ದೇಹದ ಮೇಲೆ 85 ಚಮಚ ಸಿಕ್ಕಿಸಿಕೊಂಡು ಗಿನ್ನೆಸ್‌ ದಾಖಲೆ ಮಾಡಿದ ಇರಾನ್ ಭೂಪ

By Suvarna NewsFirst Published Jan 28, 2022, 6:59 PM IST
Highlights
  • ಈತನ ದೇಹದಲ್ಲಿ ಬ್ಯಾಲೆನ್ಸ್‌ ಆಗಿ ನಿಲ್ಲುತ್ತೆ  85 ಚಮಚ
  • ಗಿನ್ನೆಸ್‌ ದಾಖಲೆ ಪುಟ ಸೇರಿದ ಇರಾನ್‌ ವ್ಯಕ್ತಿ
  • 50 ವರ್ಷದ ಅಬೋಲ್ಫಾಜ್ಲ್ ಸಬರ್ ಮೊಖ್ತಾರಿಯಿಂದ ಸಾಧನೆ

ಇರಾನ್‌: ಜನ ಇತ್ತೀಚೆಗೆ ದಾಖಲೆಗಾಗಿ ಏನೇನೋ ಸಾಹಸ ಮಾಡುತ್ತಿರುತ್ತಾರೆ. ಇಲ್ಲೊಬ್ಬ ಇರಾನ್‌ ಪ್ರಜೆ (Iran) ತನ್ನ ದೇಹದ ತುಂಬಾ  85 ಚಮಚಗಳನ್ನು ಬ್ಯಾಲೆನ್ಸ್‌ ಮಾಡಿ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 50 ವರ್ಷದ ಅಬೋಲ್ಫಾಜ್ಲ್ ಸಬರ್ ಮೊಖ್ತಾರಿ (Abolfazl Saber Mokhtari) ತನ್ನ ದೇಹದ ಮೇಲೆ 85 ಚಮಚಗಳನ್ನು ಏಕಕಾಲದಲ್ಲಿ ನಿಲ್ಲಿಸಿ ಸಮತೋಲ ಕಾಯ್ದುಕೊಂಡಿದ್ದಾನೆ. ಇದಕ್ಕೂ ಮೊದಲು ಸ್ಪೇನ್‌ನ ಮಾರ್ಕೋಸ್ ರುಯಿಜ್ ಸೆಬಾಲೋಸ್ (Marcos Ruiz Ceballos) ಅವರು ತಮ್ಮ ದೇಹದ ಮೇಲೆ  64 ಚಮಚಗಳನ್ನು ಇರಿಸಿ ಇಂತಹ ದಾಖಲೆಯೊಂದನ್ನು ಮಾಡಿದ್ದರು. ಆದರೆ ಈಗ ಇರಾನ್‌ ಪ್ರಜೆ ಆ ದಾಖಲೆಯನ್ನು ಮುರಿದಿದ್ದಾರೆ. 

ಆದಾಗ್ಯೂ, ಈ ದಾಖಲೆಯನ್ನು ಮುರಿಯುವುದು ಮೊಖ್ತಾರಿಗೆ ಸುಲಭವೇನು ಆಗಿರಲಿಲ್ಲ. ಈ ಸಾಧನೆ ಮಾಡುವ ಮೊದಲು ಅವರು ಇದಕ್ಕಾಗಿ ಎರಡು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ದಾಖಲೆಯ ನಿಯಮಗಳ ಪ್ರಕಾರ, ಸ್ಪೂನ್‌ಗಳು ನಿರ್ದಿಷ್ಟ ಸಮಯದವರೆಗೆ ದೇಹದ ಮೇಲೆ ಸಮತೋಲನದಲ್ಲಿರಬೇಕು. ಆದಾಗ್ಯೂ, ತೇವಾಂಶ ಮತ್ತು ಸುಡುವ ತಾಪಮಾನದಿಂದಾಗಿ ಅವರ ದೇಹದಿಂದ ಕೆಲವು ಚಮಚಗಳು ಬಿದ್ದವು. ಆದರೆ ಅವರು ತಮ್ಮ ಪ್ರಯತ್ನವನ್ನು ಕೈ ಬಿಡಲಿಲ್ಲ, ಪರಿಣಾಮ ಮೂರನೇ ಪ್ರಯತ್ನದಲ್ಲಿ ಅವರು ದಾಖಲೆಯನ್ನು ಮುರಿಯಲು ಯಶಸ್ವಿಯಾದರು.

