
ನವದೆಹಲಿ: ದೆಹಲಿಯ ಪ್ರಸಿದ್ಧ ಜಾಮಾ ಮಸೀದಿಯಲ್ಲಿ ಒಂಟಿ ಅಥವಾ ಗುಂಪಿನಲ್ಲಿ ಬರುವ ಹುಡುಗಿಯರ ಪ್ರವೇಶವನ್ನು ನಿಷೇಧಿಸಿದ್ದ ವಿವಾದಿತ ಆದೇಶವನ್ನು ಶಾಹಿ ಇಮಾಂ ಹಿಂಪಡೆದಿದ್ದಾರೆ. ಇತ್ತೀಚೆಗೆ ಜಾಮಾ ಮಸೀದಿಯ 3 ಮುಖ್ಯದ್ವಾರಗಳಲ್ಲಿ ಒಬ್ಬಂಟಿ ಹುಡುಗಿ ಅಥವಾ ಗುಂಪಿನಲ್ಲಿ ಹುಡುಗಿಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ನೋಟಿಸ್ ಅಂಟಿಸಲಾಗಿತ್ತು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹಾಗೂ ವಿಎಚ್‌ಪಿ ಇದು ಮಹಿಳೆಯರ ಹಕ್ಕಿನ ಉಲ್ಲಂಘನೆ ಎಂದು ಕಿಡಿಕಾರಿದ್ದರು.
ಇದರ ಬೆನ್ನಲ್ಲೇ ಮಸೀದಿಯ ಶಾಹಿ ಇಮಾಮ್ ಬುಖಾರಿ (Shahi Imam Bukhari) ಸ್ಪಷ್ಟನೆ ನೀಡಿ, ‘ನಿಷೇಧವು ಮಸೀದಿಯಲ್ಲಿ (mosque) ಪ್ರಾರ್ಥನೆ ಸಲ್ಲಿಸಲು ಬರುವ ಹುಡುಗಿಯರಿಗೆ ಅನ್ವಯಿಸುವುದಿಲ್ಲ. ಕೆಲ ಯುವತಿಯರು ತಮ್ಮ ಪ್ರಿಯಕರರನ್ನು ಭೇಟಿಯಾಗಲು ಸ್ಥಳವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಿಷೇಧವನ್ನು ಹೇರಲಾಗಿದೆ’ ಎಂದಿದ್ದರು. ಆದರೂ ವಿವಾದ ತಣಿಯದ ಕಾರಣ ಕೊನೆಗೆ ದಿಲ್ಲಿ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ (V.K.Saxena) ಮಧ್ಯಪ್ರವೇಶಿಸಿ ಆದೇಶ ಹಿಂಪಡೆಯಲು ಮನವಿ ಮಾಡಿದರು. ಇದಕ್ಕೆ ಶಾಹಿ ಇಮಾಂ ಕೂಡ ಸಮ್ಮತಿಸಿದ್ದಾರೆ.
ಪತಿ ಅಥವಾ ಕುಟುಂಬದವರಿಲ್ಲದೆ ಮಹಿಳೆಯರು ಮಸೀದಿಗೆ ಬರುವಂತಿಲ್ಲ: ಜಾಮಾ ಮಸೀದಿ ಆದೇಶ!
Jamia Masjid Srirangapatna: ಶ್ರೀರಂಗಪಟ್ಟಣ ದೇಗುಲ ಕೆಡವಿ ಮಸೀದಿ: ಪಿಐಎಲ್
ಗುತ್ತಿಗೆದಾರ ಮುಸ್ಲಿಮ್, ಮಸೀದಿ ಮಾದರಿಯಲ್ಲಿ ನಿರ್ಮಾಣ ಎಂಬುದು ಸುಳ್ಳು: ರಾಮದಾಸ್ ಕಿಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