2841 ಕಂಪನಿಗಳ ಮೇಲೆ ಐಟಿ ದಾಳಿ: 4 ವರ್ಷದಲ್ಲಿ 4800 ಕೋಟಿ ರೂ ಜಪ್ತಿ

Published : Apr 04, 2023, 12:06 PM ISTUpdated : Apr 04, 2023, 12:07 PM IST
2841 ಕಂಪನಿಗಳ ಮೇಲೆ ಐಟಿ ದಾಳಿ: 4 ವರ್ಷದಲ್ಲಿ 4800 ಕೋಟಿ ರೂ ಜಪ್ತಿ

ಸಾರಾಂಶ

ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ 2,841 ಗ್ರೂಪ್‌ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 4,800 ಕೋಟಿ ರು.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ತಿಳಿಸಿದೆ. 

ನವದೆಹಲಿ: ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ 2,841 ಗ್ರೂಪ್‌ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 4,800 ಕೋಟಿ ರು.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ತಿಳಿಸಿದೆ. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಈ ಉತ್ತರ ನೀಡಿ, ಶಂಕಾಸ್ಪದ ವಹಿವಾಟು ಮಾಡಿದ ಹಾಗೂ ಹೆಚ್ಚು ತೆರಿಗೆ ವಂಚನೆ ಮಾಡಿದ ಕಂಪನಿಗಳ ವಿರುದ್ಧ ದಾಳಿ ನಡೆಸಲಾಗಿದೆ ಎಂದಿದ್ದಾರೆ.

2019-20ರಿಂದ 2022-23ರವರೆಗಿನ 4 ವಿತ್ತೀಯ ಸಾಲಿನ ಅಂಕಿ ನೀಡಿದ ಸಚಿವರು, ಈ ಎಲ್ಲ ನಾಲ್ಕೂ ಸಾಲುಗಳಲ್ಲಿ ಅತಿ ಹೆಚ್ಚು ಎಂದರೆ 1533.23 ಕೋಟಿ ರು. ಆಸ್ತಿಯನ್ನು 2022-23ನೇ ಸಾಲಿನಲ್ಲಿ ಜಪ್ತಿ ಮಾಡಲಾಗಿದೆ. ಈ ಸಾಲಿನಲ್ಲಿ 602 ಗ್ರೂಪ್‌ಗಳಲ್ಲಿ ಶೋಧ ನಡೆಸಲಾಗಿದೆ ಎಂದರು.  2021-22ರಲ್ಲಿ 686 ಗುಂಪುಗಳ ವಿರುದ್ಧ ಶೋಧದ ನಂತರ 1,159.59 ಕೋಟಿ ರು. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ, 2020-21ರಲ್ಲಿ 569 ಗುಂಪುಗಳ ವಿರುದ್ಧ ಕ್ರಮ ಜರುಗಿಸಿ 880.83 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಮತ್ತು 2019-20ರಲ್ಲಿ 984 ಗುಂಪುಗಳ ವಿರುದ್ಧ ಶೋಧ ನಡೆಸಿ 1,289.47 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರಿಸಿದರು.

ವಿಧಾನಸಭಾ ಚುನಾವಣೆಗೂ ಮುನ್ನ ಕಂಟ್ರೋಲ್ ರೂಂ ತೆರೆದ ಐಟಿ ಇಲಾಖೆ: ದುಡ್ಡು ಹಂಚೋಕೆ ಹೋದ್ರೆ ಜೈಲು ಗ್ಯಾರಂಟಿ!

ಇನ್ಮುಂದೆ ಅಂಗೈಯಲ್ಲಿ ತೆರಿಗೆ ಮಾಹಿತಿ; AIS ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದ ಆದಾಯ ತೆರಿಗೆ ಇಲಾಖೆ

 ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ 'ಎಐಎಸ್ ಫಾರ್ ಟ್ಯಾಕ್ಸ್ ಪೇಯರ್' ಎಂಬ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಇದು ತೆರಿಗೆದಾರರಿಗೆ ತಮ್ಮ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ (ಎಐಎಸ್) ನಲ್ಲಿರುವ ಮಾಹಿತಿಯನ್ನು ನೋಡಲು ಅವಕಾಶ ಕಲ್ಪಿಸುತ್ತದೆ. ಈ ಅಪ್ಲಿಕೇಷನ್ ಗೂಗಲ್ ಪ್ಲೇ ಹಾಗೂ ಆ್ಯಪ್  ಸ್ಟೋರ್ ನಲ್ಲಿ ಲಭ್ಯವಿದೆ. ಈ ಆ್ಯಪ್ ತೆರಿಗೆದಾರರಿಗೆ ಎಐಎಸ್/ ಟಿಐಎಸ್ ಕುರಿತು ತೆರಿಗೆದಾರರಿಗೆ ಸಂಪೂರ್ಣ ಚಿತ್ರಣ ಒದಗಿಸುವ ಗುರಿ ಹೊಂದಿದೆ. ತೆರಿಗೆದಾರರಿಗೆ ಸಂಬಂಧಿಸಿ ವಿವಿಧ ಮೂಲಗಳಿಂದ ಕಲೆ ಹಾಕಿರುವ ಮಾಹಿತಿಯನ್ನು ಇದು ತೋರಿಸುತ್ತದೆ. ತೆರಿಗೆದಾರರು ಈ ಮೊಬೈಲ್ ಆ್ಯಪ್ ಬಳಸಿ ಟಿಡಿಎಸ್/ ಟಿಸಿಎಸ್, ಡಿವಿಡೆಂಡ್ಸ್, ಷೇರು ವಹಿವಾಟುಗಳು, ತೆರಿಗೆ ಪಾವತಿಗಳು, ಆದಾಯ ತೆರಿಗೆ ರೀಫಂಡ್ಸ್ ಹಾಗೂ ಎಐಎಸ್/ಟಿಐಎಸ್ ನಲ್ಲಿರುವ ಇತರ ಮಾಹಿತಿ ನೋಡಬಹುದು. ಹಾಗೆಯೇ ಆ್ಯಪ್ ನಲ್ಲಿ ಲಭ್ಯವಿರುವ ಮಾಹಿತಿ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಎಐಎಸ್ ಆ್ಯಪ್ ಮೂಲಕ ತೆರಿಗೆದಾರರು ತಮ್ಮ ತೆರಿಗೆ ಪ್ರೊಫೈಲ್ ಅನ್ನೇ ನೋಡಬಹುದಾಗಿದೆ. ಇದರಿಂದ ತೆರಿಗೆ ಪಾವತಿಗೆ ಸಂಬಂಧಿಸಿದ ಗೊಂದಲಗಳು ಕೂಡ ತಗ್ಗಲಿವೆ.

ಎಐಎಸ್ ಅಂದ್ರೇನು
ಫಾರ್ಮ್ 26ASನಲ್ಲಿರುವ  ತೆರಿಗೆದಾರನ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಸೌಲಭ್ಯವೇ ವಾರ್ಷಿಕ ಮಾಹಿತಿ ವ್ಯವಸ್ಥೆ (AIS).ಇದರಲ್ಲಿ ಲಭ್ಯವಾಗುವ ಮಾಹಿತಿಗೆ ಸಂಬಂಧಿಸಿ ಅಭಿಪ್ರಾಯ ತಿಳಿಸಲು ತೆರಿಗೆದಾರರಿಗೆ ಅವಕಾಶವಿದೆ. ಈ ಅಭಿಪ್ರಾಯ ಅಥವಾ ಪೀಡ್ ಬ್ಯಾಕ್ ಬಳಿಕದ ರಿಪೋರ್ಟೆಡ್ ವ್ಯಾಲ್ಯೂ ಹಾಗೂ ಮಾಡಿಫೈಡ್ ವ್ಯಾಲ್ಯೂ ಅಂದರೆ ಪ್ರತಿ ವರ್ಗದಲ್ಲಿ ತೆರಿಗೆದಾರರ ಫೀಡ್ ಬ್ಯಾಕ್ ಪರಿಗಣಿಸಿದ ಬಳಿಕದ ವ್ಯಾಲ್ಯೂ ಇರುತ್ತದೆ.

ಉದ್ದೇಶವೇನು?
ತೆರಿಗೆದಾರರಿಗೆ ಅನ್ ಲೈನ್ ಫೀಡ್ ಬ್ಯಾಕ್ ಅವಕಾಶದ ಜೊತೆಗೆ ತೆರಿಗೆ ಕುರಿತು ಸಂಪೂರ್ಣ ಮಾಹಿತಿ ಒದಗಿಸೋದು ಎಐಎಸ್ ಉದ್ದೇಶವಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯನ್ನು ಇನ್ನಷ್ಟು ಸುಗಮವಾಗಿಸಲು ಎಐಎಸ್ ನೆರವು ನೀಡುತ್ತದೆ.

ಬಳಸೋದು ಹೇಗೆ?
ಈ ಮೊಬೈಲ್ ಆ್ಯಪ್ ಬಳಸಲು ತೆರಿಗೆದಾರರು ಮೊದಲಿಗೆ ಪ್ಯಾನ್ ಸಂಖ್ಯೆ ನೀಡುವ ಮೂಲಕ ಆ್ಯಪ್ ನಲ್ಲಿ ನೋಂದಣಿ ಮಾಡಿಸಬೇಕು. ಇದಾದ ಬಳಿಕ ತೆರಿಗೆದಾರರ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಗೆ ಕಳುಹಿಸಿರುವ ಒಟಿಪಿ ಬಳಸಿ ದೃಢೀಕರಿಸಬೇಕು. ಒಮ್ಮೆ ದೃಢೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತೆರಿಗೆದಾರ ನಾಲ್ಕು ಅಂಕೆಯ ಪಿನ್  ಅಥವಾ ಪಾಸ್ ವರ್ಡ್ ಅನ್ನು ಅಳವಡಿಸಬೇಕು. ಈ ಪಿನ್ ಮೂಲಕವೇ ಮೊಬೈಲ್ ಆ್ಯಪ್ ಗೆ ಲಾಗಿನ್ ಆಗಬಹುದು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !