೆ ಅನ್ನೋದು ಸ್ಪಷ್ಟವಾಗುತ್ತಿದೆ. ಬಡವರಿಗೆ ಮನೆ, ಮನೆಯೊಳಗೆ ವಿದ್ಯುತ್, ನೀರು, ಗ್ಯಾಸ್ ಸಿಲಿಂಡ್, ಶೌಚಾಲಯ ನಮ್ಮ ಸರ್ಕಾರ ನೀಡಿದೆ. ಇನ್ನ ರೈತರಿಗೆ ಪಿಎಂ ಸಮ್ಮಾನ್ ನಿಧಿಯಿಂದ ವಾರ್ಷಿಕ ನಿಧಿಯನ್ನು ನೀಡಲಾಗುತ್ತಿದೆ. ಕ್ಯಾಂಪ್ಕೋ ಅಗ್ರಿ ಮಾಲ್ ಶಿಲನ್ಯಾಸ ಮಾಡಲಾಗಿದೆ. ಇಲ್ಲಿ ಕೃಷಿ ಸಲಕರಣೆ, ಕೀಟನಾಶ, ರಸಗೊಬ್ಬರ ಸೇರಿದಂತೆ ಎಲ್ಲವೂ ಈ ಅಗ್ರಿ ಮಾಲ್‌ನಲ್ಲಿ ಒಂದೇ ಕಡೆ ಸಿಗಲಿದೆ. ಇದು ಸಹಕಾರಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತದ ಮೊದಲ ಅಗ್ರಿ ಮಾಲ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಭದ್ರಾವತಿಯ ಕ್ಯಾಂಪ್ಕೋ ಘಟಕ ಉದ್ಘಾಟೆ ಮಾಡಿದ್ದೇನೆ. ಕ್ಯಾಂಪ್ಕೋ ಕಾಪರೇಟೀವ್ ಸೊಸೈಟಿ 50 ವರ್ಷ ಪೂರೈಸಿದೆ. ಇದು ಪ್ರಾಮಾಣಿಕತೆಯ ಸರ್ಟೀಫಿಕೇಟ್ ಆಗಿದೆ. ರೈತರು, ಇಲ್ಲಿನ ಜನರ ಸೇವೆ ಮಾಡಿದ ಕ್ಯಾಂಪ್ಕೋ ಇದೀಗ ಈ ಮಟ್ಟಕ್ಕೆ ಬೆಳೆದು ನಿಂತಿದೆ. 50 ಸಾವಿರ ಸದಸ್ಯರೊಂದಿಗೆ ಆರಂಭಗೊಂಡ ಕ್ಯಾಂಪ್ಕೋ ಇದೀಗ 1 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದ ಕೋಆಪರೇಟೀವ್ ಸೊಸೈಟಿಯಾಗಿದೆ ಎಂದು ಕ್ಯಾಂಪ್ಕೋ ಸಾಧನೆಯನ್ನು ಅಮಿತ್ ಶಾ ಹೊಗಳಿದರು.
