ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆ ತಂದ ಮೊದಲ ವಿಮಾನ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ನವದೆಹಲಿ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆ ತಂದ ಮೊದಲ ವಿಮಾನ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಆಪರೇಷನ್ ಅಜಯ್ ಹೆಸರಿನಲ್ಲಿ ಭಾರತ ಸರ್ಕಾರ ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ವಿಶೇಷ ವಿಮಾನ ಕಳುಹಿಸಿತ್ತು. ಅದರಂತೆ ಈಗ ಮೊದಲ ಬ್ಯಾಚ್‌ನಲ್ಲಿ ಏರ್ ಇಂಡಿಯಾ ವಿಮಾನದ ಮೂಲಕ 212 ಭಾರತೀಯರು ತಾಯ್ನಾಡಿಗೆ ಆಗಮಿಸಿದ್ದಾರೆ.
ಇಸ್ರೇಲ್‌ನ ಬೆನ್ ಗುರಿಯೊನ್ ವಿಮಾನ ನಿಲ್ದಾಣದಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(International Airport) ಬಂದಿಳಿದ ಭಾರತೀಯರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆತ್ಮೀಯವಾಗಿ ಬರಮಾಡಿಕೊಂಡರು. ಮೊದಲ ಬ್ಯಾಚ್‌ನಲ್ಲಿ ದೆಹಲಿಗೆ ಬಂದಿಳಿದ 212 ಭಾರತೀಯರಲ್ಲಿ ಐವರು ಕನ್ನಡಿಗರೂ ಇದ್ದಾರೆ. ವಿಜಯಪುರ ಜಿಲ್ಲೆಯ ಈರಣ್ಣ, ಪ್ರೀತಿ ರಾಜಮನ್ನಾರ್, ಅಶ್ವಿನಿ ಕೃಷ್ಣ, ಕಲ್ಪನಾ ಮತ್ತು ಜಯೇಶ್ ತಾಕರ್ಶಿ ಎಂಬುವವರು ಈಗ ತಾಯ್ನಾಡಿಗೆ ಆಗಮಿಸಿದ್ದಾರೆ.
ಯುಎಸ್ ಸೆಕ್ರಟರಿಗೆ ಮಕ್ಕಳ ಮೃತದೇಹ ಫೋಟೋ ಹಂಚಿದ ಇಸ್ರೇಲ್, ಹಮಾಸ್ ಭೀಕರತೆಯ ಸಾಕ್ಷಿ!
ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸುಮಾರು 18 ಸಾವಿರಕ್ಕೂ ಹೆಚ್ಚು ಬಹುತೇಕ ಕರಾವಳಿ ಮೂಲದ ಭಾರತೀಯರು ಕೇರ್ ಟೇಕರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತಕ್ಕೆ ಮರಳಲು ಇಚ್ಛಿಸುವವರು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ನಂತರ ಆದ್ಯತೆ ಮೇರೆಗೆ ಅವವರನ್ನು ದೇಶಕ್ಕೆ ವಾಪಸ್ ಕರೆತರಲಾಗುತ್ತದೆ.
ಹಮಾಸ್ ಉಗ್ರರ ಬೆಂಬಲಿಸಿದ ಸಿರಿಯಾಗೆ ಸಂಕಷ್ಟ, 2 ವಿಮಾನ ನಿಲ್ದಾಣ ಮೇಲೆ ದಾಳಿ ನಡೆಸಿದ ಇಸ್ರೇಲ್!
| First flight carrying 212 Indian nationals from Israel, lands at Delhi airport; received by Union Minister Rajeev Chandrasekhar pic.twitter.com/uB71qIBmJy
— ANI (@ANI)ಇತ್ತ ದೆಹಲಿ ತಲುಪಿದ ಕನ್ನಡಿಗರನ್ನು ಬರ ಮಾಡಿಕೊಳ್ಳಲು ವಿಮಾನ ನಿಲ್ದಾಣ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ ಬಿ ಜಯಚಂದ್ರ ಆಗಮಿಸಿದ್ದು, ದೆಹಲಿಯಿಂದ ಕರ್ನಾಟಕಕ್ಕೆ ತೆರಳಲು ಸಾರಿಗೆ ವೆಚ್ಚದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದರು.