ಟಿಡಿಪಿ ಮತ್ತೆ ಎನ್‌ಡಿಎ ಬಳಗಕ್ಕೆ: ನಾಯ್ಡು ಕರೆತರಲು ರಾಮೋಜಿ ಮಧ್ಯಸ್ಥಿಕೆ?

By Kannadaprabha News  |  First Published Aug 22, 2022, 1:23 PM IST

ರಾಜ್ಯದಲ್ಲಿ ಬಿಜೆಪಿ ಸಖ್ಯ ಕಳೆದುಕೊಂಡ ಬಳಿಕ ದಯನೀಯ ಸ್ಥಿತಿಗೆ ತಲುಪಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ), ಮರಳಿ ಎನ್‌ಡಿಎ ಪಾಳಯ ಸೇರುವ ಯತ್ನ ನಡೆಸಿದ್ದು, ಇದಕ್ಕೆ ಖ್ಯಾತ ಉದ್ಯಮಿ ರಾಮೋಜಿರಾವ್‌ ಮಧ್ಯಸ್ಥಿಕೆ ವಹಿಸಿದ್ದಾರೆ ಎನ್ನಲಾಗಿದೆ.


ಹೈದರಾಬಾದ್‌: ರಾಜ್ಯದಲ್ಲಿ ಬಿಜೆಪಿ ಸಖ್ಯ ಕಳೆದುಕೊಂಡ ಬಳಿಕ ದಯನೀಯ ಸ್ಥಿತಿಗೆ ತಲುಪಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ), ಮರಳಿ ಎನ್‌ಡಿಎ ಪಾಳಯ ಸೇರುವ ಯತ್ನ ನಡೆಸಿದ್ದು, ಇದಕ್ಕೆ ಖ್ಯಾತ ಉದ್ಯಮಿ ರಾಮೋಜಿರಾವ್‌ ಮಧ್ಯಸ್ಥಿಕೆ ವಹಿಸಿದ್ದಾರೆ ಎನ್ನಲಾಗಿದೆ.

ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಕೇಂದ್ರ ಸಚಿವ ಅಮಿತ್‌ ಶಾ ಭಾನುವಾರ ತೆಲಂಗಾಣದ ಮುನುಗೋಡೆಗೆ ಆಗಮಿಸಿದ್ದು ಅಲ್ಲಿಂದ ದೆಹಲಿಗೆ ತೆರಳುವ ಮುನ್ನ ಹೈದ್ರಾಬಾದ್‌ನ ರಾಮೋಜಿರಾವ್‌ ಸ್ಟುಡಿಯೋದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಜೊತೆ ಅಮಿತ್‌ ಶಾ ನಡುವೆ ಸಭೆಯೊಂದನ್ನು ಆಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Tap to resize

Latest Videos

ಅಧಿಕಾರಕ್ಕೆ ಮರಳುವವರೆಗೂ ಸದನದಲ್ಲಿ ಕಾಲಿಡುವುದಿಲ್ಲ : ಚಂದ್ರಬಾಬು ನಾಯ್ಡು!

ಆಂಧ್ರಪ್ರದೇಶದಲ್ಲಿ ಕಳೆದ ಲೋಕಸಭೆ ಚುನಾವಣೆಗೂ ಮುನ್ನ ತೆಲುಗುದೇಶಂ ಪಕ್ಷ ಎನ್‌ಡಿಎ ಬಿಟ್ಟಿತ್ತು. ನಂತರ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷವು ಜಗನ್‌ಮೋಹನ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ ಅಬ್ಬರದಲ್ಲಿ ಕಳಾಹೀನವಾಗಿದೆ. ಹೀಗಾಗಿ ನಾಯ್ಡು ಪುನಃ ಎನ್‌ಡಿಎ ತೆಕ್ಕೆಗೆ ತೆರಳಲು ಯೋಜಿಸಿದ್ದು, ಅದಕ್ಕೆ ರಾಮೋಜಿ ರಾವ್‌ ಮಧ್ಯಸ್ಥಿಕೆದಾರನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಎನ್‌ಟಿಆರ್‌ ಭೇಟಿ:

ತೆಲುಗು ದೇಶಂ ಪಾರ್ಟಿ (ಟಿಡಿಪಿ) (Telugu Desam Party) ಸಂಸ್ಥಾಪಕ ಎನ್‌ಟಿ ರಾಮರಾವ್ ಅವರ ಮೊಮ್ಮಗ ಹಾಗೂ ತೆಲುಗು ಚಿತ್ರರಂಗದ ಪ್ರಖ್ಯಾತ ನಟ ಜೂನಿಯರ್ ಎನ್‌ಟಿಆರ್ ಅವರನ್ನು ಭಾನುವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಔತಣಕೂಟಕ್ಕೆ ಬಿಜೆಪಿ ನಾಯಕರು ಆಹ್ವಾನಿಸಿದ್ದರು. ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ಜೂನಿಯರ್ ಎನ್‌ಟಿಆರ್, 2009 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಟಿಡಿಪಿ ಪರ ಪ್ರಚಾರ ಮಾಡಿದರು ಮತ್ತು ತಮ್ಮ ತಾತ ಸ್ಥಾಪಿಸಿದ ಪಕ್ಷದತ್ತ ವಾಲಿದ್ದರು. ಆದರೆ ಅವರು ಸಕ್ರಿಯ ರಾಜಕೀಯದಿಂದ ದೂರವೇ ಉಳಿದಿದ್ದಾರೆ.

ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಸಿಐಡಿ ಕಂಟಕ!

2009 ರಿಂದ, ಜೂನಿಯರ್ ಎನ್‌ಟಿಆರ್‌, ಟಿಡಿಪಿ ನಾಯಕರು ಅಥವಾ ಇತರ ಪಕ್ಷಗಳ ನಾಯಕರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಮತ್ತು ಅವರು ತಮ್ಮ ಚಲನಚಿತ್ರ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದಾರೆ. ಅವರ ತಂದೆ ನಂದಮೂರಿ ಹರಿಕೃಷ್ಣ ಅವರು 2008 ರಿಂದ 2013 ರವರೆಗೆ ಟಿಡಿಪಿ ರಾಜ್ಯಸಭಾ ಸದಸ್ಯರಾಗಿದ್ದರೆ, ಅವರ ಚಿಕ್ಕಪ್ಪ ಮತ್ತು ನಟ ನಂದಮೂರಿ ಬಾಲಕೃಷ್ಣ ಆಂಧ್ರಪ್ರದೇಶದ ಹಿಂದೂಪುರದ ಟಿಡಿಪಿ ಶಾಸಕರಾಗಿದ್ದಾರೆ. ಬಾಲಕೃಷ್ಣ ಟಾಲಿವುಡ್ ಎಂದು ಕರೆಯಲ್ಪಡುವ ತೆಲುಗು ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರು, ಇತ್ತೀಚಿನ ಅಖಂಡ ಸೇರಿದಂತೆ ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದು, ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

click me!