ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಸಾರುವವರಿಗೆ ನೀಡಲಾಗುವ ಗಾಂಧಿ ಶಾಂತಿ ಪ್ರಶಸ್ತಿಯ 2021ನೇ ಸಾಲಿನ ಪುರಸ್ಕಾರವನ್ನು ಗೋರಖಪುರದ ಗೀತಾ ಪ್ರೆಸ್‌ಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಗೀತಾ ಪ್ರೆಸ್‌ಗೆ ಈ ಪ್ರಶಸ್ತಿ ನೀಡುತ್ತಿರುವುದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ನವದೆಹಲಿ: ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಸಾರುವವರಿಗೆ ನೀಡಲಾಗುವ ಗಾಂಧಿ ಶಾಂತಿ ಪ್ರಶಸ್ತಿಯ 2021ನೇ ಸಾಲಿನ ಪುರಸ್ಕಾರವನ್ನು ಗೋರಖಪುರದ ಗೀತಾ ಪ್ರೆಸ್‌ಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಪ್ರಶಸ್ತಿ ಪ್ರದಾನ ಸಮಿತಿಯ ಅಧ್ಯಕ್ಷರಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೀತಾ ಪ್ರೆಸ್ ಹೆಸರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಮಾಜದಲ್ಲಿ ಅಹಿಂಸೆಯ ಮಾರ್ಗದಲ್ಲಿ ಮಾನವೀಯ ಮೌಲ್ಯಗಳ ಮೇಲೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಉನ್ನತಿಗೆ ಕೆಲಸ ಮಾಡಿದ ಗೀತಾ ಪ್ರೆಸ್ ಕೊಡುಗೆಯನ್ನು ಸ್ಮರಿಸಿದ ಮೋದಿ, ಪ್ರೆಸ್ ಸ್ಥಾಪನೆಯಾಗಿ ಸರಿಯಾಗಿ 100 ವರ್ಷಕ್ಕೆ ಈ ಪ್ರಶಸ್ತಿ ಲಭಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ. ಗೀತಾ ಪ್ರೆಸ್ ಈವರೆಗೂ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದ್ದು, ಅದರಲ್ಲಿ 16.21 ಕೋಟಿ ಭಗವದ್ಗೀತೆ ಪುಸ್ತಕಗಳೇ ಆಗಿವೆ.
'ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಎರಡಕ್ಕೂ ಸಮಾನ ಸ್ಥಾನಮಾನವಿದೆ..' ಹೈಕೋರ್ಟ್ ಪ್ರಶ್ನೆಗೆ ಕೇಂದ್ರದ ಉತ್ತರ!
ಆದರೆ ಗೀತಾ ಪ್ರೆಸ್‌ಗೆ ಈ ಪ್ರಶಸ್ತಿ ನೀಡುತ್ತಿರುವುದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರ ಹಾಕಿದ ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್,' ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಗೋರಖ್‌ಪುರದ ಗೀತಾ ಪ್ರೆಸ್‌ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಅವರ ಪ್ರಕಾಶನದ 2015ರಲ್ಲಿ ಬಿಡಗಡೆಯಾದ ಬಹಳ ಉತ್ತಮ ಜೀವನ ಚರಿತ್ರೆಯಲ್ಲಿ ಮುಕುಲ್ ಅವರು ಮಹಾತ್ಮ ಗಾಂಧಿ ಜೊತೆ ಹೊಂದಿದ್ದ ಕಾದಾಟದ ಸಂಬಂಧದ ಬಗ್ಗೆ ಹಾಗೂ ಅವರ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ವ್ಯವಸ್ಥೆಯಲ್ಲಿ ಅವರೊಂದಿಗೆ ನಡೆಸಿದ ಹೋರಾಟದ ಬಗ್ಗೆ ಬಹಿರಂಗಪಡಿಸಿದ್ದರು. ಹೀಗಿರುವಾಗ ಅಂತವರಿಗೆ ಶಾಂತಿ ಪ್ರಶಸ್ತಿ ನೀಡಿರುವುದು ಹಾಸ್ಯಾಸ್ಪದ ವಿಚಾರವಾಗಿದೆ ಹಾಗೂ ಇದು ಒಂದು ರೀತಿಯಲ್ಲಿ ಸಾರ್ವಕರ್ ಹಾಗೂ ಗೋಡ್ಸೆಗೆ ಪ್ರಶಸ್ತಿ ನೀಡಿದಂತೆ ಎಂದು ಜೈ ರಾಮ್ ರಮೇಶ್ ಕಿಡಿಕಾರಿದ್ದಾರೆ.
