ಜಗನ್ ರೆಡ್ಡಿ ರ‍್ಯಾಲಿಯಲ್ಲಿ ಅಪಘಾತ, ವ್ಯಕ್ತಿ ಮೇಲೆ ಕಾರು ಹರಿದರೂ ಕೈಬೀಸುತ್ತಾ ಸಾಗಿದ ಮಾಜಿ ಸಿಎಂ

Published : Jun 22, 2025, 03:04 PM ISTUpdated : Jun 22, 2025, 03:15 PM IST
jagan mohan reddy

ಸಾರಾಂಶ

ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕಾರು ವ್ಯಕ್ತಿ ಮೇಲೆ ಹತ್ತಿ ಭಾರಿ ಅವಘಡ ಸಂಭವಿಸಿದೆ. ಕಿಕ್ಕಿರಿದು ತುಂಬಿದ ಜನಸಾಗರದ ನಡುವೆ ಜಗನ್ ಮೋಹನ್ ರೆಡ್ಡಿ ಕೈಬೀಸುತ್ತಾ ಸಾಗಿದರೆ, ಇತ್ತ ವ್ಯಕ್ತಿ ಕಾರಿನಡಿಗೆ ಬಿದ್ದು ಅಪ್ಪಚ್ಚಿಯಾಗಿದ್ದ. ಭಯಾನಕ ವಿಡಿಯೋ 

ವಿಜಯವಾಡ (ಜೂ.22) ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರ‍್ಯಾಲಿಯಲ್ಲಿ ದೊಡ್ಡ ಅಪಘಾತ ನಡೆದು ಹೋಗಿದೆ. ಕಿಕ್ಕಿರಿದು ಸೇರಿದ್ದ ಜನರ ನಡುವೆಯಿಂದ ಜಗನ್ ಮೋಹನ್ ರೆಡ್ಡಿ ಕಾರು ವ್ಯಕ್ತಿಯ ಮೇಲೆ ಹರಿದಿದೆ. ಆದರೆ ಇದ್ಯಾವುದರ ಪರಿವೇ ಇಲ್ಲದ ಜಗನ್ ಮೋಹನ ರೆಡ್ಡಿ ಜನರತ್ತ ಕೈಬೀಸುತ್ತಾ ತೆರಳಿದ ಘಟನೆ ನಡೆದಿದೆ. ಜಹನ್ ಮೋಹನ್ ರೆಡ್ಡಿ ಕಾರಿನಡಿಗೆ ಬಿದ್ದ ವ್ಯಕ್ತಿ ಅಪ್ಪಚ್ಚಿಯಾದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಜನರತ್ತಾ ಕೈಬೀಸುತ್ತಾ ತೆರಳಿದ ಜಗನ್

ಗುಂಟೂರು ಜಿಲ್ಲಿಯಲ್ಲಿ ವೈಎಸ್ಆರ್‌ಸಿಪಿ ಪಕ್ಷದ ಬೃಹತ್ ರ‍್ಯಾಲಿ ಆಯೋಜಿಸಲಾಗಿತ್ತು. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕಾರಿನ ಮೂಲಕ ಆಗಮಿಸಿದ್ದಾರೆ. ರ‍್ಯಾಲಿಗಾಗಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದಾರೆ. ಜಗನ್ ಕಾರು ಸುತ್ತುವರಿದಿದ್ದಾರೆ. ಜಗನ್ ಕೈ ಕುಲುಕಲು ಪ್ರಯತ್ನಿಸಿದ್ದಾರೆ. ಈ ನೂಕಾಟ ತಳ್ಳಾಟದಲ್ಲಿ 65 ವರ್ಷದ ಕಾರ್ಯಕರ್ತ ಚೀಲಿ ಸಿಂಗಯ್ಯ ಕಾರಿನಡಿಗೆ ಬಿದ್ದಿದ್ದಾರೆ. ಜನರ ಹರ್ಷೋದ್ಘಾರ ಜಯಘೋಷಗಳು ಮೊಳಗಿದೆ. ಹೀಗಾಗಿ ವ್ಯಕ್ತಿ ಕಾರಿನಡಿಗೆ ಬಿದ್ದರೂ ಯಾರಿಗೂ ಗೊತ್ತೇ ಆಗಿಲ್ಲ. ಇತ್ತ ಪರಿಸ್ಥಿತಿ ಕೈಮೀರುತ್ತಿದ್ದರೂ ಜಗನ್ ಮೋಹನ್ ರೆಡ್ಡಿ ಮಾತ್ರ ಜನರತ್ತಾ ಕೈಬೀಸುತ್ತಾ ತೆರಳಿದ್ದಾರೆ.

