Sheena Bora Murder Case: ಮಗಳು ಬದುಕಿದ್ದಾಳೆ ಎಂದ ಇಂದ್ರಾಣಿ ಮುಖರ್ಜಿ

By Contributor AsianetFirst Published Dec 16, 2021, 3:52 PM IST
Highlights
  •  
  • ಪುತ್ರಿಯ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯಿಂದ ಹೊಸ ಬಾಂಬ್‌
  • ಮಗಳು ಶೀನಾ ಬೋರಾ ಬದುಕಿದ್ದಾಳೆ ಎಂದು ಪತ್ರ
  • ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆದ ಇಂದ್ರಾಣಿ ಮುಖರ್ಜಿ

ಹೊಸದಿಲ್ಲಿ: 2012ರಲ್ಲಿ ತನ್ನ ಮಗಳು ಶೀನಾ ಬೋರಾ( Sheena Bora)ಳನ್ನು ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ(Indrani Mukerjea) ಈಗ ತನ್ನ ಪುತ್ರಿ ಬದುಕಿರುವುದಾಗಿ ಹೇಳಿ ಸಿಬಿಐಗೆ ಪತ್ರ ಬರೆದಿದ್ದು, ಇದರಿಂದ ಈ ಪ್ರಕರಣಕ್ಕೆ ವಿಚಿತ್ರವಾದ ಹೊಸ ತಿರುವು ಸಿಕ್ಕಿದೆ. 

ತಾನು ಕಾಶ್ಮೀರ (Kashmir)ದಲ್ಲಿ ಶೀನಾ ಬೋರಾಳನ್ನು ಭೇಟಿ ಮಾಡಿದ್ದೆ ಎಂದು ಹೇಳಿದ ಮಹಿಳಾ ಖೈದಿಯೊಬ್ಬರನ್ನು ತಾನು ಭೇಟಿಯಾಗಿದ್ದಾಗಿ ಇಂದ್ರಾಣಿ ಮುಖರ್ಜಿ ಹೇಳಿಕೊಂಡಿದ್ದಾರೆ ಎಂದು ಸಿಬಿಐ ಮುಖ್ಯಸ್ಥ (CBI chief) ರಿಗೆ ಇಂದ್ರಾಣಿ ಮುಖರ್ಜಿ ನೇರವಾಗಿ ಕಳುಹಿಸಿದ ಪತ್ರವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 'ಅವರು ಸಿಬಿಐಗೆ ಪತ್ರ ಬರೆದಿದ್ದಾರೆ, ಅವರು ಏನು ಬರೆದಿದ್ದಾರೆ ಎಂಬುದರ ಕುರಿತು ನಮಗೆ ಯಾವುದೇ ವಿವರಗಳಿಲ್ಲ' ಎಂದು ಅವರ ವಕೀಲೆ(lawyer) ಸನಾ ಖಾನ್( Sana Khan) ಇಂದು ಹೇಳಿದರು, ಅವರ ಜಾಮೀನಿಗಾಗಿ ಔಪಚಾರಿಕ ಅರ್ಜಿಯನ್ನು ಸಲ್ಲಿಸುವುದಾಗಿ ಹೇಳಿದರು.

49 ವರ್ಷದ ಇಂದ್ರಾಣಿ ಮುಖರ್ಜಿ,  ಅವರು 2015 ರಿಂದ ಮುಂಬೈನ ಬೈಕುಲ್ಲಾ ಜೈಲಿ (Byculla prison) ನಲ್ಲಿದ್ದಾರೆ. ಆಕೆಯ ಮೊದಲ ಮದುವೆಯಿಂದ ಹುಟ್ಟಿದ ಮಗಳಾಗಿದ್ದ 25 ವರ್ಷದ ಶೀನಾ ಬೋರಾಳನ್ನು ಹತ್ಯೆಗೈದ ಆರೋಪದ ಮೇಲೆ ಇಂದ್ರಾಣಿ ಮುಖರ್ಜಿಯನ್ನು ಬಂಧಿಸಲಾಗಿತ್ತು.  ಆಕೆಯ ಬಂಧನವಾಗಿ ಮೂರು ತಿಂಗಳ ನಂತರ, ಇಂದ್ರಾಣಿಗೆ ಸಹಾಯ ಮಾಡಿದ ಆರೋಪದ ಮೇಲೆ ಆಕೆಯ ಮಾಜಿ ಪತಿ ಪೀಟರ್ ಮುಖರ್ಜಿ( Peter Mukerjea)ಯನ್ನೂ ಬಂಧಿಸಲಾಗಿತ್ತು.

ಪುತ್ರಿ ಶೀನಾಳ ಮುಖದ ಮೇಲೆ ಕುಳಿತು ಹತ್ಯೆಗೈದಿದ್ದ ಇಂದ್ರಾಣಿ!

