Rishi Sunak ಅವರದು ಹೂವಿನ ಹಾದಿಯಲ್ಲ: ಮುಂದಿವೆ ಬೆಟ್ಟದಷ್ಟು ಸವಾಲುಗಳು..!

ಕರ್ನಾಟಕದ ಅಳಿಯ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಆದರೆ, ಅವರ ಆಯ್ಕೆ ಸುಗಮವಾಗಿಲ್ಲ. ಅವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಹಣದುಬ್ಬರ, ಬ್ರೆಕ್ಸಿಟ್‌ ನಂತರ ಸಮಸ್ಯೆಗಳ ಸಾಲು ಇದ್ದು, ಇವುಗಳನ್ನು ಪರಿಹರಿಸಲು ಅವರು ಹರಸಾಹಸ ಪಡಬೇಕಿದೆ.

rishi sunak has many challenges to face as britain prime minister ash

ಲಂಡನ್‌: ಬ್ರಿಟನ್‌ (Britain) ನೂತನ ಪ್ರಧಾನಿ (Prime Minister) ರಿಷಿ ಸುನಕ್‌ಗೆ (Rishi Sunak) ಹೊಸ ಹಾದಿ ಸುಗಮವಾಗೇನೂ ಇಲ್ಲ. ಬ್ರಿಟನ್‌ ಕಳೆದ 40 ವರ್ಷಗಳಲ್ಲೇ ಕಂಡುಕೇಳರಿಯದ ಹಣದುಬ್ಬರ (Inflation), ಬ್ರೆಕ್ಸಿಟ್‌ (Brexit) ನಂತರದ ನೂರಾರು ಸಮಸ್ಯೆಗಳಿಂದ ಬಳಲುತ್ತಿದ್ದು ಅದನ್ನು ಎದುರಿಸಬೇಕಾದ ಗುರುತರ ಸವಾಲು ಮುಂದಿದೆ. ಈ ನಡುವೆ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯ (Economy) ಸ್ಥಾನದಿಂದ 6ನೇ ಸ್ಥಾನಕ್ಕೆ ಜಾರಿದೆ. ಹೀಗಾಗಿ ರಾಜಕೀಯ ಸ್ಥಿರತೆಯೊಂದಿಗೆ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಸುನಕ್‌ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ರಿಷಿ ಮುಂದಿನ ಆರ್ಥಿಕ ಸವಾಲು ಏನು?
ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿತ ಕಂಡುಬಂದಿದ್ದು, ಬಡ್ಡಿದರ ಸತತವಾಗಿ ಏರಿಕೆಯಾಗುತ್ತಿದೆ. ಬ್ರಿಟನ್‌ನ ಕೇಂದ್ರ ಬ್ಯಾಂಕ್‌ ಆಗಿರುವ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಎರಡಂಕಿ ಹಣದುಬ್ಬರವನ್ನು ಇಲಿಸಲು ಹರಸಾಹಸ ಪಡುತ್ತಿದೆ. ಇದರಿಂದಾಗಿ ಬೆಲೆಗಳು ಗಗನಕ್ಕೇರುತ್ತಿದ್ದು, ಜನರ ನೈಜ ಆದಾಯದಲ್ಲಿ ಇಳಿಕೆಯಾಗುತ್ತಿದೆ. ಮತ್ತೊಂದೆಡೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ದಿನೇ ದಿನೇ ಪೌಂಡ್‌ ಮೌಲ್ಯ ಕುಸಿಯತೊಡಗಿದೆ. ಹಿಂದಿನ ಪ್ರಧಾನಿ ಲಿಜ್‌ ಟ್ರಸ್‌ ತೆರಿಗೆ ಕಡಿತದ ನೀತಿಗಳಿಂದಾಗಿ ಸರ್ಕಾರಿ ಬಾಂಡುಗಳ ಮೌಲ್ಯ ಕುಸಿದಿದೆ. ಇಂಧನದ ಬೆಲೆಯು ಗಗನಕ್ಕೇರಿದೆ.

ಇದನ್ನು ಓದಿ: UK Prime Minister: ಬ್ರಿಟನ್‌ನಲ್ಲಿ ಇನ್ಮುಂದೆ ಕರ್ನಾಟಕದ ಅಳಿಯನ ದರ್ಬಾರ್‌..!