 

 

ಜಗನ್ ಮೋಹನ್ ರೆಡ್ಡಿ ರೆಂತಪಲ್ಲ ಗ್ರಾಮಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ವರ್ಷದ ಹಿಂದೆ ಮೃತಪಟ್ಟಿದ್ದ ಪಕ್ಷದ ಕಾರ್ಯಕರ್ತನ ಮನೆಗೆ ತೆರಳಿ ಕುಟುಬಸ್ಥರಿಗೆ ಸಾಂತ್ವನ ಹೇಳಲು ಜಗನ್ ತೆರಳಿದ್ದಾರೆ. ಆದರೆ ತಡೆಪಲ್ಲಿಯಿಂದ ರೆಂತಪಲ್ಲ ಗ್ರಾಮದ ವರೆಗೆ ರಸ್ತೆಯುದ್ದಕ್ಕೂ ರೋಡ್ ಶೋ ಮೂಲಕ ತೆರಳಿದ್ದಾರೆ. ಜಗನ್ ಆಗಮನದ ಮಾಹಿತಿ ತಿಳಿದು ರಸ್ತೆಯಲ್ಲಿ ತುಂಬ ಪಕ್ಷದ ಕಾರ್ಯಕರ್ತರು ನಿಂತಿದ್ದರು. ಹೂಮಳೆ ಸ್ವಾಗತ ನೀಡಿದ್ದಾರೆ. ಇತ್ತ ಜನರನ್ನು ನೋಡಿ ಜಗನ್ ಜೋಶ್ ಹೆಚ್ಚಾಗಿದೆ. ಕಾರಿನ ಡೋರ್ ತೆರೆದು ನಿಂತಿದ್ದಾರೆ. ಇತ್ತ ಕಾರು ನಿಧನವಾಗಿ ಚಲಿಸುತ್ತಿದೆ.

ಸ್ಥಳದಲ್ಲೇ ಮೃತಪಟ್ಟ ಕಾರ್ಯಕರ್ತ

ಹಲವರು ಜಗನ್ ಕಾರಿನ ಮೇಲೆ ಹತ್ತಿ ಹೂವು ಹಾರಗಳನ್ನು ಹಾಕಿದ್ದಾರೆ. ಜಗನ್ ಮೋಹನ್ ರೆಡ್ಡಿ ಕಾರಿನ ಡೋರ್ ತೆರೆದು ನಿಂತುಕೊಂಡಿದ್ದಾರೆ. ಇದರಿಂದ ಜನರು ಮತ್ತಷ್ಟು ಮುತ್ತಿಕ್ಕಲು ಆರಂಭಿಸಿದ್ದಾರೆ. ಈ ನೂಕಾಟ, ತಳ್ಳಾಟದಲ್ಲಿ 65 ವರ್ಷದ ಚೀಲಿ ಸಿಂಗಯ್ಯ ಕಾರಿನಡಿಗೆ ಬಿದ್ದಿದ್ದಾರೆ. ಬಿದ್ದ ಬೆನ್ನಲ್ಲೇ ಕಾರ್ಯತನ ಮೇಲಿನಿಂದ ಕಾರು ಹರಿದಿದೆ. ಕಾರ್ಯಕರ್ತ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಕಾರಿನಡಿಗೆ ಪಕ್ಷದ ಕಾರ್ಯಕರ್ತ ಬಿದ್ದರೂ ಜಗನ್‌ಗೆ ಆಗಲಿ,ಕಾರು ಚಾಲಕನಿಗೆ ಆಗಲಿ ಇದರ ಪರಿವೇ ಇರಲಿಲ್ಲ. ಇತ್ತ ಗಮನಿಸಿದ ಕೆಲವರು ಕೂಗಿಕೊಂಡರೂ ಕಾರ್ಯಕರ್ತರ ಸಂಭ್ರಮದ ನಡುವೆ ಯಾರಿಗೂ ಕೇಳಿಸಲೇ ಇಲ್ಲ. ಕಾರು ನೇರವಾಗಿ ಕಾರ್ಯಕರ್ತನ ಮೇಲಿನಿಂದ ಹರಿದು ಸಾಗಿದೆ.

ಮೂರು ವಾಹನ, 100 ಮಂದಿಗೆ ಮಾತ್ರ ಅವಕಾಶ

ಜಗನ್ ರೋಡ್ ಶೂ ಮೂಲಕ ತೆರಳುವ ಪ್ಲಾನ್ ಮೊದಲೇ ಮಾಡಲಾಗಿತ್ತು. ಈ ವೇಳೆ ಪೊಲೀಸರು ಜನರು ಕಿಕ್ಕಿರಿದು ಸೇರಿದರೆ ಅನಾಹುತ ಸಂಭವಿಸಲಿದೆ. ಹೀಗಾಗಿ ಮೂರು ವಾಹನ ಹಾಗೂ 100 ಮಂದಿಗೆ ಮಾತ್ರ ಈ ಮೆರಣಿಗೆ, ರೋಡ್ ಶೂನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ಆದರೆ ಜಗನ್ ಕಾರ್ಯಕರ್ತರು , ಬೆಂಬಲಿಗರು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಮಂದಿ ಸೇರಿದ್ದರು. ಹೀಗಾಗಿ ಅನಾಹುತ ಸಂಭವಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