ಗರಿಷ್ಠ ಕೋವಿಡ್-19 ಸೋಂಕಿತರ ಗುಣಮುಖ ರಾಷ್ಟ್ರಗಳ ಪಟ್ಟಿ ಬಹಿರಂಗ; ಭಾರತೀಯರಿಗೆ ಸಿಹಿ ಸುದ್ದಿ!

By Suvarna NewsFirst Published Sep 22, 2020, 5:59 PM IST
Highlights

ಕೊರೋನಾ ವೈರಸ್ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಹಲವು ಕ್ರಮಗಳನ್ನು ಕೈಗೊಂಡಿದ್ದರು. ಹರಡುವಿಕೆ ತಗ್ಗುತ್ತಿಲ್ಲ. ಈ ಚಿಂತೆ ಬೆನ್ನಲ್ಲೇ ಭಾರತೀಯರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಇದೀಗ ಕೊರೋನಾ ಸೋಂಕಿತರ ಗುಣಮುಖ ಸಂಖ್ಯೆ ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಸೋಂಕಿತರು ಚೇತರಿಕೆ ಕಂಡ ರಾಷ್ಟ್ರಗಳ ಪಟ್ಟಿ ಬಹಿರಂಗವಾಗಿದೆ.

ನವದೆಹಲಿ(ಸೆ.22): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದರ ಜೊತೆಗೆ ನಿರಂತರ ಚಿಕಿತ್ಸೆಯೂ ನಡೆಯುತ್ತಿದೆ. ಇದೀಗ ಕೊರೋನಾ ಸೋಂಕಿತರ ಗುಣಮುಖ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಅತೀ ಹೆಚ್ಚು ಕೋವಿಡಡ್ 19 ಸೋಂಕಿತರ ಗುಣಮುಖ ರಾಷ್ಟ್ರಗಳ ಪಟ್ಟಿ ಬಿಡುಗಡೆಯಾಗಿದೆ. ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ.

ತಬ್ಲಿಘಿಗಳಿಂದ ಎಷ್ಟು ಜನರಿಗೆ ಕೊರೋನಾ ಹರಡಿತು? ಲೆಕ್ಕ ಕೊಟ್ಟ ಕೇಂದ್ರ!.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಈ ಮಾಹಿತಿ ಹಂಚಿಕೊಂಡಿದ್ದಾರೆ.  ಕೊರೋನಾ ಸೋಂಕಿತರ ಗುಣಮುಖರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಕಳೆದ 3 ದಿನಗಳಲ್ಲಿ ಭಾರತದ ಗುಣಮುಖರ ಸಂಖ್ಯೆ ಶೇಕಡಾ 80 ಎಂದು ಹರ್ಷವರ್ಧನ್ ಹೇಳಿದ್ದಾರೆ.

ಒಂದೇ ದಿನದಲ್ಲಿ 90,000 ಕೊರೋನಾ ಸೋಂಕಿತರ ಗುಣಮುಖರಾಗಿ ಮನೆ ಸೇರೋ ಮೂಲಕ ದಾಖಲೆ ಬರೆದಿದೆ. ಕಳೆದ 24 ಗಂಟೆಯಲ್ಲಿ 1,01,468 ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.

ಕೊರೋನ ವೈರಸ್ ಸೋಂಕಿತರದಲ್ಲಿ ಭಾರತ ಇದೀಗ 2ನೇ ಸ್ಥಾನ ಪಡೆದಿದೆ. ಭಾರತದಲ್ಲಿ 6,027,580 ಕೊರೋನಾ ಕೇಸ್ ದಾಖಲಾಗಿದೆ. ಇನ್ನು ಕೊರೋನಾಗೆ ಬಲಿಯಾದವರ ಸಂಖ್ಯೆ 87,882 ಕ್ಕೆ ಏರಿಕೆಯಾಗಿದೆ.

click me!