ಬಾಹ್ಯಾಕಾಶ ಕ್ಷೇತ್ರ ಖಾಸಗಿ ಕ್ಷೇತ್ರಕ್ಕೆ ತೆರೆದ ಕೇಂದ್ರ ಸರ್ಕಾರ: ಇಸ್ರೋದ 9 ಸಂಘಟನೆ ಪ್ರಶ್ನೆ

Published : Sep 06, 2026, 07:08 AM IST
LMV 3 Isro

ಸಾರಾಂಶ

ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ತೆರೆದ ಸರ್ಕಾರದ ನಿರ್ಧಾರಕ್ಕೆ ಇಸ್ರೋದ ನೌಕರರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಇಸ್ರೋ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ತಂತ್ರಜ್ಞಾನ ವರ್ಗಾವಣೆ ಮತ್ತು ಸಾರ್ವಜನಿಕ ವಲಯದ ಪಾತ್ರದ ಬಗ್ಗೆ ಲಿಖಿತ ಸ್ಪಷ್ಟೀಕರಣವನ್ನು ಕೋರಿವೆ.

ಬೆಂಗಳೂರು (ಸೆ.6): ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ತೆರೆದ ಕೇಂದ್ರ ಸರ್ಕಾರದ ನಡೆಗೆ ಇಸ್ರೋದ ಸಾವಿರಾರು ಸಿಬ್ಬಂದಿಯನ್ನು ಪ್ರತಿನಿಧಿಸುವ 9 ನೌಕರರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಈ ಕುರಿತು ಇಸ್ರೋ ಅಧ್ಯಕ್ಷರಿಂದ ಲಿಖಿತ ಸ್ಪಷ್ಟೀಕರಣ ಕೇಳಿವೆ. ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ದೇಶದ ಆಸ್ತಿ. ಈ ತಂತ್ರಜ್ಞಾನದ ವರ್ಗಾವಣೆ ಪಾರದರ್ಶಕವಾಗಿರಬೇಕು, ಉತ್ತರದಾಯಿತ್ವ, ವ್ಯೂಹಾತ್ಮಕ, ಸುರಕ್ಷಿತ ಹಾಗೂ ಉದ್ಯೋಗಿಗಳನ್ನು ಪರಿಗಣಿಸಿ ನಡೆಯಬೇಕು. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಈ ಕುರಿತು ಮಾಹಿತಿ ನೀಡಬೇಕು, ಅವರ ಅಭಿಪ್ರಾಯ ಪಡೆಯಬೇಕು ಎಂದು ಇಸ್ರೋ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಉದ್ಯೋಗಿಗಳ ಸಂಘಟನೆಗಳು ತಿಳಿಸಿವೆ.

ಇಸ್ರೋ ಸ್ಟಾಪ್‌ ಅಸೋಸಿಯೇಷನ್‌, ಎಚ್‌ಎಆರ್‌ ಎಂಪ್ಲಾಯಿಸ್‌ ಅಸೋಸಿಯೇಷನ್‌, ಐಸಾಕ್‌ ಎಂಪ್ಲಾಯಿಸ್‌ ಅಸೋಸಿಯೇಷನ್‌, ಇಸ್ರೋ ಸ್ಟಾಪ್‌ ಅಸೋಸಿಯೇಷನ್‌-ಎಲ್‌ಪಿಎಸ್‌ಸಿ ಸೇರಿ ಒಂಬತ್ತು ಸಂಘಟನಗೆಳು ಈ ಪತ್ರಕ್ಕೆ ಸಹಿಹಾಕಿವೆ.

ಇಸ್ರೋದ ಭವಿಷ್ಯ ಏನು?

ವಿಶೇಷವಾಗಿ ಪಿಎಸ್‌ಎಲ್ವಿ, ಎಲ್‌ವಿಎಂ-3, ಎಸ್‌ಎಸ್‌ಎಲ್‌ವಿ ಮತ್ತು ಭವಿಷ್ಯದ ರಾಕೆಟ್‌ಗಳ ಉಡ್ಡಯನ, ವಿನ್ಯಾಸ, ಅಭಿವೃದ್ಧಿ, ಜೋಡಣೆ ಕಾರ್ಯವು ಮುಂದುವರಿಯಲಿದೆಯೇ? ಅವು ಬಂದ್‌ ಆಗಲಿದೆಯೇ? ಪ್ರಸ್ತಾಪಿತ ಪಿಎಸ್‌ಎಲ್‌ವಿ/ಎಲ್‌ವಿಎಂ-3 ಉತ್ಪಾದನೆಯ ವರ್ಗಾವಣೆಯಿಂದ ಸಾರ್ವಜನಿಕ ವಲಯದ ಕಂಪನಿಗಳನ್ನು ಹೊರಗಿಡಲು ನಿರ್ಧರಿಸಲಾಗಿದೆಯೇ? ಅಂಥ ಕ್ರಮಕ್ಕೆ ನಿಮ್ಮ ಸಮರ್ಥನೆ ಏನು ಎಂದು ಪ್ರಶ್ನಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರೇ ಗೊತ್ತಿಲ್ಲದ 6 ಪಕ್ಷಗಳಿಗೆ ₹1700 ಕೋಟಿ ದೇಣಿಗೆ, 5 ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ನಿಗೂಢ ಹಣ ಪಾವತಿ
Nationl News Live: ಬಾಹ್ಯಾಕಾಶ ಕ್ಷೇತ್ರ ಖಾಸಗಿ ಕ್ಷೇತ್ರಕ್ಕೆ ತೆರೆದ ಕೇಂದ್ರ ಸರ್ಕಾರ - ಇಸ್ರೋದ 9 ಸಂಘಟನೆ ಪ್ರಶ್ನೆ