ಫ್ಯಾಕ್ಟ್‌ಚೆಕ್‌ ಫೆಲೋಶಿಪ್‌ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಸಿದ JNM ವಿಶ್ವಾಸ್ ನ್ಯೂಸ್‌

By Santosh NaikFirst Published Dec 9, 2022, 6:45 PM IST
Highlights

ದೇಶದ 10 ಪ್ರಮುಖ ನ್ಯೂಸ್‌ರೂಮ್‌ಗಳಿಗಾಗಿ ಕಳೆದ ಒಂದು ವರ್ಷದಿಂದ ಮೆಟಾ ಸಯಹೋಗದಲ್ಲಿ ನಡೆಯುತ್ತಿದ್ದ ಫ್ಯಾಕ್ಟ್‌ ಚೆಕಿಂಗ್‌ ಮತ್ತು ವೆರಿಫಿಕೇಶನ್‌ ಫೆಲೋಶಿಪ್‌ ಕಾರ್ಯಕ್ರಮವನ್ನು ಜಾಗರಣ್ ನ್ಯೂ ಮೀಡಿಯಾದ ವಿಶ್ವಸ್ ನ್ಯೂಸ್ ಯಶಸ್ವಿಯಾಗಿ ಮುಕ್ತಾಯ ಮಾಡಿದೆ.

ನವದೆಹಲಿ (ಡಿ. 9): ಜಾಗರಣ್ ನ್ಯೂ ಮೀಡಿಯಾದ (ಜೆಎನ್‌ಎಂ) ವಿಶ್ವಾಸ್‌ ನ್ಯೂಸ್‌ನ ಫ್ಯಾಕ್ಟ್‌ ಚೆಕಿಂಗ್‌ ಮತ್ತು ಮಾಧ್ಯಮ ಸಾಕ್ಷರತಾ ತರಬೇತಿ ವಿಭಾಗವು, ದೇಶದ ಪ್ರಮುಖ 10 ಪ್ರಮುಖ ಸುದ್ದಿ ಸಂಸ್ಥೆಗಳ 20 ಸದಸ್ಯರುಗಳಿಗೆ ಕಳೆದ ಒಂದು ವರ್ಷದಿಂದ ನೀಡುತ್ತಿದ್ದ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯ ಮಾಡಿದೆ. ಫೆಲೋಶಿಪ್ ಅನ್ನು ಇಂಟರ್‌ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (IAMAI) ಮೆಟಾ ಸಹಯೋಗದೊಂದಿಗೆ ಪ್ರಾರಂಭ ಮಾಡಲಾಗಿತ್ತು.  ಕಾರ್ಯಕ್ರಮದ ನಾಲೆಡ್ಜ್‌ ಹಾಗೂ ಟ್ರೇನಿಂಗ್‌ ಪಾಲುದಾರಾನಾಗಿ ವಿಶ್ವಾಸ ನ್ಯೂಸ್‌ ಸಹಯೋಗ ಹೊಂದಿತ್ತು. ಕಳೆದ ನವೆಂಬರ್‌ 30 ರಂದು ಗುರ್ಗಾಂವ್‌ನ ಮೆಟಾ ಕಛೇರಿಯಲ್ಲಿ ಒಂದು ದಿನದ ಕಾರ್ಯಕ್ರಮದೊಂದಿಗೆ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಫ್ಯಾಕ್ಟ್‌ ಚೆಕಿಂಗ್‌ ಮತ್ತು ನ್ಯೂಸ್‌ ವೆರಿಫಿಕೇಶನ್‌ ಫೆಲೋಶಿಪ್‌' ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾಗರಣ್ ನ್ಯೂ ಮೀಡಿಯಾದ ಸಿಇಒ ಭರತ್ ಗುಪ್ತಾ, 'ಈ ಕಾರ್ಯಕ್ರಮದ ಮೂಲಕ ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳ ಪತ್ರಕರ್ತರೊಂದಿಗೆ ಫ್ಯಾಕ್ಟ್‌ ಚೆಕಿಂಗ್‌ ತರಬೇತಿ ನೀಡಿದ್ದೇವೆ. ಇದಕ್ಕಾಗಿ  ಮೆಟಾ ಹಾಗೂ ಐಎಎಂಎಐ ಕೂಡ ಸಹಕರಿಸಿದೆ. ಈ ಕಾರ್ಯಕ್ರಮ ಅತೀವ ಸಂತಸ ನೀಡಿದೆ. 20 ಸದಸ್ಯರ ಈ ತಂಡವು ನ್ಯೂಸ್‌ರೂಮ್‌ 2.0 ಆಗಿ ರೂಪಾಂತರಗೊಳ್ಳುತ್ತದೆ ಎನ್ನುವ ವಿಶ್ವಾಸ ನನಗಿದೆ.  ಸುದ್ದಿ ಪರಿಸರ ವ್ಯವಸ್ಥೆಯನ್ನು ಅಡ್ಡಿಪಡಿಸುವ ತಪ್ಪು ಮಾಹಿತಿಯ ಆತಂಕಗಳನ್ನು ಗುರುತಿಸಲು, ಪರಿಶೀಲಿಸಲು ಮತ್ತು ಎದುರಿಸಲು ಇವರೆಲ್ಲರೂ ಶಕ್ತರಾಗಿದ್ದಾರೆ.  ಈ ಸದಸ್ಯರಿಗೆ ಇದರ ಜ್ಞಾನ, ಮಾಹಿತಿ, ಉಪಕರಣಗಳು ಮತ್ತು ಕಾರ್ಯತಂತ್ರಗಳನ್ನು ನೀಡುವ ಮೂಲಕ ಮಾಧ್ಯಮ ಸಂಸ್ಥೆಗಳಿಗೆ ತಮ್ಮ ಕಾರ್ಯಾಚರಣೆಯನ್ನು ಹೆಚ್ಚಿಸಲು ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದರು.

