ಟ್ವಿಟರಲ್ಲಿ ಭಾರತದ ತಪ್ಪಾದ ಭೂಪಟ ಪೋಸ್ಟ್: ವಾಟ್ಸಾಪ್‌ಗೆ ಸಚಿವ ರಾಜೀವ್‌ ಎಚ್ಚರಿಕೆ

By Kannadaprabha NewsFirst Published Jan 1, 2023, 9:53 AM IST
Highlights

ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಚೀನಾ ಹಕ್ಕು ಸಾಧಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿರುವ ಭೂಪಟ ಪೋಸ್ಟ್‌ ಮಾಡಿದ್ದ ವಾಟ್ಸಾಪ್‌ ಸಂಸ್ಥೆಗೆ ಕೇಂದ್ರ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಚೀನಾ ಹಕ್ಕು ಸಾಧಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿರುವ ಭೂಪಟ ಪೋಸ್ಟ್‌ ಮಾಡಿದ್ದ ವಾಟ್ಸಾಪ್‌ ಸಂಸ್ಥೆಗೆ ಕೇಂದ್ರ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ. ವಾಟ್ಸಾಪ್‌ಗೆ ನಕ್ಷೆಯನ್ನು ಸರಿಪಡಿಸುವಂತೆ ಸೂಚಿಸಿ, ಭಾರತದಲ್ಲಿ ವ್ಯಾಪಾರ ಮಾಡುವ ವ್ಯಾಪಾರ ಮುಂದುವರೆಸಲು ಬಯಸುವ ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಸರಿಯಾದ ನಕ್ಷೆಯನ್ನು ಬಳಸಬೇಕು ಎಂದು ರಾಜೀವ್‌ ಟ್ವೀಟ್‌ ಮಾಡಿದ್ದಾರೆ. ಭಾರತದ ನಕ್ಷೆಯನ್ನು ತಪ್ಪಾಗಿ ಬಿಂಬಿಸುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಹೇಳಿದ್ದಾರೆ.

ಶಶಿ ತರೂರ್‌ ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯೇ ತಪ್ಪು, ಕಾಶ್ಮೀರ, ಲಡಾಖ್‌ ಪ್ರದೇಶವೇ ನಾಪತ್ತೆ!

ಭಾರತದ ನಕ್ಷೆ ಎಡವಟ್ಟು: ಟ್ವಿಟರ್ ಇಂಡಿಯಾ MD ಮನೀಷ್ ಮಹೇಶ್ವರಿಗೆ ಸಂಕಷ್ಟ!

click me!