ಆದರೆ ತನಿಖಾಧಿಕಾರಿಗಳು ಆಕೆಯ ಇತ್ತೀಚಿನ ಈ ಹೇಳಿಕೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.  ಶೀನಾ ಬೋರಾಳನ್ನು ಇಂದ್ರಾಣಿ ಮುಖರ್ಜಿ ಕೊಲೆ ಮಾಡಿದ್ದಾಳೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆಕೆಗೆ ಆಕೆಯ ಚಾಲಕ ಶ್ಯಾಮ್ವರ್ ರೈ(Shyamvar Rai) ಮತ್ತು ಆಕೆಯ ಎರಡನೇ ಪತಿ ಸಂಜೀವ್ ಖನ್ನಾ(Sanjeev Khanna) ಸಹಾಯ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ತನ್ನ ಹಿಂದಿನ ಪತಿ ಪೀಟರ್ ಮುಖರ್ಜಿಯವರ ಹಿಂದಿನ  ಮದುವೆಯಿಂದ ಹುಟ್ಟಿದ ಮಗ ರಾಹುಲ್ ಮುಖರ್ಜಿ(Rahul Mukerjea) ಜೊತೆಯೂ ಈಕೆಗೆ ಸಂಬಂಧವಿತ್ತು. ಈ  ಸಂಬಂಧದ ಬಗ್ಗೆ ಮಗಳು ಶೀನಾ ಬೋರಾಗೆ ತಿಳಿದು ಆಕೆ ಆ ಬಗ್ಗೆ ಕೋಪ ಗೊಂಡಿದ್ದಳು. ಇದರಿಂದ ಆಕೆಯನ್ನು ಹತ್ಯೆ ಮಾಡಲಾಯಿತು ಎಂದು ಈ ಪ್ರಕರಣದ ಬೆನ್ನತ್ತಿದ್ದ ಮುಂಬೈ ಪೋಲೀಸರ ತಿಂಗಳ ತನಿಖೆಯ ನಂತರ 2015 ರ ಕೊನೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ವಿಚಾರಣೆ ವೇಳೆ ತಿಳಿದು ಬಂದಿತ್ತು.

ಅಮ್ಮ ಮಗಳ  ನಡುವಿನ ಹಣಕಾಸಿನ ವಿವಾದದ ನಂತರ ಶೀನಾ ಬೋರಾ ತನ್ನ ತಾಯಿಗೆ ಆಕೆಯ ಈ ಅನೈತಿಕ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಳು ಇದರಿಂದ ಆಕೆ ಮಗಳ ಕೊಲೆಗೆ ನಿರ್ಧರಿಸಿದ್ದಳು ಎಂದು ಸಿಬಿಐ ಹೇಳಿದೆ. ಮಗಳನ್ನು ಕೊಲೆ ಮಾಡಿದ ನಂತರ ಇಂದ್ರಾಣಿ, ಮಗಳು ಶೀನಾ ಬೋರಾ ಅಮೆರಿಕ(America)ಕ್ಕೆ ತೆರಳಿದ್ದಾಳೆ ಎಂದು ಎಲ್ಲರಿಗೂ ಹೇಳಿದ್ದಳು. ಮೂರು ವರ್ಷಗಳ ನಂತರ, ಪ್ರತ್ಯೇಕ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಅವರ ಚಾಲಕನನ್ನು ಬಂಧಿಸಿದಾಗ ಕೊಲೆ ಬೆಳಕಿಗೆ ಬಂದಿತು.

ಜೈಲಲ್ಲಿರುವ ಇಂದ್ರಾಣಿ, ಪೀಟರ್‌ ವಿಚ್ಛೇದನಕ್ಕೆ ಕೋರ್ಟ್‌ ಅನುಮೋದನೆ

ಚಾಲಕನ ಹೇಳಿಕೆಯ ಆಧಾರದ ಮೇಲೆ ಶೀನಾ ಅವರ ಅರ್ಧ ಸುಟ್ಟ ದೇಹವನ್ನು ಮುಂಬೈ ಸಮೀಪದ ಅರಣ್ಯದಿಂದ ಹೊರತೆಗೆಯಲಾಯಿತು. 2017ರಲ್ಲಿ ಆರಂಭವಾದ ಸಿಬಿಐನ ಈ ವಿಚಾರಣೆಯಲ್ಲಿ ಸುಮಾರು 60 ಸಾಕ್ಷಿಗಳ ಹೇಳಿಕೆಗಳನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಇತ್ತ ಜೈಲಿನಲ್ಲಿದ್ದಾಗಲೇ, ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ತಮ್ಮ 17 ವರ್ಷಗಳ ವೈವಾಹಿಕ ಸಂಬಂಧವನ್ನು ಕೊನೆಗೊಳಿಸಿದರು. ಮತ್ತು 2019 ರಲ್ಲಿ ವಿಚ್ಛೇದನವನ್ನು ಪಡೆದರು. ಪೀಟರ್ ಮುಖರ್ಜಿ 2020 ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. 
 

click me!