Work From Office: ಐಟಿ ಉದ್ಯೋಗಿಗಳಿಗೆ ಕಚೇರಿಗೆ ಸ್ವಾಗತಿಸಲು ಸಜ್ಜಾದ ಭಾರತೀಯ ಟೆಕ್ ಕಂಪನಿಗಳು!

By Suvarna News  |  First Published Feb 23, 2022, 9:31 AM IST

ಸೆಪ್ಟೆಂಬರ್‌ನಲ್ಲೇ ಕಂಪನಿಗಳು ಆಫೀಸಿಗೆ ಹಾಜರಾಗಲು ತಿಳಿಸಿದರೂ ದೇಶದಲ್ಲಿ ಒಮಿಕ್ರೋನ್‌ ಪ್ರಕರಣಗಳು ಹೆಚ್ಚಳವಾಗುತ್ತಿದ್ದಂತೆ ಮತ್ತೆ ವರ್ಕ ಫ್ರಂ ಹೋಂ ಮುಂದುವರೆಸಲು ಹೇಳಿದ್ದವು.


ನವದೆಹಲಿ (ಫೆ. 23): ದೊಡ್ಡ ಐಟಿ ಕಂಪನಿಗಳಾದ (IT Companies) ಟಿಸಿಎಸ್‌, ಇಸ್ಫೋಸಿಸ್‌, ವಿಪ್ರೋ, ಕಾಗ್ನಿಜೆಂಟ್‌ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಮತ್ತೆ ಆಫೀಸಿಗೆ ಬರಲು ತಿಳಿಸಿದ್ದಾರೆ ಎಂದು ವರದಿಳು ಹೇಳಿವೆ. ಸೆಪ್ಟೆಂಬರ್‌ನಲ್ಲೇ ಕಂಪನಿಗಳು ಆಫೀಸಿಗೆ ಹಾಜರಾಗಲು ತಿಳಿಸಿದರೂ ದೇಶದಲ್ಲಿ ಒಮಿಕ್ರೋನ್‌ (Omicron Variant) ಪ್ರಕರಣಗಳು ಹೆಚ್ಚಳವಾಗುತ್ತಿದ್ದಂತೆ ಮತ್ತೆ ವರ್ಕ ಫ್ರಂ ಹೋಂ ಮುಂದುವರೆಸಲು ಹೇಳಿದ್ದವು.

ಇದೀಗ ಸೋಂಕು ಇಳಿಕೆ ಕಾರಣ, ವಿಪ್ರೋ ಮಾರ್ಚ್ 3 ರಿಂದ ಎರಡೂ ಡೋಸನ್ನು ಪಡೆದುಕೊಂಡ ವ್ಯವಸ್ಥಾಪನಾ ಮಟ್ಟದ ಉದ್ಯೋಗಿಗಳಿಗೆ ಆಫೀಸಿಗೆ ಹಾಜರಾಗಲು ತಿಳಿಸಿದೆ. ಉಳಿದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಬಹುದು ಎಂದು ಕಂಪನಿ ತಿಳಿಸಿದೆ. 

Tap to resize

Latest Videos

ಇದನ್ನೂ ಓದಿ: Work from Home Challenges: ಹೇಳಿದಷ್ಟು ಯಾವುದೂ ಸುಲಭವಲ್ಲ, ಇದ್ರಲ್ಲೂ ಇದೆ ಅನೇಕ ಸವಾಲು!

