ಬೆಂಕಿ ಬಿದ್ದು ಐಎನ್‌ಎಸ್ ಬ್ರಹ್ಮಪುತ್ರಕ್ಕೆ ಭಾರಿ ಹಾನಿ : ಸೈಲರ್ ನಾಪತ್ತೆ

By Anusha Kb  |  First Published Jul 23, 2024, 10:57 AM IST

ಭಾರತೀಯ ವಾಯುಸೇನೆಯ ಯುದ್ಧನೌಕೆ ಐಎನ್‌ಎಸ್ ಬ್ರಹ್ಮಪುತ್ರಕ್ಕೆ ಬೆಂಕಿ ತಗುಲಿದ್ದು ಕಿರಿಯ ಸೈಲರ್ ಒಬ್ಬ ನಾಪತ್ತೆಯಾಗಿದ್ದಾನೆ ಆತನಿಗಾಗಿ ರಕ್ಷಣಾ ತಂಡ ಹುಡುಕಾಟದಲ್ಲಿ ತೊಡಗಿದೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ.


ನವದೆಹಲಿ: ಭಾರತೀಯ ವಾಯುಸೇನೆಯ ಯುದ್ಧನೌಕೆ ಐಎನ್‌ಎಸ್ ಬ್ರಹ್ಮಪುತ್ರಕ್ಕೆ ಬೆಂಕಿ ತಗುಲಿದ್ದು ಕಿರಿಯ ಸೈಲರ್ ಒಬ್ಬ ನಾಪತ್ತೆಯಾಗಿದ್ದಾನೆ ಆತನಿಗಾಗಿ ರಕ್ಷಣಾ ತಂಡ ಹುಡುಕಾಟದಲ್ಲಿ ತೊಡಗಿದೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ. ಈ ಐಎನ್‌ಎಸ್‌ ಬ್ರಹ್ಮಪುತ್ರ ಯುದ್ಧನೌಕೆಯನ್ನು ನಿರ್ವಹಣೆಗಾಗಿ ಮುಂಬೈನ ಬಂದರಿನಲ್ಲಿ ನಿಲ್ಲಿಸಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಆ ನೌಕೆಯಲ್ಲಿದ್ದ ಇತರ ಸಿಬ್ಬಂದಿಗಳೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ನೌಕಾಪಡೆ ಹೇಳಿದೆ. 

ಭಾನುವಾರ ಸಂಜೆ ಮುಂಬೈ ನೌಕಾನೆಲೆಯ ಬಂದರಿನಲ್ಲಿ ಐಎನ್‌ಎಸ್‌ ಬ್ರಹ್ಮಪುತ್ರದ ಭಾಗಗಳನ್ನು ಮರು ಜೋಡಿಸುವ ವೇಳೆ ಈ ಬೆಂಕಿ ಅನಾಹುತ ಸಂಭವಿಸಿದೆ. ಕೂಡಲೇ  ಬಂದರಿನಲ್ಲಿರುವ ಇತರ ಹಡಗುಗಳ ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಹಡಗಿನ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯ್ತು. ಅಲ್ಲದೇ ಮುಂದೆಯೂ ಬೆಂಕಿ ಬೀಳುವಂತಹ ಯಾವುದಾದರೂ ಅಪಾಯಗಳಿವೆಯೇ ಎಂದು ಮರುಪರಿಶೀಲನೆ ನಡೆಸಿ ನೈರ್ಮಲ್ಯ ತಪಾಸಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಯ್ತು ಎಂದು ನೌಕಾಪಡೆ ಹೇಳಿದೆ.

Tap to resize

Latest Videos

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ಲಾಸ್‌ಮೆಟ್‌ಗಳಿಗೆ ಭಾರತೀಯ ಸೇನೆಯ ಪ್ರತಿಷ್ಠಿತ ಹುದ್ದೆ!

