ದುಬೈನಿಂದ ಅಮೃತಸರಕ್ಕೆ ಹೊರಟ ಏರ್ ಇಂಡಿಯಾ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ವರ್ಶ ಮಾಡಲಾಗಿದೆ. ಭಾರತದ ಮನವಿಗೆ ಸ್ಪಂದಿಸಿದ ಪಾಕಿಸ್ತಾನ ಕರಾಚಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಭೂಸ್ಪರ್ಶಕ್ಕೆ ಅವಕಾಶ ನೀಡಿದೆ. ಇಷ್ಟೇ ಅಲ್ಲ ಪ್ರಯಾಣಿಕನಿಗೆ ವೈದ್ಯಕೀಯ ನೆರವು ನೀಡಿದೆ.
ಕರಾಚಿ(ಅ.15) ದುಬೈನಿಂದ ಪಂಜಾಬ್‌ನ ಅಮೃತಸರಕ್ಕೆ ಪ್ರಯಾಣಿಕರನ್ನು ಹೊತ್ತು ಹಾರಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ದುಬೈನಿಂದ ಅಮೃತಸರದತ್ತ ಸಾಗುತ್ತಿದ್ದ ವಿಮಾನ ಭಾರತ ಗಡಿ ಪ್ರವೇಶ ಮಾಡಿರಲಿಲ್ಲ. ಈಗಲೇ ವಿಮಾನದೊಳಗಿದ್ದ ಪ್ರಯಾಣಿಕನಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇತ್ತು. ಹೀಗಾಗಿ ಭಾರತದ ಮನವಿಗೆ ಸ್ಪಂದಿಸಿದ ಪಾಕಿಸ್ತಾನ ಕರಾಚಿಯಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡ್ ಮಾಡಲು ಅವಕಾಶ ನೀಡಿದೆ. ಇದೇ ವೇಳೆ ಕರಾಚಿ ವಿಮಾನ ನಿಲ್ದಾಣದ ವೈದ್ಯರ ತಂಡ ಪ್ರಯಾಣಿಕನಿಗೆ ತುರ್ತು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ.
ಇಂದು ದುಬೈನಿಂದ ಹೊರಟ ವಿಮಾನ ನೇರವಾಗಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಪ್ರಯಾಣಿಕನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ವಿಮಾನದ ಸಿಬ್ಬಂದಿಗಳು ಭಾರತದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಕಾರಣ ಏರ್ ಇಂಡಿಯಾ ವಿಮಾನ ಇನ್ನೂ ಭಾರತ ಗಡಿ ಪ್ರವೇಶಿಸಿರಲಿಲ್ಲ. ಹತ್ತಿರದ ವಿಮಾನ ನಿಲ್ದಾಣ ಕರಾಚಿ ಬಿಟ್ಟು ಬೇರೆ ಇರಲಿಲ್ಲ. ಹೀಗಾಗಿ ಅಧಿಕಾರಿಗಳು ಕರಾಚಿ ವಿಮಾನ ನಿಲ್ದಾಣ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಇಸ್ರೇಲ್‌ನಿಂದ ದೆಹಲಿಗೆ ಬಂದಿಳಿದ 4ನೇ ವಿಮಾನ: ಯುದ್ಧಭೂಮಿಯಿಂದ ಬಂದವರು ಏನಂದರು ನೋಡಿ?
ಭಾರತ ಮನವಿಗೆ ಸ್ಪಂದಿಸಿದ ಕರಾಚಿ ವಿಮಾನ ನಿಲ್ದಾಣ ಅಧಿಕಾರಿಗಳು, ತಕ್ಷಣವೇ ಏರ್ ಇಂಡಿಯಾ ವಿಮಾನ ನಿಲ್ದಾಣ ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಲಾಯಿತು. ಮಧ್ಯಾಹ್ನ 12.30ಕ್ಕೆ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ವೈದ್ಯರ ತಂಡ ಪ್ರಯಾಣಿಕನಿಗೆ ನೆರವು ನೀಡಿದೆ. ಚಿಕಿತ್ಸೆ ಬಳಿಕೆ ಕೆಲ ಹೊತ್ತಿನಲ್ಲಿ ನಿಧಾನವಾಗಿ ಚೇತರಿಸಿಕೊಳ್ಳರು ಆರಂಭಿಸಿದ್ದಾರೆ.
ಕರಾಚಿ ವೈದ್ಯರ ತಂಡ ಪ್ರಯಾಣಿಕನ ಚೇತರಿಕೆ ಗಮನಿಸಿ ಮತ್ತೆ ಹಾರಾಟಕ್ಕೆ ಏರ್ ಇಂಡಿಯಾಗೆ ಅನುವು ನೀಡಿತ್ತು. 2.30ರ ವೇಳೆಗೆ ಏರ್ ಇಂಡಿಯಾ ವಿಮಾನ ಕರಾಚಿ ವಿಮಾನ ನಿಲ್ದಾಣದಿಂದ ಅಮೃತಸರದತ್ತ ಪ್ರಯಾಣ ಬೆಳೆಸಿತು. ವೈದ್ಯಕೀಯ ನೆರವನ್ನು ತುರ್ತು ಅಗತ್ಯತೆ ಎಂದು ಪರಿಗಣಿಸಿ ಎಲ್ಲಾ ವಿಮಾನ ನಿಲ್ದಾಣಗಳು ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ. ಇದೇ ರೀತಿ ಪಾಕಿಸ್ತಾನ ಕೂಡ ಭಾರತದ ವಿಮಾನಕ್ಕೆ ಭೂಸ್ಪರ್ಶಕ್ಕೆ ಅವಕಾಶ ನೀಡಿದೆ. ಜೊತೆಗೆ ವೈದ್ಯಕೀಯ ನೆರವು ನೀಡಿದೆ.
ಕುಡುಕನಿಂದ ನಟಿಗೆ ವಿಮಾನದಲ್ಲಿ ರಾತ್ರಿಯೆಲ್ಲ ಕಿರುಕುಳ! ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ದಿವ್ಯಪ್ರಭಾ