ವಿಶ್ವಸ್ ನ್ಯೂಸ್ ಎನ್ನುವದರ ಅರ್ಥವೇ ನಂಬಿಕೆ. ನಮ್ಮ ಓದುಗರಿಗೆ ವಿಶ್ವಾಸಾರ್ಹ ಸುದ್ದಿಗಳನ್ನು ತಲುಪಿಸುವುದು ಜಾಗರಣ ನ್ಯೂ ಮೀಡಿಯಾದಲ್ಲಿ ನಮ್ಮ ಪ್ರಯತ್ನವಾಗಿದೆ. ಈ ತರಬೇತಿ ಕಾರ್ಯಕ್ರಮದ ಮೂಲಕ, ನಾವು, ನಮ್ಮ ಸಹ ಮಾಧ್ಯಮ ಸದಸ್ಯರೊಂದಿಗೆ ಕಲಿತಿದ್ದೇವೆ.  ಸಮುದಾಯದಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ಗುರುತಿಸಲು, ಅದನ್ನು ಪರಿಶೀಲಿಸಿ, ಸುದ್ದಿ ವ್ಯವಸ್ಥೆಯೊಂದ ಅದನ್ನು ಹೊರಹಾಕುವ ಭರವಸೆ ನೀಡುತ್ತೇವೆ. ಇಲ್ಲಿರುವ ಎಲ್ಲಾ ಸದಸ್ಯರಿಗೂ ನಾನು ಧನ್ಯವಾದ ಹೇಳುತ್ತೇನೆ. ಅದರೊಂದಿಗೆ ಮೆಟಾ ಮತ್ತು ಇಂಟರ್ನೆಂಟ್‌ ಹಾಗೂ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾಗೆ ಈ ಅವಕಾಶ ನೀಡಿದ್ದಕ್ಕೆ ಆಭಾರಿಯಾಗಿದ್ದೇನೆ. ಇದರ ಮೂಲಕ ಪತ್ರಿಕೋದಮ್ಯವನ್ನು ಗ್ರಹಿಸುವ ರೀತಿಯಲ್ಲಿ ಬದಲಾವಣೆ ತರಲು ಅವಕಾಶ ಸಿಗುತ್ತದೆ ಎಂದು ನಾನು ನಂಬಿದ್ದೇನೆ ಎಂದು ಎಡಿಟರ್‌ ಇನ್‌ ಚೀಫ್‌ ರಾಜೇಶ್‌ ಉಪಾಧ್ಯಾಯ ಹೇಳಿದರು.