ಈ ನಿಟ್ಟಿನಲ್ಲಿ ರಿಷಿ ಸುನಕ್‌ ಚುನಾವಣಾ ಪ್ರಚಾರ ನಡೆಸುವಾಗ ಬ್ರಿಟನ್‌ನ ಹಣದುಬ್ಬರ ನಿಯಂತ್ರಣಕ್ಕೆ ಬಂದ ಬಳಿಕ ತೆರಿಗೆ ಕಡಿತ ಮಾಡುವುದಾಗಿ ಹೇಳಿದ್ದರು. ಅಲ್ಲದೇ 2029ರವರೆಗೆ ಹಂತ ಹಂತವಾಗಿ ಶೇ.20ರಷ್ಟಿದ್ದ ಆದಾಯ ತೆರಿಗೆಯನ್ನು ಶೇ.16ಕ್ಕೆ ಇಳಿಸುವ ಯೋಜನೆಯನ್ನು ಘೋಷಿಸಿದ್ದರು. ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಜತೆಯಲ್ಲೇ ಸರ್ಕಾರಿ ನೀತಿಗಳನ್ನು ಕೈಗೊಂಡು ಹಣದುಬ್ಬರಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ್ದರು. ಇದನ್ನು ರಿಷಿ ಸುನಕ್‌ ಶೀಘ್ರ ಕಾರ್ಯಗತಗೊಳಿಸಬೇಕಾಗಿದೆ.

ರಾಜಕೀಯ ಸವಾಲುಗಳು
ಸಂಸತ್ತಿನಲ್ಲಿ ಬಹುಮತ ಪಡೆದ ಕನ್ಸರ್ವೇಟಿವ್‌ ಪಕ್ಷವನ್ನು ತನ್ನ ನಿಯಂತ್ರಣದಲ್ಲಿ ತಂದು ಪಕ್ಷದಲ್ಲಿರುವ ಬಣಗಳನ್ನು ಒಗ್ಗೂಡಿಸುವುದು ರಿಷಿ ಮುಂದಿರುವ ಮಹತ್ವದ ಸವಾಲಾಗಿದೆ. ಬ್ರೆಕ್ಸಿಟ್‌, ಆರ್ಥಿಕ ವ್ಯವಸ್ಥೆ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ವಲಸಿಗರ ಸಂಖ್ಯೆ ಮೊದಲಾದವುಗಳ ವಿಚಾರವಾಗಿ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳಿವೆ. ಪಕ್ಷದಲ್ಲಿ ಕೆಲವರು ಅಧಿಕ ತೆರಿಗೆಯನ್ನು ವಿರೋಧಿಸಿದರೆ ಇನ್ನು ಕೆಲವು ಆರೋಗ್ಯ, ರಕ್ಷಣೆ ಮೊದಲಾದ ಮಹತ್ವದ ಕ್ಷೇತ್ರಗಳಲ್ಲಿ ವೆಚ್ಚ ಇಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಣಗಳ ಆಂತರಿಕ ಭಿನ್ನಾಭಿಪ್ರಾಯವನ್ನು ದೂರವಾಗಿಸಿ ಒಗ್ಗಟ್ಟು ಮೂಡಿಸುವ ಸವಾಲು ರಿಷಿ ಮುಂದಿದೆ.

ಇದನ್ನೂ ಓದಿ: ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್‌ಗೆ ಶುಭಕೋರಿದ ನರೇಂದ್ರ ಮೋದಿ!

ಬ್ರೆಕ್ಸಿಟ್‌ ನಂತರದ ಸವಾಲುಗಳು
2016ರಲ್ಲಿ ರಿಷಿ ಬ್ರೆಕ್ಸಿಟ್‌ ಬೆಂಬಲಿಸಿದ್ದರು. ಆದರೆ ಬ್ರೆಕ್ಸಿಟ್‌ ಯಶಸ್ಸಿನ ನಂತರವೂ ಬ್ರಿಟನ್‌ ಭಾರತ ಸೇರಿ ಇತರೆ ದೇಶಗಳೊಂದಿಗೆ ಯಾವುದೇ ಮುಕ್ತ ವ್ಯಾಪಾರದ ಮಹತ್ವಪೂರ್ಣ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಬ್ರಿಟನ್‌-ಉತ್ತರ ಐರ್ಲೆಂಡ್‌ ನಡುವಿನ ಒಪ್ಪಂದ ಇನ್ನೂ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ರಿಷಿ ಸುನಕ್‌ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ. ದೇಶದ ಆರ್ಥಿಕತೆಯನ್ನು ಸುಧಾರಿಸಬೇಕಾಗಿದೆ.

ಇದನ್ನೂ ಓದಿ: ಸುನಕ್, ಕಮಲಾ ಹ್ಯಾರಿಸ್ ಮಾತ್ರವಲ್ಲ ಭಾರತೀಯರ ಕೈಯಲ್ಲಿದೆ ಹಲವು ದೇಶದ ಆಡಳಿತ!

Latest Videos
Follow Us:
Download App:
  • android
  • ios