ಕ್ಯಾಂಪ್ಕೋ ಸೋಲಾರ್ ಎನರ್ಜಿಯನ್ನು ಅಳವಡಿಸಿದೆ. ಪ್ರಧಾನಿ ಮೋದಿ ಈ ಬಜೆಟ್‌ನಲ್ಲಿ ಕೋಆಪರೇಟೀವ್ ಪ್ರೋತ್ಸಾಹ ನೀಡಲು ಪ್ರತಿ ಪಂಚಾಯತ್ ವಿಭಾಗಕ್ಕೆ ಹಣ ಮೀಸಲಿಟ್ಟಿದೆ. ಇದರ ಜೊತೆಗೆ
ಟಿಪ್ಪುವನ್ನು ಬೆಂಬಲಿರುವ ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಮತ ನೀಡುತ್ತೀರಾ? ಅಥವಾ ರಾಣಿ ಅಬ್ಬಕ್ಕ ಪೂಜಿಸುವ ಬಿಜೆಪಿಗೆ ಮತ ನೀಡುತ್ತೀರಾ? ಕರ್ನಾಟಕವನ್ನು ಎಟಿಎಂ ಕಾರ್ಡ್ ಮಾಡುವ ಕಾಂಗ್ರೆಸ್‌ನ್ನು ದೂರ ಇಡಬೇಕಿದೆ. ಪಿಎಫ್ಐ ಸಂಘಟನೆಯನ್ನು ಭಾರತೀಯ ಜನತಾ ಪಾರ್ಟಿ ನಿಷೇಧಿಸುವ ಮೂಲಕ ದಕ್ಷಿಣ ಭಾರತ, ಕರಾವಳಿಯಲ್ಲಿ ನಡೆಯುತ್ತಿದ್ದ ಉಗ್ರ ಕೃತ್ಯವನ್ನು ನಿಲ್ಲಿಸಲಾಗಿದೆ. ಕರ್ನಾಟಕದ ಸುರಕ್ಷತೆಯನ್ನು ಬಿಜೆಪಿ ಮಾಡಲಿದೆ. ದೇಶದಲ್ಲಿ ಉಗ್ರವಾದ, ನಕ್ಸಲ್ ಅಂತ್ಯಗೊಳಿಸಲು ಪ್ರಧಾನಿ ಮೋದಿ ಸತತ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಆರ್ಟಿಕಲ್ 370 ಕಿತ್ತೆಸೆಯಲು ಅಡ್ಡಗಾಲು ಹಾಕಿತ್ತು. ಆದರೆ ಇದು ಮೋದಿ ಸರ್ಕಾರ ಯಾರಿಗೂ ಹೆದರದೇ ಆರ್ಟಿಕಲ್ 370 ರದ್ದುಗೊಳಿಸಿತು.
ದಕ್ಷಿಣ ಕರ್ನಾಟಕದಲ್ಲಿ ಹಲವು ಯೋಜನೆಗಳು ಆರಂಭಗೊಳ್ಳುತ್ತಿದೆ. ಕ್ಯಾಂಪ್ಕೋ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಯೋಜನೆ ರೂಪಿಸಲಾಗಿದೆ. ಪ್ರಧಾನಿ ಮಂತ್ರಿ ಮತ್ಸ ಸಂಪದ ಯೋಜನೆ ಮೂಲಕ ಮೀನುಗಾರರಿಗೆ ನೆರವು ನೀಡಲಾಗಿದೆ. ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಮಾಡಲಾಗಿದೆ. ಇನ್ನು ನಾರಾಯಣಗುರು ವಿದ್ಯಾಲಯಕ್ಕೆ ನೆರವು ನೀಡಲಾಗಿದೆ. ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸಲು 1,000 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಬಿಜೆಪಿಗೆ ಮತ ಹಾಕಿದರೆ ಇದು ನವ ಭಾರತ ಹಾಗೂ ಅಭಿವೃದ್ಧಿ ಭಾರತಕ್ಕೆ ನೀಡಿದ ಮತವಾಗಲಿದೆ. ಭಾಷಣದ ಕೊನೆಯಲ್ಲಿ ಕ್ಯಾಂಪ್ಕೋ ಮಂಡಳಿ ಸದಸ್ಯರನ್ನು ಅಭಿನಂದಿಸಿದ ಅಮಿತ್ ಶಾ, ಪ್ರಧಾನಿ ಮೋದಿ, ಬಿಜೆಪಿ ಸರ್ಕಾರವನ್ನು ಮತ್ತೆ ತರುತ್ತೀರಾ? ನೆರೆದಿದ್ದವರನ್ನು ಕೇಳಿ ಬಿಜೆಪಿ ಬೆಂಬಲ ಪಡೆದರು. ಜನರ ಹರ್ಷೋದ್ಘಾರದಲ್ಲೇ ವಂದೇ ಮಾತರಂ ಜಯ ಘೋಷದೊಂದಿಗೆ ಮಾತು ಮುಗಿಸಿದರು.