
ಹೈದರಾಬಾದ್ (ಜು.22): ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೆವಾ ಅವರು ಇತ್ತೀಚೆಗೆ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದುಕೊಂಡಿದ್ದಾರೆ. ಪತ್ನಿ ಸ್ನಾತಕೋತ್ತರ ಪದವಿ ಪಡೆದಿದ್ದನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಅವರ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು X ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಅನ್ನಾ ಲೆಜ್ನೆವಾ ಅವರು ತಮ್ಮ ಪದವಿ ಸ್ಕ್ರಾಲ್ ಅನ್ನು ಸ್ವೀಕರಿಸುತ್ತಿರುವುದನ್ನು ಕಾಣಬಹುದಾಗಿದೆ. ನೀಲಿ ಬಣ್ಣದ ಗೌನ್ ಧರಿಸಿದ ಪದವಿಯ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.
ಕ್ಲಿಪ್ ಅನ್ನು ಹಂಚಿಕೊಂಡ ಸಿಎಂ ಚಂದ್ರಬಾಬು ನಾಯ್ಡು, "ಸಿಂಗಾಪೂರ್ ವಿಶ್ವವಿದ್ಯಾನಿಲಯದಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಅಣ್ಣಾ ಲೆಜ್ನೇವಾ ಅವರಿಗೆ ಅಭಿನಂದನೆಗಳು. ನಿಮ್ಮ ಸಾಧನೆ ಗಮನಾರ್ಹವಾಗಿದೆ ಮತ್ತು ಇದು ಎಲ್ಲರಿಗೂ ವಿಶೇಷವಾಗಿ ಆಂಧ್ರ ಪ್ರದೇಶದ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸ್ಫೂರ್ತಿ ನೀಡುತ್ತದೆ. ಕುಟುಂಬ ನಿರ್ವಹಣೆಯ ಜೊತೆಗೆ ಶಿಕ್ಷಣವನ್ನು ಮುಂದುವರಿಸಲು ಬಯಸುವ ಹೆಣ್ಣುಮಕ್ಕಳಿಗೆ ಇದು ಸ್ಪೂರ್ತಿಯಾಗಲಿದೆ ಎಂದಿದ್ದಾರೆ. X ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡ ವಿಭಿನ್ನ ವೀಡಿಯೊದಲ್ಲಿ, ಪವನ್ ಕಲ್ಯಾಣ್ ಅವರು ಘಟಿಕೋತ್ಸವ ನಡೆದ ಸ್ಥಳದಲ್ಲಿ ಇರುವುದನ್ನು ಕಾಣಬಹುದಾಗಿದೆ.
ಪವನ್ ಕಲ್ಯಾಣ್ ಮತ್ತು ಅನ್ನಾ 2013 ರಲ್ಲಿ ವಿವಾಹವಾದರು ಮತ್ತು ಪೋಲೆನಾ ಮತ್ತು ಮಾರ್ಕ್ ಎಂಬ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಅನ್ನಾ, ಪವನ್ ಅವರ ಮೂರನೇ ಪತ್ನಿ. 'ಗಬ್ಬರ್ ಸಿಂಗ್' ನಟ ನಂದಿನಿ ಅವರನ್ನು 1997 ರಿಂದ 2007 ರವರೆಗೆ ಮತ್ತು ರೇಣು ದೇಸಾಯಿ ಅವರನ್ನು 2009 ರಿಂದ 2012 ರವರೆಗೆ ವಿವಾಹವಾಗಿದ್ದರು. ಪವನ್ ಕಲ್ಯಾಣ್‌ಗೆ ರೇಣು ದೇಸಾಯಿ ಅವರೊಂದಿಗೆ ಅಕಿರಾ ಮತ್ತು ಮಗಳು ಆಧ್ಯಾ ಇದ್ದಾರೆ.
Pawan Kalyan Life ಮೂವರು ಹೆಂಡ್ತಿಯರ ಮುದ್ದಿನ ಗಂಡ ಪವನ್ ಕಲ್ಯಾಣ್!
ಸಿನಿಮಾದ ವಿಚಾರದಲ್ಲಿ ಹೇಳುವುದಾದರೆ, ಪವನ್ ಕಲ್ಯಾಣ್ ತಮ್ಮ ಮುಂದಿನ ಒಜಿ ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅದರೊಂದಿಗೆ 'ಉಸ್ತಾದ್ ಭಗತ್ ಸಿಂಗ್' ಮತ್ತು 'ಹರಿ ಹರ ವೀರ ಮಲ್ಲು: ಭಾಗ 1 - ಸ್ವೋರ್ಡ್ ವರ್ಸಸ್ ಸ್ಪಿರಿಟ್'ನಲ್ಲೂ ನಟಿಸಿದ್ದಾರೆ.
ಉಪ ಮುಖ್ಯಮಂತ್ರಿ, ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ವೈವಾಹಿಕ ಜೀವನದ ಇಂಟ್ರೆಸ್ಟಿಂಗ್ ಸ್ಟೋರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