ವಕೀಲರ ಕಚೇರಿಲಿ ಕೋತಿಯ ಕಡತ ಪರಿಶೀಲನೆ :ಭಜರಂಗಿಯ ವೀಡಿಯೋ ವೈರಲ್

Published : Oct 15, 2023, 04:10 PM ISTUpdated : Oct 15, 2023, 04:11 PM IST
ವಕೀಲರ ಕಚೇರಿಲಿ ಕೋತಿಯ ಕಡತ ಪರಿಶೀಲನೆ :ಭಜರಂಗಿಯ  ವೀಡಿಯೋ ವೈರಲ್

ಸಾರಾಂಶ

ವಕೀಲರ ಕಚೇರಿಗೆ ಬಂದ ಕೋತಿಯೊಂದು ಅಲ್ಲಿನ ಮೇಜಿನ ಮೇಲೆ ಕುಳಿತು ಒಂದೊಂದೆ ಕಡತವನ್ನು ಪರಿಶೀಲಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿದೆ.

ಲಕ್ನೋ: ವಕೀಲರ ಕಚೇರಿಗೆ ಬಂದ ಕೋತಿಯೊಂದು ಅಲ್ಲಿನ ಮೇಜಿನ ಮೇಲೆ ಕುಳಿತು ಒಂದೊಂದೆ ಕಡತವನ್ನು ಪರಿಶೀಲಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿದೆ. ಉತ್ತರ ಪ್ರದೇಶದ ಸಹ್ರಾನ್‌ಪುರದ ವಕೀಲರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ವಕೀಲರ ಕಚೇರಿಗೆ ಬಂದ ಕೋತಿಯೊಂದು ಅಲ್ಲಿ ಮೇಜಿನ ಮೇಲೆ ಕುಳಿತು ಕಡತ ಪರಿಶೀಲನೆ ಮಾಡುವ ಉದ್ಯೋಗಿಯಂತೆ ಒಂದೊಂದೇ ಕಡತವನ್ನು ತೆಗೆದು ಪುಟ ತಿರುಗಿಸಿ ತಿರುಗಿಸಿ ನೋಡುತ್ತಾ ಪಕ್ಕಕ್ಕಿಡುವ ರೀತಿ ನೋಡಿದರೆ ಈ ಕೋತಿ ನಿಜವಾಗಿಯೂ ಕೆಲಸದಲ್ಲಿ ತೊಡಗಿರುವಂತೆಯೇ ಕಾಣುತ್ತದೆ. 

ವೈರಲ್ ಆಗಿರುವ ವೀಡಿಯೋದಲ್ಲಿ ಉದ್ದನೆಯ ಮೇಜಿನ ಮೇಲೆ ಅತ್ತಿತ್ತ ಕೆಲವರು ಇದ್ದು ಕಡತಗಳನ್ನು ನೋಡುತ್ತಿದ್ದಾರೆ. ಅದೇ ಮೇಜಿನ ಪಕ್ಕದಲ್ಲಿ ಕೋತಿಯೊಂದು ಕುಳಿತಿದ್ದು, ತಾನು ಕೂಡ ವಕೀಲರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಂಬಂತೆ ಪೋಸ್ ನೀಡುತ್ತಿದ್ದು, ಕಡತಗಳನ್ನು ತೆಗೆದು ಒಂದೊಂದೇ ಪುಟವನ್ನು ಹೊರಳಿಸಿ ನೋಡಿ ಪಕ್ಕಕ್ಕಿಡುತ್ತಿದೆ. ಈ ಕೋತಿಯನ್ನು ನೋಡಿದ ಅಲ್ಲೇ ಇದ್ದ ಸಿಬ್ಬಂದಿಯೊಬ್ಬರು ಕೋತಿಯನ್ನು ದೂರ ಕಳುಹಿಸುವ ಸಲುವಾಗಿ ಬಾಳೆಹಣ್ಣನ್ನು ನೀಡಿದ್ದು, ಕೋತಿ ಮಾತ್ರ ಬಾಳೆಹಣ್ಣಿನ ಮೇಲೆ ಸ್ವಲ್ಪವೂ ಆಸಕ್ತಿ ತೋರಿಸದೇ ಫೈಲುಗಳನ್ನು ಮಗುಚುವಲ್ಲಿ ಬ್ಯುಸಿಯಾಗಿದೆ. ಈ ವೇಳೆ ಫೈಲ್ ಮೇಲೆ ಇಟ್ಟ ಬಾಳೆಹಣ್ಣು ನೆಲದ ಮೇಲೆ ಬಿದ್ದಿದ್ದೆ. ಆಗ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಬಾಳೆಹಣ್ಣನ್ನು ಸುಲಿದು ಕೋತಿಗೆ ನೀಡಲು ಮುಂದಾಗಿದ್ದಾರೆ. ಆದರೆ ಕೋತಿ ಮಾತ್ರ ಸುಲಿದ ಬಾಳಹಣ್ಣಿನ ಮೇಲೂ ಆಸಕ್ತಿ ತೋರದೇ ಕೆಳಗೆಸೆದು ಫೈಲ್‌ನ ಪರಿಶೀಲನೆಯಲ್ಲಿ ತೊಡಗಿದ್ದು ನೋಡುಗರಲ್ಲಿ ನಗು ಮೂಡಿಸುತ್ತಿದೆ. ಈ ವೇಳೆ ಮತ್ತೆ ಅಲ್ಲಿದ್ದವರು ಕೆಳಗೆ ಬಿದ್ದ ಬಾಳೆಹಣ್ಣನ್ನು ಮತ್ತೆ ಮೇಲಿರಿಸಿದ್ದು, ಮತ್ತೆ ಕೋತಿ ಅದನ್ನು ಕೆಳಗೆ ಬೀಳಿಸಿದೆ. ಇದಾದ ನಂತರ ಅಲ್ಲಿದ್ದವರು ಕೋತಿಯ ಕೆಲಸವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುವುದನ್ನು ಕಾಣಬಹುದು. 

ನಕಲಿ ವಕೀಲನ ಬಂಧಿಸಿದ ಕೀನ್ಯಾ ಪೊಲೀಸರು: ಈತ ಗೆದ್ದಿದ್ದು 25ಕ್ಕೂ ಹೆಚ್ಚು ಕೇಸ್‌...!

ವೀಡಿಯೋ ನೋಡಿದ ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.  ಈ ಕೋತಿ ಬಾಳೆಹಣ್ಣು ತಿನ್ನಲು ಕೂಡ ಬ್ರೇಕ್ ತೆಗೆದುಕೊಳ್ಳುತ್ತಿಲ್ಲ ಎಂದು ಮತ್ತೊಬ್ಬರು ಕಾಮಂಟ್ ಮಾಡಿದ್ದಾರೆ. ಕೋತಿ ಹಿಂದಿನ ಜನ್ಮದಲ್ಲಿ ವಕೀಲರ ಕಚೇರಿಯಲ್ಲಿ ಸಿಬ್ಬಂದಿ ಆಗಿದ್ದಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ಮಜಾ ನೀಡುತ್ತಿದೆ. 

ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿರುವ ತನ್ನ ನಾಗರಿಕರನ್ನೇ ತಡೆಯುತ್ತಿರುವ ಹಮಾಸ್‌

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ
UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