ಭಾರತದ ಏರ್ ಇಂಡಿಯಾ ವಿಮಾನ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಾಂಗ್ ಕಾಂಗ್ ಸರ್ಕಾರ!

By Suvarna NewsFirst Published Sep 21, 2020, 6:10 PM IST
Highlights

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನ ಸೇವೆ ನಿಧಾನವಾಗಿ ಆರಂಭಗೊಳ್ಳುತ್ತಿದೆ. ಸೀಮಿತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಾಂಗ್ ಕಾಂಗ್ ಸರ್ಕಾರ ಭಾರತಕ್ಕೆ ಶಾಕ್ ನೀಡಿದೆ. ಏರ್ ಇಂಡಿಯಾ ವಿಮಾನ ಹಾಂಗ್ ಕಾಂಗ್ ಪ್ರವೇಶಿಸಿದಂತೆ ನಿರ್ಬಂಧ ವಿಧಿಸಿದೆ.

ಹಾಂಕ್ ಕಾಂಗ್(ಸೆ.21): ಕೊರೋನಾ ವೈರಸ್ ಅಬ್ಬರ ಕಡಿಮೆಯಾಗದಿದ್ದರೂ, ಬಹುತೇಕ ಸೇವೆಗಳು ಲಭ್ಯವಿದೆ. ಅನ್‌ಲಾಕ್ ಪ್ರಕ್ರಿಯೆಲ್ಲಿ ಒಂದೊದೆ ಕ್ಷೇತ್ರಕ್ಕೆ ನಿಯಮ ಸಡಿಲಿಕೆ ಮಾಡಿದ ಸರ್ಕಾರ ಇದೀಗ ಬಹುತೇಕ ಕ್ಷೇತ್ರಕ್ಕೆ ವಿನಾಯಿತಿ ನೀಡಲಾಗಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಂಡಿದೆ. ಸ್ಥಗಿತಗೊಂಡಿದ್ದ ವಿಮಾನಯಾನ ಚೇತರಿಕೆ ಪಡೆಯುತ್ತಿದ್ದ ಬೆನ್ನಲ್ಲೇ ಹಾಂಗ್ ಕಾಂಗ್ ಭಾರತದ ಏರ್ ಇಂಡಿಯಾ ಪ್ರವೇಶ ಬ್ಯಾನ್ ಮಾಡಿದೆ.

ಭಾರತದ ವಿಮಾನಕ್ಕೆ ನಿರ್ಬಂಧ; ವಿದೇಶ ಪ್ರಯಾಣಕ್ಕೆ ಹೊಸ ಮಾರ್ಗಸೂಚಿಗೆ ಮುಂದಾದ ಕೇಂದ್ರ!.

ಭಾನುವರಾ( ಸೆ.20) ಹಾಂಗ್ ಕಾಂಗ್ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಭಾರತದ ಏರ್ ಇಂಡಿಯಾ ವಿಮಾನ ಹಾಂಗ್ ಕಾಂಗ್ ಪ್ರವೇಶಿಸದಂತೆ ನಿರ್ಬಂಧ ವಿದಿಸಿದೆ. ಏರ್ ಇಂಡಿಯಾ ಹಾಗೂ ಕ್ಯಾಥೆ ಪೆಸಿಫಿಕ್ ವಿಮಾನವನ್ನು ಅಕ್ಟೋಬರ್ 3ರ ವರೆಗೆ ಬ್ಯಾನ್ ಮಾಡಿದೆ. ಎರಡು ವಿಮಾನದಲ್ಲಿ ಹಾಂಗ್ ಕಾಂಗ್ ಆಗಮಿಸಿದ ಪ್ರಯಾಣಿಕರಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಹೀಗಾಗಿ ಬ್ಯಾನ್ ಮಾಡಿದೆ.

ಲಾಕ್‌ಡೌನ್‌ ಸಡಿಲಿಕೆ ಬಳಿಕ 100 ದಿನದಲ್ಲಿ 10 ಲಕ್ಷ ಮಂದಿ ವಿಮಾನಯಾನ.

ಅಂತಾರಾಷ್ಟ್ರೀಯ ವಿಮಾನ ಹಾರಾಟದಿಂದ ಹಾಂಗ್ ಕಾಂಗ್‌ನಲ್ಲಿ ಕೊರೋನಾ ವೈರಸ್ ಪ್ರಕರಣಗಳು ನಿಧಾನಗತಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಭಾರತದಿಂದ ಆಗಮಿಸುವ ಪ್ರಯಾಣಿಕರಲ್ಲಿ ಹೆಚ್ಚು ಕೊರೋನಾ ಕಾಣಿಸಿಕೊಳ್ಳುತ್ತಿದೆ ಎಂದು ಹಾಂಗ್ ಕಾಂಗ್ ಆರೋಗ್ಯ ವಿಭಾಗ ಹೇಳಿದೆ.  ಕ್ಯಾಥೆ ಡ್ರಾಗನ್ ವಿಮಾದ ಮೂಲಕ ಭಾರತದಿಂದ ಕೌಲಾಲಾಂಪುರ್ ಮಾರ್ಗವಾಗಿ ಹಾಂಗ್ ಕಾಂಗ್ ತೆರಳಿದ ಐವರಿಗೆ ಕೊರೋನಾ ವೈರಸ್ ದೃಢಪಟ್ಟಿತ್ತು.

ಹಾಂಗ್ ಕಾಂಗ್‌ನಲ್ಲಿ ಸದ್ಯ ಕೊರೋನಾ ಸೋಂಕಿತರ ಸಂಖ್ಯೆ 23ಕ್ಕೆ ಏರಿದೆ. ಇದರಲ್ಲಿ 3ನೇ ಒಂದು ಭಾಗ ಭಾರತದಿಂದ ಆಗಮಿಸಿದ ಪ್ರಯಾಣಿಕರು ಎಂದು ಹಾಂಕ್ ಕಾಂಗ್ ಹೇಳಿದೆ. 

click me!