67 ವರ್ಷಗಳಿಂದ ಸ್ನಾನ ಮಾಡಿಲ್ಲ... ಆದರೂ ಇವರಷ್ಟು ಆರೋಗ್ಯವಾಗಿ ಬೇರಾರು ಇಲ್ಲ...! ಏನೀ ವಿಚಿತ್ರ

ಕರಾಜ್‌ನಲ್ಲಿ (Karaj) ದಾಖಲೆಯನ್ನು ಮುರಿದ ಮೊಖ್ತಾರಿ, ತಾನು ಚಿಕ್ಕಂದಿನಿಂದಲೂ ತನ್ನ ದೇಹದ ಮೇಲೆ ಚಮಚಗಳನ್ನು ಸಮತೋಲನಗೊಳಿಸುತ್ತಿದೆ ಎಂದು ಹೇಳಿದರು. ನಾನು ಮಗುವಾಗಿದ್ದಾಗಲೇ ಆಕಸ್ಮಿಕವಾಗಿ ನನ್ನ ಈ ಪ್ರತಿಭೆಯನ್ನು ನಾನು ಗಮನಿಸಿದ್ದೆ, ಬಳಿಕ ಹಲವಾರು ವರ್ಷಗಳ ಅಭ್ಯಾಸ ಮತ್ತು ಪ್ರಯತ್ನದ ನಂತರ, ನನ್ನ ಪ್ರತಿಭೆಯನ್ನು ಬಲಪಡಿಸಲು ಮತ್ತು ಈಗ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಮೊಖ್ತಾರಿ ಗಿನ್ನೆಸ್ ವಿಶ್ವ ದಾಖಲೆ (Guinness World Record) ಮಾಡಿದ ಬಳಿಕ ತಿಳಿಸಿದರು. ಮೊಖ್ತಾರಿ ಅವರ ಬ್ಯಾಲೆನ್ಸಿಂಗ್ ಕೌಶಲ್ಯಗಳು ಕೇವಲ ಫ್ಲೇಟ್‌ವೇರ್‌ಗೆ ಸೀಮಿತವಾಗಿಲ್ಲ ಇಲ್ಲಿಯವರೆಗೆ ಅವರು ಸಮತೋಲನ ಮಾಡಲು ಸಾಧ್ಯವಾಗದೇ ಇದ್ದಿದ್ದು ಯಾವುದು ಇಲ್ಲ ಎಂದು ಹೇಳಿದ್ದಾರೆ.

ನನ್ನ ಪ್ರಕಾರ ನಾನು ಯಾವುದಾದರೂ ಎಂದರೆ ಯಾವುದೇ ವಸ್ತು. ಪ್ಲಾಸ್ಟಿಕ್, ಗಾಜು, ಹಣ್ಣು, ಕಲ್ಲು, ಮರ ಮತ್ತು ಸಂಪೂರ್ಣವಾಗಿ ಬೆಳೆದ ಮಾನವನಂತಹ ಮೇಲ್ಮೈ ಹೊಂದಿರುವ ಯಾವುದನ್ನಾದರೂ ನಾನು ನನ್ನ ದೇಹಕ್ಕೆ ಅಂಟಿಸಿಕೊಳ್ಳಬಲ್ಲೆ ಎಂದು ಅವರು ಹೇಳಿದರು. ತನ್ನ ದೇಹದಿಂದ ವಸ್ತುವಿಗೆ ಶಕ್ತಿಯನ್ನು ವರ್ಗಾಯಿಸಲು ಸಾಧ್ಯವಾಗುವುದು ಈ ತನ್ನ ವಿಶಿಷ್ಟ ಸಾಮರ್ಥ್ಯದ ರಹಸ್ಯ ಎಂದು ಮೊಖ್ತಾರಿ ನಂಬುತ್ತಾರೆ.

ಅರ್ಜೆಂಟೀನಾ ನಗರವನ್ನು ಭಾದಿಸುತ್ತಿರುವ ಲಕ್ಷಾಂತರ ಜೀರುಂಡೆಗಳು... ವಿಡಿಯೋ ನೋಡಿ

ನನ್ನಲ್ಲಿರುವ ಈ ಶಕ್ತಿಯನ್ನು ನಾನು ವಸ್ತುಗಳಿಗೆ ವರ್ಗಾಯಿಸಬಹುದು, ನಂತರ ನನ್ನ ದೇಹದ ಮೇಲಿನ ವಸ್ತುಗಳ ಮೇಲೆ ಸಾಧ್ಯವಾದಷ್ಟು ಶಕ್ತಿಯನ್ನು ಕೇಂದ್ರೀಕರಿಸಲು ನಾನು ನನ್ನನ್ನು ತಳ್ಳುತ್ತೇನೆ ಈ ಮೂಲಕ ಶಕ್ತಿಯನ್ನು ವಸ್ತುವಿಗೆ ವರ್ಗಾಯಿಸಲು ನನಗೆ ಸಾಧ್ಯವಾಗುತ್ತದೆ. ಈ ವಸ್ತುಗಳನ್ನು ಸ್ಪರ್ಶಿಸುವ ಮತ್ತು ಅನುಭವಿಸುವವರೆಗೆ ಅವುಗಳಿಗೆ ನನ್ನ ದೇಹದಿಂದ ಶಕ್ತಿಯ ಪೂರೈಕೆಯಾಗುತ್ತದೆ ಎಂದು ಮೊಖ್ತಾರಿ (Mokhtari) ಹೇಳಿದ್ದಾರೆ.

click me!