ಹಿಂದುಗಳಲ್ಲದವರು ತಿರುಪತಿಗೆ ಭೇಟಿ ಕೊಟ್ಟರೆ ಡಿಕ್ಲರೇಶನ್ ಕಡ್ಡಾಯ!?

Published : Sep 22, 2020, 06:15 PM IST
ಹಿಂದುಗಳಲ್ಲದವರು ತಿರುಪತಿಗೆ ಭೇಟಿ ಕೊಟ್ಟರೆ ಡಿಕ್ಲರೇಶನ್ ಕಡ್ಡಾಯ!?

ಸಾರಾಂಶ

ಹಿಂದೂಗಳಲ್ಲದವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದರೆ ಸೆಲ್ಫ್ ಡಿಕ್ಲೋರೇಶನ್ ಮಾಡಿಕೊಳ್ಳಬೇಕು/ ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷರ ಒತ್ತಾಯ/ ದೇವರ ಬಗ್ಗೆ ಕೆಟ್ಟ ಹೇಳಿಕೆ ನೀಡುವ ರಾಜಕಾರಣಿಗಳ ವಿರುದ್ಧ ಕಾನೂನು ಜಾರಿಯಾಗಬೇಕು

ತಿರುಪತಿ(ಸೆ. 22)   ಬೇರೆ ಜಾತಿ, ನಂಬಿಕೆ, ಧರ್ಮಕ್ಕೆ ಸೇರಿದ ಯಾವುದೆ ವ್ಯಕ್ತಿ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡುವುದಾದರೆ ಸ್ವಯಂ ಪ್ರಕಟಣೆ ಮಾಡಬೇಕು ಎಂದು ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸೋಮು ವೀರಾಜು ಹೇಳಿದ್ದಾರೆ.

 ಹಿಂದೂಗಳಲ್ಲದವರು ತಿರುಪತಿ ದೇವಾಲಯಕ್ಕೆ ಬಂದರೆ ಸ್ವಯಂ  ಘೋಷಣೆ ಮಾಡಿಕೊಳ್ಳಬೇಕು.  ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸಹ ಭೇಟಿ ನೀಡಿದ್ದ ವೇಳೆ ಡಿಕ್ಲೋರೇಶನ್ ಫಾರ್ಮ್‌ ಗೆ ಸಹಿ ಮಾಡಿದ್ದರು.  ಈ ಕಾನೂನು  ಹಿಂದೂಗಳಲ್ಲದವರಿಗೆ ಅನ್ವಯಯಾಗುತ್ತದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ದೇವರ ಬಗ್ಗೆ ಅಸಡ್ಡೆ ಮತ್ತು ನಿರ್ಜಜ್ಜತನದ ಮಾತನಾಡುವ ರಾಜಕೀಯ ನಾಯಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಕಾನೂನನ್ನು ಕೇಂದ್ರ ಸರ್ಕಾರ ತರಬೇಕು ಎಂದು ಒತ್ತಾಯ ಮಾಡಿದ್ದಾರೆ.

ಭಗವಾನ್ ಹನುಮಾನ್ ದೇವರ ಬಗ್ಗೆ ಸಚಿವ ಕೋಡಾಲಿ ವೆಂಕಟೇಶ್ವರ ರಾವ್ ನೀಡಿದ್ದ ಹೇಳಿಕೆ ಖಂಡಿಸಿರುವ ಸೋಮು ಸಚಿವರು ತಮ್ಮ ಮಾತನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.  ದಚಿವರ ವಿರುದ್ಧ ರಾಜ್ಯಾದ್ಯಂತ ಹಿಂದೂ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ದೂರು ದಾಖಲಾಗಿದೆ.

ಟಿಡಿಪಿ ಅಧಿಕಾರದಲ್ಲಿ ಇದ್ದಾಗ  ವಿಜಯವಾಡದಲ್ಲಿ ಮೂವತ್ತು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲಾಗಿತ್ತು. ಗೋದಾವರಿ ಪುಷ್ಕರಣದಲ್ಲಿ ಮೂವತ್ತು ಜನರು ಸಾವಿಗೆ ಗುರಿಯಾಗಿದ್ದಕ್ಕೆ ಚಂದ್ರಬಾಬು ನಾಯ್ಡು ಅವರೇ ಕಾರಣ ಎಂದು 2015 ರ ಘಟನೆಯನ್ನು ಮತ್ತೆ ಉಲ್ಲೇಖ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