ಕಾಗ್ನಿಜೆಂಟ್‌ (Cognizant) ಏಪ್ರಿಲ್‌ನಿಂದ ಸಿಬ್ಬಂದಿಗಳಿಗೆ ಆಫೀಸಿಗೆ ಬರಲು ತಿಳಿಸಿದೆ. ಟೆಕ್ ದೈತ್ಯ ಕಾಗ್ನಿಜೆಂಟ್ ಕೂಡ ಕಚೇರಿಯನ್ನು ಪುನಃ ತೆರೆಯಲು ಯೋಜಿಸುತ್ತಿದೆ. ಆದಾಗ್ಯೂ, ಉದ್ಯೋಗಿಗಳಿಗೆ ಇದು ಕಡ್ಡಾಯವಲ್ಲ. ಕಾಗ್ನಿಜೆಂಟ್ ಉದ್ಯೋಗಿಗಳನ್ನು ಏಪ್ರಿಲ್‌ನಿಂದ ಸ್ವಯಂಪ್ರೇರಿತ ಆಧಾರದ ಮೇಲೆ ಕಚೇರಿಗೆ ಹಿಂತಿರುಗುವಂತೆ ಹೇಳಿದೆ. ಕಾಗ್ನಿಜೆಂಟ್ ಹಂತ ಹಂತವಾಗಿ ಕಚೇರಿಗಳನ್ನು ಪುನಃ ತೆರೆಯಲು ಯೋಜಿಸುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಟಿಸಿಎಸ್‌ (TCS) ಹಾಗೂ ವಿಪ್ರೋ (Wipro) ಉದ್ಯೋಗಿಗಳು ಹೈಬ್ರಿಡ್‌ ಮಾದರಿಯಲ್ಲಿ ಮನೆಯಿಂದಲೇ ಕೆಲಸ ನಡೆಸುತ್ತ ಅಗತ್ಯವಿದ್ದಾಗ ಆಫೀಸಿಗೆ ಹಾಜರಾಗಬಹುದಾಗಿದೆ.‌ ಟಿಸಿಎಸ್ ತನ್ನ ಉದ್ಯೋಗಿಗಳಿಗೆ ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಿದೆ, ಅಂದರೆ ಅವರು ಮನೆಯಿಂದಲೇ ಕೆಲಸವನ್ನು ಮುಂದುವರಿಸಬಹುದು ಮತ್ತು ಅಗತ್ಯವಿದ್ದಾಗ ಕಚೇರಿಗೆ ಬರಬಹುದು. ಅದೇ ರೀತಿ ಇನ್ಫೋಸಿಸ್ (Infosys) ಕೂಡ ಮುಂದಿನ ಒಂದೆರಡು ತಿಂಗಳಲ್ಲಿ ತನ್ನ ಉದ್ಯೋಗಿಗಳಿಗೆ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲಿದೆ.

2020 ರ ಜನವರಿ ಅಂತ್ಯದಲ್ಲಿ ದೇಶದಲ್ಲಿ ಕೋವಿಡ್ -19 ಹೊರಹೊಮ್ಮಿದಾಗಿನಿಂದ, ಹೆಚ್ಚಿನ ಕಚೇರಿಗೆ ಹೋಗುವವರಿಗೆ ಮನೆಯಿಂದ ಕೆಲಸ ಮಾಡುವುದು (WFH) ಹೊಸ ಸಾಮಾನ್ಯವಾಗಿದೆ. ಆದಾಗ್ಯೂ, ಕೈಗಾರಿಕಾ ವಲಯ, ಸರ್ಕಾರಿ ಸೇವೆಗಳಲ್ಲಿ ಕೆಲಸ ಮಾಡುವ ಜನರು ಕಚೇರಿಗಳಿಗೆ ಹಾಜರಾಗುತ್ತಿದ್ದಾರೆ. 

ಇದನ್ನೂ ಓದಿ: Work From Home: ಗರ್ಭಿಣಿಯಾದಳು, ಮಗು ಹೆತ್ತಳು, ಕಚೇರಿಯಲ್ಲಿ ಗೊತ್ತೇ ಇಲ್ಲ!

ವಿದೇಶದಲ್ಲಿ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ: ಭಾರತ-ಯುಎಇ (UAE) ವ್ಯಾಪಾರ ಒಪ್ಪಂದದ ಭಾಗವಾಗಿ, ಯುಎಇಯಲ್ಲಿ ಪ್ರತಿಷ್ಟಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institute of Technology) ಸ್ಥಾಪಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ವಿದೇಶದಲ್ಲಿ ಐಐಟಿ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು. 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿಗಳು) ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಕ್ಟ್, 1961 ರಿಂದ ನಿಯಂತ್ರಿಸಲ್ಪಡುತ್ತವೆ ಹಾಗೂ  ಪ್ರಸ್ತುತ ಭಾರತದಲ್ಲಿ ಒಟ್ಟು 23 ಐಐಟಿಗಳು ಬಿಟೆಕ್ ಪದವಿಯನ್ನು ನೀಡುತ್ತವೆ.  ದೇಶದ ಅಗ್ರ ಐಐಟಿಗಳಲ್ಲಿ ಐಐಟಿ ದೆಹಲಿ, ಬಾಂಬೆ, ಖರಗ್‌ಪುರ, ಮದ್ರಾಸ್ ಮತ್ತು ಇತರ ಹಲವು ಸೇರಿವೆ.

ಭಾರತ ಮತ್ತು ಯುಎಇ ಐತಿಹಾಸಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (CEPA) ಸಹಿ ಹಾಕಿದ್ದು, ಮುಂದಿನ ಐದು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಸರಕು ವ್ಯಾಪಾರವನ್ನು US $ 100 ಶತಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ೯Sheikh Mohamed bin Zayed Al Nahyan) ನಡುವಿನ ವರ್ಚುವಲ್ ಶೃಂಗಸಭೆಯ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

click me!