MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Karnataka Districts
• ಕಾರವಾರ: ನಾಯಿ ಮರಿಗಾಗಿ ಕಾಯುತ್ತಿರುವ ಪೊಲೀಸರು..!

ಕಾರವಾರ: ನಾಯಿ ಮರಿಗಾಗಿ ಕಾಯುತ್ತಿರುವ ಪೊಲೀಸರು..!

ವಸಂತಕುಮಾರ್‌ ಕತಗಾಲಕಾರವಾರ(ಏ.26): ಅಂಕೋಲಾದ ಶ್ವಾನವೊಂದು ಮರಿ ಹಾಕುವುದನ್ನೇ ದೇಶದ ವಿವಿಧ ರಾಜ್ಯಗಳ ಜನತೆ, ಪೊಲೀಸ್‌ ಇಲಾಖೆ ಸಿಬ್ಬಂದಿ ಕಾಯುತ್ತಿದ್ದಾರೆ. ಹಾಗೆ ಅವರನ್ನೆಲ್ಲ ತುದಿಗಾಲಿನ ಮೇಲೆ ನಿಲ್ಲಿಸಿದವರು ಅಂಕೋಲೆಯ ಪುಟ್ಟ ಊರು ಬಾವಿಕೇರಿಯ ರಾಘವೇಂದ್ರ ಭಟ್‌.

2 Min read
Author : Kannadaprabha News | Asianet News
Published : Apr 26 2021, 03:35 PM IST
Share this Photo Gallery
• FB
• TW
• Linkdin
• Whatsapp
19

ರಾಘವೇಂದ್ರ ಭಟ್‌ ಸಾಕಿದ್ದು ಬೆಲ್ಜಿಯನ್‌ ಮೆಲಿನೋಯ್ಸ್‌ ತಳಿಯ ಮೂರು ನಾಯಿಗಳನ್ನು. ಈ ನಾಯಿಗಳ ಮರಿಗಾಗಿ ಭಾರಿ ಬೇಡಿಕೆ ಇದೆ.

29

ಈ ಹಿಂದೆ ಹಾಕಿದ 14 ಮರಿಗಳು ಬೆಂಗಳೂರು ಪೊಲೀಸ್‌ ಶ್ವಾನದಳಕ್ಕೆ, ನಾಗಾಲ್ಯಾಂಡ್‌, ಕೇರಳ ಹಾಗೂ ರಾಜ್ಯದ ವಿವಿಧೆಡೆಯ ಜನತೆ ಕೊಂಡೊಯ್ದಿದ್ದಾರೆ. ಈಗ ಹುಟ್ಟಲಿರುವ ಮರಿಗಳಿಗಾಗಿ ನಾಗಾಲ್ಯಾಂಡ್‌, ತಮಿಳುನಾಡು, ತೆಲಂಗಾಣ ಹಾಗೂ ಗುಜರಾತ್‌ನ ಜನತೆ ಮುಂಗಡ ಬುಕ್‌ ಮಾಡಿದ್ದಾರೆ.

39

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೀಕ್ಷಣಾಲಯದ ಅಧೀಕ್ಷಕರಾಗಿರುವ ರಾಘವೇಂದ್ರ ಜಿ. ಭಟ್‌ ಅವರಿಗೆ ಶ್ವಾನಗಳನ್ನು ಸಾಕುವುದು ಕ್ರೇಜ್‌. ಇವರ ಶ್ವಾನಗಳು ಕೆಲವೆಡೆ ಪ್ರಶಸ್ತಿಯನ್ನೂ ಪಡೆದಿವೆ. ಹೆಚ್ಚು ಕಡಿಮೆ 22 ವರ್ಷಗಳಿಂದ ಶ್ವಾನಗಳನ್ನು ಸಾಕುತ್ತಿದ್ದಾರೆ.

