
ನವದೆಹಲಿ(ಅ.15) ಹಮಾಸ್ ಉಗ್ರರು ಏಕಾಏಕಿ ನಡೆಸಿದ ಭೀಕರ ದಾಳಿಗೆ ಇಸ್ರೇಲ್ ಕೊತ ಕೊತ ಕುದಿಯುತ್ತಿದೆ. ಹಮಾಸ್ ಉಗ್ರರ ವಿರುದ್ಧ ಯುದ್ಧ ಸಾರಿರುವ ಇಸ್ರೇಲ್ ಗಾಜಾ ಪಟ್ಟಿ ಮೇಲೆ ಬಾಂಬ್ ಮಳೆ ಸುರಿಸಿದೆ. ಇದೀಗ ಭೂಸೇನೆ ಮೂಲಕ ದಾಳಿ ಆರಂಭಿಸಿದೆ. ಅರಬ್ ರಾಷ್ಟ್ರ, ಇರಾನ್ ಸೇರಿದಂತೆ ಕೆಲ ರಾಷ್ಟ್ರಗಳ ಎಚ್ಚರಿಕೆಯನ್ನು ಲೆಕ್ಕಿಸದೆ ಇಸ್ರೇಲ್ ದಾಳಿ ಮುಂದುವರಿಸಿದೆ. ಇಷ್ಟು ದಿನ ಪ್ರತ್ಯುತ್ತರ ಮಾತನಾಡುತ್ತಿದ್ದ ಪ್ಯಾಲೆಸ್ತಿನ್ ಇದೀಗ ಸಂಧಾನ ಬಯಸುತ್ತಿದೆ. ಸದ್ಯ ಇಸ್ರೇಲ್ ಜೊತೆ ಸಂಧಾನ ನಡೆಸಿ ಯುದ್ಧ ನಿಲ್ಲಿಸುವ ತಾಖತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಗಿದೆ ಅನ್ನೋದು ಮನಗಂಡಿರುವ ಪ್ಯಾಲೆಸ್ತಿನ್, ಮಾತುಕತೆ ಸಜ್ಜಾಗಿದೆ.
ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಪ್ರಧಾನಿ ಮೋದಿ ಇಸ್ರೇಲ್‌ಗೆಂ ಬೆಂಬಲ ಸೂಚಿಸಿದ್ದರು. ಇದೇ ವೇಳೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಭಾರತ ಸರ್ಕಾರ ಸಲಹೆ ನೀಡಿತ್ತು. ಇದೀಗ ಮೋದಿ ಜೊತೆ ಮಾತುಕತೆ ನಡೆಸಲು ಪ್ಯಾಲೆಸ್ತಿನ್ ಅಧ್ಯಕ್ಷ ಮಹಮೌದ್ ಅಬ್ಬಾಸ್ ಮುಂದಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಹಮಾಸ್ ಉಗ್ರರಿಂದ ಜೀವ ಉಳಿಸಲು ಬಚ್ಚಿಕೊಂಡಿದ್ದ ತಾಯಿ ಮಗನ ರಕ್ಷಿಸಿದ ಇಸ್ರೇಲ್ ಸೇನೆ!
ಅಮೆರಿಕ ಕಾರ್ಯದರ್ಶಿ ಆ್ಯಂಟಿನ ಬ್ಲಿಂಕೆನ್ ಜೊತೆ ಮಾತುಕತೆ ನಡೆಸಿರುವ ಪ್ಯಾಲೆಸ್ತಿನ್ ಅಧ್ಯಕ್ಷ ಅಬ್ಬಾಸ್ ಶೀಘ್ರದಲ್ಲೇ ದೂರವಾಣಿ ಮೂಲಕ ಪ್ರಧಾನಿ ಮೋದಿ ಜೊತೆ ಮಧ್ಯಸ್ಥಿತಿ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಇಸ್ರೇಲ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಪ್ರಧಾನಿ ಮೋದಿ ಯುದ್ಧ ನಿಲ್ಲಿಸಲು ಮಧ್ಯಸ್ಥಿತಿಕೆ ವಹಿಸುವುದು ಸೂಕ್ತ ಅನ್ನೋ ಮಾತುಗಳು ಪ್ಯಾಲೆಸ್ತಿನ್ ಸರ್ಕಾರದಲ್ಲಿ ಕೇಳಿಬಂದಿದೆ.
ಅಕ್ಟೋಬರ್ 10 ರಂದು ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಈ ವೇಳೆ ಇಸ್ರೇಲ್‌ಗೆ ಮೋದಿ ಬೆಂಬಲ ಸೂಚಿಸಿದ್ದರು. ಇದೀಗ ಪ್ಯಾಲೆಸ್ತಿನ್ ಮೇಲಿನ ಯುದ್ಧಕ್ಕೆ ಅಂತ್ಯ ಹಾಡಲು ಅಬ್ಬಾಸ್ ಭಾರತ ಮಧ್ಯಪ್ರವೇಶ ಬಯಸುತ್ತಿದ್ದಾರೆ.
ಗಾಜಾ ನಾಗರೀಕರಿಗೆ ನೀಡಿದ್ದ ಗಡುವು ಅಂತ್ಯ, ಗಡಿಯತ್ತ ನುಗ್ಗಿದ ಇಸ್ರೇಲ್ ಟ್ಯಾಂಕರ್!
ಇತ್ತ ಇಸ್ರೇಲ್ ಗಾಜಾ ಮೇಲೆ ದಾಳಿಯಿಂದ ಲೆಬೆನಾನ್ ಹಾಗೂ ಸಿರಿಯಾ ಆಕ್ರೋಶಗೊಂಡಿದೆ. ಅರಬ್ ರಾಷ್ಟ್ರದ ಮೇಲಿನ ದಾಳಿಗೆ ಇದೀಗ ಸಿರಿಯಾ ಹಾಗೂ ಲೆಬೆನಾನ್ ಉಗ್ರರು ತಮ್ಮ ತಮ್ಮ ಗಡಿಯಿಂದ ಇಸ್ರೇಲ್‌ನತ್ತ ರಾಕೆಟ್ ದಾಳಿ ನಡೆಸುತ್ತಿದ್ದಾರೆ. ಇತ್ತ ಇಸ್ರೇಲ್ ವಾಯುದಾಳಿ ಜೊತೆಗೆ ಭೂಸೇನೆಯನ್ನೂ ಗಾಜಾಗೆ ನುಗ್ಗರಿಸಿ ದಾಳಿಗೆ ಸಜ್ಜಾಗಿದೆ. ಈಗಾಗಲೇ ನಾಗರೀಕರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