ಸರ್ಕಾರಿ ನಿವಾಸ ಬಿಟ್ಟು ಚೌಟಾಲಾರ ತೋಟದ ಮನೆಗೆ ಧನಕರ್‌ ಶಿಫ್ಟ್‌

Kannadaprabha News   | Kannada Prabha
Published : Sep 02, 2025, 05:06 AM IST
Jagdeep Dhankar

ಸಾರಾಂಶ

ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರು ತಮಗೆ ಈ ಹಿಂದೆ ನೀಡಲಾಗಿದ್ದ ಸರ್ಕಾರಿ ನಿವಾಸವನ್ನು ತೊರೆದು ಖಾಸಗಿ ತೋಟದ ಮನೆಗೆ ಸ್ಥಳಾಂತರಗೊಂಡಿದ್ದಾರೆ.

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರು ತಮಗೆ ಈ ಹಿಂದೆ ನೀಡಲಾಗಿದ್ದ ಸರ್ಕಾರಿ ನಿವಾಸವನ್ನು ತೊರೆದು ಖಾಸಗಿ ತೋಟದ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಮಾಜಿ ರಾಷ್ಟ್ರಪತಿಗಳಿಗೆ ನೀಡುವ ಹೊಸ ಮನೆ ಹಸ್ತಾಂತರದ ಬಳಿಕ ಧನಕರ್‌ ಮರಳಿ ಹೊಸ ಸರ್ಕಾರಿ ನಿವಾಸಕ್ಕೆ ತೆರಳಲಿದ್ದಾರೆ. ಆದರೆ ನಿವಾಸ ಕೋರಿ ಇನ್ನೂ ಧನಕರ್‌ ಅರ್ಜಿ ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ದಕ್ಷಿಣ ದೆಹಲಿಯ ಗಡಾಯಿಪುರದಲ್ಲಿ ಐಎನ್‌ಎಲ್‌ಡಿ ನಾಯಕ ಅಭಯ್‌ ಚೌಟಾಲಾ ಅವರ ತೋಟದ ಮನೆ ಇದ್ದು, ಅಲ್ಲಿಗೆ ಧನಕರ್‌ ಕುಟುಂಬ ಸಮೇತ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ. ಧನಕರ್‌ ಅವರು ಜಾಟ್‌ ಸಮುದಾಯದ ಹಿರಿಯ ನಾಯಕ ಮಾಜಿ ಉಪಪ್ರಧಾನಿ ದೇವಿಲಾಲ್‌ ಅವರ ಆಪ್ತರಾಗಿದ್ದರು. ಬಳಿಕ ದೇವಿಲಾಲ್ ಅವರ ಪುತ್ರ ಓಂ ಪ್ರಕಾಶ್‌ ಚೌತಾಲಾ ಜೊತೆಗೂ ಉತ್ತಮ ನಂಟು ಹೊಂದಿದ್ದರು. ಅದೇ ಆಪ್ತತೆಯಲ್ಲಿ ಇದೀಗ ಓಂ ಪ್ರಕಾಶ್‌ ಚೌತಾಲಾ ಅವರ ಪುತ್ರ ಅಭಯ್‌, ತಮ್ಮ ಫಾರ್ಮ್‌ಹೌಸ್‌ನಲ್ಲಿ ಇರಲು ಧನಕರ್‌ ಅವರಿಗೆ ಆಹ್ವಾನ ನೀಡಿದ್ದರು.

ಮಾಜಿ ಶಾಸಕ ಕೋಟಾದಡಿ ಪಿಂಚಣಿಗೆ ಧನಕರ್‌ ಅರ್ಜಿ!

ಜೈಪುರ: ಅನಾರೋಗ್ಯ ಕಾರಣ ನೀಡಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದ ಜಗದೀಪ್ ಧನಕರ್‌ ಅವರು ಮಾಜಿ ಶಾಸಕ ಕೋಟಾದಡಿ ತಮಗೆ ಸಿಗಬೇಕಿರುವ ಪಿಂಚಣಿ ನೀಡುವಂತೆ ಕೋರಿ ರಾಜಸ್ಥಾನದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.

ಧನಕರ್‌ ಅವರು ಈ ಹಿಂದೆ ಕಿಶನ್‌ಗಢ ಕ್ಷೇತ್ರದಿಂದ 1993 ರಿಂದ 1998ರ ತನಕ ಕಾಂಗ್ರೆಸ್‌ ಶಾಸಕರಾಗಿದ್ದರು. ಆ ಬಳಿಕ 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುವ ತನಕ ಪಿಂಚಣಿ ಪಡೆಯುತ್ತಿದ್ದರು. ನಂತರ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮತ್ತೆ ಪಿಂಚಣಿ ಪುನಾರಂಭಿಸುವಂತೆ ಕೋರಿ ರಾಜಸ್ಥಾನ ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.ಸಚಿವಾಲಯವು ಈ ಪ್ರಕ್ರಿಯೆ ಪ್ರಾರಂಭಿಸಿದ್ದು, ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಅಂಗೀಕರಿಸಲ್ಪಟ್ಟ ದಿನದಿಂದ ಪಿಂಚಣಿ ಅನ್ವಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜಸ್ಥಾನದಲ್ಲಿ ಒಮ್ಮೆ ಶಾಸಕರಾದವರಿಗೆ ತಿಂಗಳಿಗೆ 35,000 ರು. ಪಿಂಚಣಿ ಸಿಗಲಿದೆ. ಆ ಬಳಿಕ 70 ವರ್ಷ ಮೇಲ್ಪಟ್ಟವರಿಗೆ ಶೇ.20ರಷ್ಟು ವೇತನ ಹೆಚ್ಚಳವಾಗುತ್ತದೆ. ಈಗ ಧನಕರ್ ಅವರಿಗೆ 74 ವರ್ಷ ಆಗಿರುವುದರಿಂದ ಆ ಪ್ರಕಾರ ತಿಂಗಳಿಗೆ 42 ಸಾವಿರ ರು. ಪಡೆಯಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