ಏಷ್ಯಾನೆಟ್‌ ಸುವರ್ಣನ್ಯೂಸ್‌ ಡಿಜಿಟಲ್‌ನ ನಿರುಪಮಾ ಕೆಎಸ್‌ಗೆ ಮೆಟಾ ಫೆಲೋಶಿಪ್

ಈ ಕಾರ್ಯಕ್ರಮವು ಭಾರತದಲ್ಲಿ ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳು, ತಪ್ಪು ಮಾಹಿತಿಗಳು, ಅದರ ದುಷ್ಪರಿಣಾಮಗಳು, ತಪ್ಪು ಮಾಹಿತಿಯನ್ನು ಹುಡುಕುವ ಮತ್ತು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ವತಂತ್ರವಾಗಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ದೇಶದ ಪ್ರಮುಖ 10 ಮಾಧ್ಯಮಗಳ ಸಂಸ್ಥೆಗಳನ್ನು ಶಾರ್ಟ್‌ ಲಿಸ್ಟ್‌ ಮಾಡಲಾಗಿತ್ತು. ವಿಶ್ವಾಸ್‌ ನ್ಯೂಸ್‌ನ ಅಂತಾರಾಷ್ಟ್ರೀಯ ತಜ್ಞರು ಮತ್ತು ತರಬೇತುದಾರರ ಅಡಿಯಲ್ಲಿ ಟ್ರೇನಿಂಗ್‌ನ ಭಾಗವಾಗಲು ಈ 10 ಮಾಧ್ಯಮ ಸಂಸ್ಥೆಗಳಿಂದ ತಲಾ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಐದು-ದಿನದ ಕಾರ್ಯಾಗಾರಗಳನ್ನು ನಡೆಸಲು ವಿವಿಧ ಕಲಿಕಾ ಮಾಡ್ಯೂಲ್‌ಗಳನ್ನು ಬಳಸಲಾಗಿತ್ತು. ಬಳಿಕ ಒಂದು ವರ್ಷಗಳ ಕಾಲ ದಿನನಿತ್ಯದ ಅವಧಿಗಳು ಕೂಡ ಇದ್ದವು. 50 ಕ್ಕೂ ಹೆಚ್ಚು ಸತ್ಯ-ಪರಿಶೀಲನಾ ಸಾಧನಗಳನ್ನು ಇದರಲ್ಲಿ ಚರ್ಚಿಸಲಾಗಿದೆ ಮತ್ತು ಭಾಗವಹಿಸಿದ ಪತ್ರಕರ್ತರಿಗೆ ವೃತ್ತಿಪರ ಫ್ಯಾಕ್ಟ್‌ ಚೆಕರ್‌ ಆಗುವ ಬಗ್ಗೆಯೂ ವಿವರಿಸಲಾಗಿದೆ.

Fact Check: ಛಾಯಾಗ್ರಾಹಕ ನೆಲದ ಮೇಲೆ ಮಲಗಿ ಪಿಎಂ ಮೋದಿ ಫೋಟೋ ಕ್ಲಿಕ್ಕಿಸುತ್ತಿರುವ ವೈರಲ್‌ ಚಿತ್ರ ಎಡಿಟೆಡ್‌

ಈ ಕಾರ್ಯಕ್ರಮದ ಮೂಲಕ, ಜಾಗರಣ್ ನ್ಯೂ ಮೀಡಿಯಾವು ಇಂಡಿಯನ್ ಎಕ್ಸ್‌ಪ್ರೆಸ್, ದಿ ಹಿಂದೂ, ಹಿಂದೂಸ್ತಾನ್ ಟೈಮ್ಸ್, ಏಷ್ಯಾನೆಟ್ ನ್ಯೂಸ್, ಮನೋರಮಾ ಆನ್‌ಲೈನ್, ಲೋಕಮತ್, ಡೆಕ್ಕನ್ ಹೆರಾಲ್ಡ್, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ, ಪ್ರಜಾವಾಣಿ ಮತ್ತು ಮಾತೃಭೂಮಿ ಸೇರಿದಂತೆ ಮಾಧ್ಯಮದ 20 ಪತ್ರಕರ್ತರಿಗೆ ಯಶಸ್ವಿಯಾಗಿ ತರಬೇತಿ ನೀಡಿತು.
 

click me!