ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರು ನಾಮಕರಣ ಮಾಡಿದ ಚೀನಾ: ಮತ್ತೆ ನರಿ ಬುದ್ಧಿ ಪ್ರದರ್ಶಿಸಿದ ಜಿನ್‌ಪಿಂಗ್

By BK Ashwin  |  First Published Apr 4, 2023, 11:39 AM IST

ಚೀನಾದ ಕ್ಯಾಬಿನೆಟ್, ಸ್ಟೇಟ್ ಕೌನ್ಸಿಲ್ ನೀಡಿದ ಭೌಗೋಳಿಕ ಹೆಸರುಗಳ ಮೇಲಿನ ನಿಯಮಗಳಿಗೆ ಅನುಸಾರವಾಗಿ ಚೈನೀಸ್‌, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಹೆಸರುಗಳ ಗುಂಪನ್ನು ಬಿಡುಗಡೆ ಮಾಡಿರುವುದಾಗಿ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಹೇಳಿಕೊಂಡಿದೆ.


ನವದೆಹಲಿ (ಏಪ್ರಿಲ್‌ 4, 2023): ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶವನ್ನು ತನ್ನದೇ ಎಂದು ಚೀನಾ ಆಗಾಗ್ಗೆ ಹೇಳಿಕೊಳ್ಳುತ್ತಿರುತ್ತದೆ. ಇದೇ ರೀತಿ, ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಮತ್ತೊಮ್ಮೆ ಒತ್ತಿಹೇಳುವ ಪ್ರಯತ್ನದ ಭಾಗವಾಗಿ ಚೀನಾವು ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಹೊಸ ಹೆಸರುಗಳನ್ನು ಬಿಡುಗಡೆ ಮಾಡಿದೆ. ಇನ್ನು, ಈ ರೀತಿ ಮಾಡಿರುವುದು ಇದೇ ಮೊದಲೇನಲ್ಲ. ಮೂರನೇ ಬಾರಿಗೆ ಚೀನಾವು ಅರುಣಾಚಲ ಪ್ರದೇಶದ ಸ್ಥಳಗಳಿಗೆ 'ಮರುನಾಮಕರಣ' ಮಾಡಿದ್ದು, ಅದನ್ನು "ಜಂಗ್ನಾನ್, ಟಿಬೆಟ್‌ನ ದಕ್ಷಿಣ ಭಾಗ" ಎಂದು ಕರೆಯುತ್ತದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ನಿನ್ನೆ ಚೀನಾದ ಕ್ಯಾಬಿನೆಟ್, ಸ್ಟೇಟ್ ಕೌನ್ಸಿಲ್ ನೀಡಿದ ಭೌಗೋಳಿಕ ಹೆಸರುಗಳ ಮೇಲಿನ ನಿಯಮಗಳಿಗೆ ಅನುಸಾರವಾಗಿ ಚೈನೀಸ್‌, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಹೆಸರುಗಳ ಗುಂಪನ್ನು ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿದೆ. ಚೀನಾ ಬಿಡುಗಡೆ ಮಾಡಿರುವ ಹೆಸರುಗಳ ಪಟ್ಟಿಯಲ್ಲಿ ಐದು ಪರ್ವತ ಶಿಖರಗಳು, ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು ಮತ್ತು ಎರಡು ನದಿಗಳು ಸೇರಿವೆ. ಈ ಬಗ್ಗೆ ಚೀನಾದ ಸರ್ಕಾರಿ ಟ್ಯಾಬ್ಲಾಯ್ಡ್ ಗ್ಲೋಬಲ್ ಟೈಮ್ಸ್ ಸೋಮವಾರ ಸರ್ಕಾರದ ಅಧಿಸೂಚನೆಯ ವರದಿಯಲ್ಲಿ ತಿಳಿಸಿದೆ.

Tap to resize

Latest Videos

ಇದನ್ನು ಓದಿ: ಬೌದ್ಧರ 3ನೇ ಉನ್ನತ ಹುದ್ದೆಗೆ ಅಮೆರಿಕದಲ್ಲಿ ಜನಿಸಿದ 8ರ ಬಾಲಕನ ನೇಮಿಸಿದ ದಲೈ ಲಾಮಾ: ಚೀನಾ ಕೆಂಗಣ್ಣು?

