ಗುಜರಾತ್‌ಗೆ ಆಗಮಿಸಿದ INS ವಿರಾಟ್, ಪೀಸ್ ಪೀಸ್ ಆಗಲಿದೆ ಭಾರತದ ಹೆಮ್ಮೆಯ ನೌಕೆ!

Published : Sep 22, 2020, 06:59 PM IST
ಗುಜರಾತ್‌ಗೆ ಆಗಮಿಸಿದ INS ವಿರಾಟ್, ಪೀಸ್ ಪೀಸ್ ಆಗಲಿದೆ ಭಾರತದ ಹೆಮ್ಮೆಯ ನೌಕೆ!

ಸಾರಾಂಶ

ಸುದೀರ್ಘ ವರ್ಷ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ INS ವಿರಾಟ್ ಶೀಘ್ರದಲ್ಲೇ ಕಣ್ಮರೆಯಾಗಲಿದೆ. ಕೆಲವೇ ದಿನಗಳಲ್ಲಿ ನೌಕಯನ್ನು ಒಡೆದು ಗುಜುರಿಗ ಹಾಕಲಾಗುತ್ತದೆ. ಒಂದೆಡೆ ಇದನ್ನು ಉಳಿಸಲು ಹಲವು ಪ್ರಯತ್ನಗಳು ನಡೆಯುತ್ತಿದೆ. ಆದರೆ ಖಚಿತವಾಗಿಲ್ಲ. ಇತ್ತ ನೌಕೆ ಒಡೆಯಲು ತಯಾರಿ ಆರಂಭಗೊಂಡಿದೆ.

ಅಹಮ್ಮದಾಬಾದ್(ಸೆ.22): 26 ವರ್ಷಗಳ ಕಾಲ ಬ್ರಿಟೀಷ್ ನೌಕೆಯಲ್ಲಿ ಸೇವೆ ಬಳಿಕ ಬರೋಬ್ಬರಿ 30 ವರ್ಷ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವ ಭಾರತದ ಹೆಮ್ಮೆಯ INS ವಿರಾಟ್  ಕೆಲವೇ ದಿನಗಳಲ್ಲಿ ಇಲ್ಲವಾಗಲಿದೆ. 10.94 ಲಕ್ಷ ಕಿಲೋಮೀಟರ್ ಕ್ರಮಿಸಿರುವ ಹಾಗೂ ಎದುರಾಳಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ ನೌಕೆ, ಮೂರು ವರ್ಷಗಳ ಹಿಂದೆ ಭಾರತೀಯ ನೌಕಾಪಡೆಯಿಂದ ನಿವೃತ್ತಿಯಾಗಿತ್ತು. ಇದೀಗ ಈ ನೌಕೆಯನ್ನು ಒಡೆದು ಗುಜುರಿಗೆ ಹಾಕಲು ಗುಜರಾತ್‌ಗೆ ತರಲಾಗಿದೆ.

 ವಿರಾಟ್‌ ನೌಕೆ ಅಂತಿಮ ಯಾನ, ಮುಂಬೈನಿಂದ ಗುಜರಾತ್‌ಗೆ ಸಾಗಣೆ!

ಗುಜರಾತ್‌ನ ಕರಾವಳಿ ಅಲಾಂಗ್‌ಗೆ ಆಗಮಿಸಿದ ವಿರಾಟ್ ನೌಕೆಯನ್ನು ಶ್ರೀರಾಮ್ ಗ್ರೂಪ್ ಒಡೆದು ಗುಜುರಿಗೆ ಹಾಕಲಿದೆ. ಮುಂಬೈನ ಡಾರ್ಕ್‌ಯಾರ್ಡ್ ನೌಕಾ ಬಂದಿರಿನಿಂದ ಪಯಣ ಬೆಳೆಸಿದ ವಿರಾಟ್ ನೌಕೆ ಇಂದು(ಸೆ.22) ಗುಜರಾತ್‌ನ ಅಲಾಂಗ್ ಬಂದರಿಗೆ ಆಗಮಿಸಿದೆ.  

ನೌಕೆಯನ್ನು ಒಡೆಯಂದೆ ಸಂರಕ್ಷಿಸಲು ಇದೇ ವಿರಾಟ್ ನೌಕೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತಿ ನೌಕಾಧಿಕಾರಿಗಳು ಮನವಿ ಮಾಡಿದ್ದಾರೆ. ಇತ್ತ ಸಂಸದ ರಾಜೀವ್ ಚಂದ್ರಶೇಖರ್ ಕೂಡ ವಿರಾಟ್ ನೌಕೆಯನ್ನು ಉಳಿಸುವಂತೆ ಹಲವು ಸಂಘ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾವ ಪ್ರಯತ್ನಗಳು ಪರಿಣಾಮಕಾರಿಯಾಗಿಲ್ಲ.

1959ರಿಂದ 1984ರ ವರೆಗೆ, ಅಂದರೆ 26 ವರ್ಷಗಳ ಕಾಲ ಬ್ರಿಟೀಷ್ ಬ್ರಿಟೀಷ್ ನೌಕಾ ಪಡೆಯಲ್ಲಿ ಈ ನೌಕೆ ಕಾರ್ಯನಿರ್ವಹಿಸಿತ್ತು. ಬಳಿಕ ಭಾರತ ಈ ನೌಕೆಯನ್ನು ಖರೀದಿಸಿತು. 1987ರಲ್ಲಿ INS ವಿರಾಟ್ ನೌಕೆಯಾಗಿ ಭಾರತೀಯ ನೌಕಾಪಡೆ ಸೇರಿಕೊಂಡಿತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