Bhagavad Geeta: ಒಳ್ಳೆಯವರ ಜೊತೆ ಒಳ್ಳೆಯವನಾಗು ಆದ್ರೆ ಕೆಟ್ಟವನ ಜೊತೆ…? ಭಗವದ್ಗೀತೆ ಹೇಳೋದೇನು?
The Gandhi Peace Prize for 2021 has been conferred on the Gita Press at Gorakhpur which is celebrating its centenary this year. There is a very fine biography from 2015 of this organisation by Akshaya Mukul in which he unearths the stormy relations it had with the Mahatma and the… pic.twitter.com/PqoOXa90e6
— Jairam Ramesh (@Jairam_Ramesh)ಗಾಂಧಿ ಶಾಂತಿ ಪ್ರಶಸ್ತಿಯು ಮಹಾತ್ಮ ಗಾಂಧಿಯವರ 125 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅವರು ಪ್ರತಿಪಾದಿಸಿದ ಆದರ್ಶಗಳ ಗೌರವಾರ್ಥ 1995 ರಲ್ಲಿ ಭಾರತ ಸರ್ಕಾರವು ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿದೆ. ಗೀತಾ ಪ್ರೆಸ್ ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ವಿಶ್ವದ ಅತಿದೊಡ್ಡ ಮುದ್ರಕ ಅಥವಾ ಪ್ರಕಾಶಕರರಲ್ಲಿ ಒಬ್ಬರಾದ ಗೀತಾ ಪ್ರೆಸ್ ಕಳೆದ 100 ವರ್ಷಗಳಲ್ಲಿ ಸಾಕಷ್ಟು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಗೋರಖ್‌ಪುರದ ಗೀತಾ ಪ್ರೆಸ್‌ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಯ ಲಭಿಸಿರುವುದಕ್ಕೆ ಅಭಿನಂದನೆಗಳು, ಅವರು ಕಳೆದ 100 ವರ್ಷಗಳಲ್ಲಿ ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳನ್ನು ಹೆಚ್ಚಿಸಲು ಶ್ಲಾಘನೀಯವಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
With the win in Karnataka, Congress has now openly unleashed a war against India's civilisational values and rich legacy, be it in the form of repeal of anti-conversion law or criticism against Geeta Press.people of India will resist this aggression and reassert our…
— Himanta Biswa Sarma (@himantabiswa)ಈ ಪ್ರಶಸ್ತಿಯೂ ಒಂದು ಕೋಟಿ ಬಹುಮಾನ ಮೊತ್ತವನ್ನು ಹೊಂದಿದೆ. ಈ ಪ್ರಶಸ್ತಿ ಸಂಸ್ಥೆಗೆ ಸಿಕ್ಕಿರುವುದು ಅತ್ಯಂತ ದೊಡ್ಡ ಗೌರವ ಎಂದು ಗೀತಾಪ್ರೆಸ್ ಹೇಳಿದೆ. ಆದರೆ ಈ ಪ್ರಶಸ್ತಿಯ ಮೊತ್ತವನ್ನು ತಮ್ಮ ಸಂಸ್ಥೆ ಸ್ವೀಕರಿಸುವುದಿಲ್ಲ . ಪ್ರಕಾಶಕರು ಯಾವುದೇ ರೀತಿಯ ದೇಣಿಗೆಯನ್ನು ಸ್ವೀಕರಿಸದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿರುವುದರಿಂದ ಕೇವಲ ಪ್ರಶಸ್ತಿ ಮಾತ್ರ ಸ್ವೀಕರಿಸಲಾಗುತ್ತದೆ ನಗದು ಸ್ವೀಕರಿಸುವುದಿಲ್ಲ ಎಂದು ಸಂಸ್ಥೆ ಹೇಳಿದೆ.
Congress has sheer hatred for anything Hindu
From Hindu terror to opposing Ram Mandir to Bhagwa terror to blaming Hindus for 26/11 & now attacking Gita Press
Congress = Hindu hating party! They wanted to ensure Ram Mandir is never built
Does Uddhav Sena agree with their… pic.twitter.com/f1CKXzSe6R