ಈ ಹಿಂದೆಯೂ 2017 ಮತ್ತು 2021 ರಲ್ಲಿ ಅಂತಹ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿತ್ತು. ಚೀನಾ 2017 ರಲ್ಲಿ ಆರು ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಮತ್ತೆ 2021 ರಲ್ಲಿ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ 'ಮರುನಾಮಕರಣ' ಮಾಡಿದೆ. ಆದರೆ, ಆ ಎರಡೂ ಸಂದರ್ಭಗಳಲ್ಲಿ ರಾಜ್ಯವು "ಯಾವಾಗಲೂ" ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. 

"ಚೀನಾವು ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣಕ್ಕೆ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಡಿಸೆಂಬರ್ 2021 ರಲ್ಲಿ ಹೇಳಿದ್ದರು. ಹಾಗೂ, ಹೆಸರು ಬದಲಾಯಿಸುವುದರಿಂದ ಈ ಸತ್ಯವನ್ನು ಬದಲಾಯಿಸಲಾಗಿಲ್ಲ ಎಂದೂ ತಿರುಗೇಟು ನೀಡಿದ್ದರು. ಚೀನಾದಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಪೀಪಲ್ಸ್ ಡೈಲಿ ಗುಂಪಿನ ಭಾಗವಾಗಿರುವ ದಿ ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾದ ಅಧಿಕಾರಿಗಳು ಈ ಕ್ರಮವನ್ನು 'ಪ್ರಮಾಣೀಕೃತ ಭೌಗೋಳಿಕ ಹೆಸರುಗಳು' ಎಂದು ಕರೆಯುತ್ತಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣಗಳಿಗೆ 12 ಬಿಲಿಯನ್ ಡಾಲರ್ ಹೂಡಿಕೆ: ಚೀನಾ ಆರ್ಥಿಕತೆ ಮೀರಿಸಲು ಭಾರತದ ಮಾಸ್ಟರ್‌ಪ್ಲ್ಯಾನ್‌..!

ದಲೈ ಲಾಮಾ ಅವರು 2017ರಲ್ಲಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ನಂತರದ ಕೆಲ ದಿನಗಳಲ್ಲಿ ಮೊದಲ ಬಾರಿ ಚೀನಾ ಈ ರೀತಿ ಕ್ಯಾತೆ ತೆಗೆದಿತ್ತು. ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ಅಲ್ಲಿಗೆ ಭೇಟಿ ನೀಡಿದ್ದಕ್ಕೆ ಚೀನಾ ಕಟುವಾಗಿ ಟೀಕಿಸಿತ್ತು. 1950 ರಲ್ಲಿ ಚೀನಾ ಟಿಬೆಟ್‌ ಅನ್ನು ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ದಲೈ ಲಾಮಾ ಅಲ್ಲಿಂದ ಅರುಣಾಚಲ ಪ್ರದೇಶದ ತವಾಂಗ್ ಮೂಲಕ ಪಲಾಯನ ಮಾಡಿದರು ಮತ್ತು 1959 ರಲ್ಲಿ ಭಾರತದಲ್ಲಿ ಆಶ್ರಯ ಪಡೆದರು.

ಪೂರ್ವ ಲಡಾಖ್‌ನಲ್ಲಿ ತಿಂಗಳುಗಳ ಕಾಲ ಗಡಿ ಬಿಕ್ಕಟ್ಟಿನ ಮಧ್ಯೆ ಬಂದ ಮುಖಾಮುಖಿಯಲ್ಲಿ, ಕಳೆದ ಡಿಸೆಂಬರ್‌ನಲ್ಲಿ ರಾಜ್ಯದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಪಡೆಗಳು ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಘರ್ಷಣೆ ನಡೆಸಿದ್ದವು. ಆ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾ LAC ಜೊತೆಗೆ ಯಥಾಸ್ಥಿತಿಯನ್ನು "ಏಕಪಕ್ಷೀಯವಾಗಿ" ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:  ಚೀನಾಗೆ ಸಿಕ್ತು ಭರ್ಜರಿ ಖಜಾನೆ: 50 ಟನ್‌ ಉತ್ತಮ ಗುಣಮಟ್ಟದ ಬಂಗಾರದ ಗಣಿ ಪತ್ತೆ; ಬೆಲೆ ಎಷ್ಟು ನೋಡಿ..

click me!