ನಿನ್ನೆ ಮಧ್ಯಾಹ್ನ ಹಡಗು ಒಂದು ಬದಿಗೆ ವಾಲಲು ಆರಂಭಿಸಿತ್ತು, ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಈ ಹಡಗನ್ನು ಸರಿಯಾದ ಸ್ಥಾನಕ್ಕೆ ತರಲಾಗಲಿಲ್ಲ, ಹಡಗು ಮತ್ತಷ್ಟು ವಾಲಲು ಆರಂಭಿಸಿದ್ದು, ಪ್ರಸ್ತುತ ಒಂದು ಬದಿಯಲ್ಲಿ ವಿಶ್ರಾಂತವಾಗಿದೆ ಎಂದು ನೌಕಾಪಡೆ ತಿಳಿಸಿದೆ.  ಈ ಹಡಗಿನಲ್ಲಿದ್ದ ಒಬ್ಬ ಜೂನಿಯರ್ ನಾವಿಕನ ಹೊರತಾಗಿ ಎಲ್ಲರೂ ಸುರಕ್ಷಿತರಾಗಿದ್ದಾರೆ.  ಆತನಿಗಾಗಿ ರಕ್ಷಣಾ ತಂಡ ಹುಡುಕಾಟ ನಡೆಸುತ್ತಿದೆ. ಘಟನೆಗೆ  ಸಂಬಂಧಿಸಿದಂತೆ ಭಾರತೀಯ ನೌಕಾಪಡೆ ತನಿಖೆಗೆ ಆದೇಶಿಸಿದೆ.

ಐಎನ್‌ಎಸ್‌ ಬ್ರಹ್ಮಪುತ್ರ ಹಡಗು ದೇಶಿಯವಾಗಿ ನಿರ್ಮಿಸಿದ ಬ್ರಹ್ಮಪುತ್ರ ಕ್ಲಾಸ್‌ನ ಮಾರ್ಗದರ್ಶಿ ಕ್ಷಿಪಣಿ ಹೊಂದಿರುವ ಯುದ್ಧನೌಕೆಗಳಲ್ಲಿ ಮೊದಲನೆಯದಾಗಿದೆ. 2000ನೇ ಇಸವಿಯ ಏಪ್ರಿಲ್‌ನಲ್ಲಿ ಭಾರತೀಯ ನೌಕಾಪಡೆಗೆ ಇದನ್ನು ನಿಯೋಜಿಸಲಾಯ್ತು. ಇದರಲ್ಲಿ 40 ಅಧಿಕಾರಿಗಳು ಹಾಗೂ 330 ಸೈಲರ್‌ಗಳು ಅಂದರೆ ನಾವಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.

ಲಕ್ಷದಲ್ಲಿ ಸ್ಯಾಲರಿ, ಗೌರವಾನ್ವಿತ ಹುದ್ದೆ ಆದ್ರೂ ಮಾಡಿದ್ದು ಮಣ್ಣು ತಿನ್ನೊ ಕೆಲಸ: ನೇವಿ ಅಧಿಕಾರಿಯ ಬಂಧನ

ಈ ಹಡಗು ಮಧ್ಯಮ ಶ್ರೇಣಿಯೊಂದಿಗೆ ಹೊಂದಿಕೊಂಡಿದ್ದು, , ಹತ್ತಿರದ ವ್ಯಾಪ್ತಿಯ ಮತ್ತು ವಿಮಾನ ವಿರೋಧಿ ಬಂದೂಕುಗಳನ್ನು ಹೊಂದಿದೆ.  ಮೇಲ್ಮೈಯಿಂದ ಮೇಲ್ಮೈ ಏರ್‌ ಕ್ಷಿಪಣಿಗಳು ಮತ್ತು ಟಾರ್ಪಿಡೊ ಲಾಂಚರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಯುದ್ಧ ವಿಮಾನವೂ ನೀರಿನ ಮೇಲಿನ ಅಥವಾ ಸಾಗರದಲ್ಲಿ ನಡೆಸಬಹುದಾದ  ಎಲ್ಲಾ ಯುದ್ಧಗಳಿಗೂ ಸಾಥ್ ನೀಡುವ ಅಂಶಗಳನ್ನು ಒಳಗೊಂಡಿದೆ. ಇದರ ಜೊತೆಗೆ ಚೇತಕ್ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

 

INS Brahmaputra caught fire 🔥 YESTERDAY.
Ship sunk to one side TODAY.
One sailor missing. Many injured.😔
This happened under chief VAdm. SJ Singh's watch, despite 24 HRS TO REACT.
Any has guts to question WNC Chief?
Site is walking distance from his office! pic.twitter.com/LTT9SKyRQE

— Bharat Brigade (@BrigadeBharat)

 

Accidents happen. But INS Brahmaputra — an active frontline warship — sinking in peacetime in the safety of its home base is ALARMING. And it’s the 3rd loss of a major Indian naval asset at Mumbai Naval Dockyard in the last 11 years. Heads must roll. pic.twitter.com/eoJaiekh5y

— Shiv Aroor (@ShivAroor)

 

click me!