49

ವರ್ಷ, ಎರಡು ವರ್ಷಗಳಿಗೊಮ್ಮೆ ಶ್ವಾನಗಳನ್ನು ಬದಲಿಸುತ್ತ ಬಹುತೇಕ ತಳಿಗಳ ಶ್ವಾನಗಳನ್ನು ಸಾಕಿದ ಅನುಭವ ಇವರಿಗಿದೆ. ಡಾಬರ್‌ಮನ್‌, ಜರ್ಮನ್‌ ಶೆಫರ್ಡ್‌, ಬಾಕ್ಸರ್‌, ಪಗ್‌, ಮುಧೋಳ, ಇಂಡಿಯನ್‌ ಮೆಸ್ಟಿಫ್‌, ಸೆಂಟ್‌ ಬರ್ನಾಡ್‌ ಹೀಗೆ ವಿವಿಧ ತಳಿಯ ಶ್ವಾನಗಳನ್ನು ಹಿಂದೆ ಸಾಕಿದ ಅನುಭವದೊಂದಿಗೆ ಈಗ ಬೆಲ್ಜಿಯಂ ಮೆಲಿನೋಯ್ಸ್‌ ತಳಿಯ 1 ಗಂಡು, 2 ಹೆಣ್ಣು ಹೀಗೆ 3 ಶ್ವಾನಗಳಿವೆ. ದೆಹಲಿ ಹಾಗೂ ಹೈದರಾಬಾದ್‌ಗೆ ತೆರಳಿ ಲಕ್ಷಾಂತರ ರು. ನೀಡಿ ಶ್ವಾನ ಖರೀದಿಸಿ ತಂದಿದ್ದಾರೆ. ಪ್ರತಿ ನಾಯಿ ಮರಿಯನ್ನು 50-60 ಸಾವಿರಗಳಿಗೆ ಮಾರಾಟ ಮಾಡಿದ್ದಾರೆ.

59

ಕೇವಲ ಕ್ರೇಜ್‌ಗಾಗಿ ಶ್ವಾನಗಳನ್ನು ಸಾಕುವುದನ್ನು ಆರಂಭಿಸಿದ ಇವರು, ಅದನ್ನು ಯಶಸ್ವಿಯಾಗಿ ಮುಂದುವರಿಸಿದರು. ಆರಂಭದಲ್ಲಿ ನಾಯಿಗಳಿಗೆ ಚಿಕ್ಕಪುಟ್ಟ ಅನಾರೋಗ್ಯವಾದಾಗ ಇವರೇ ಔಷಧಿ ಮಾಡುತ್ತ, ತಜ್ಞಪಶು ವೈದ್ಯರ ಸಲಹೆ, ಮಾರ್ಗದರ್ಶನ, ಅವರು ನೀಡುವ ಚಿಕಿತ್ಸೆ ನೋಡಿ ಈಗ ಇವರೇ ಪಶುವೈದ್ಯರ ಮಟ್ಟಕ್ಕೆ ಬೆಳೆದಿದ್ದಾರೆ.

69

ಆರಂಭದಲ್ಲಿ ಕೆಲವು ನಾಯಿಗಳ ವರ್ತನೆ ನೋಡಿ ಮನೆಯವರು ಇವರಿಗೆ ಕಿರಿಕಿರಿ ಮಾಡಿದ್ದಿದೆ. ಆದರೆ ಉತ್ತಮ ತಳಿಯ ನಾಯಿಗಳು ಬಂದಾಗ ಅಷ್ಟೇ ಅಕ್ಕರೆಯಿಂದ ಆರೈಕೆ ಮಾಡಿದ್ದಾರೆ. ಈಗಂತೂ ಬೆಲ್ಜಿಯಂ ಮೆಲನೋಯ್‌್ಸ ಶ್ವಾನ ಅಂದರೆ ಇವರ ತಾಯಿ ಗೀತಾ, ಪತ್ನಿ ರಾಜೇಶ್ವರಿ, ಮಗಳು ಅನನ್ಯ ರಾಘವೇಂದ್ರ ಭಟ್‌ ಅವರಿಗೆ ಸಾಥ್‌ ನೀಡುತ್ತಿದ್ದಾರೆ.

79

ಬೆಲ್ಜಿಯನ್‌ ಮೆಲಿನೋಯ್ಸ್‌ ದಣಿವರಿಯದೆ 25 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. 1 ಕಿ.ಮೀ. ದೂರದ ಸಣ್ಣ ಶಬ್ದವನ್ನೂ ಗ್ರಹಿಸಬಲ್ಲದು. ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ತರಬೇತಿ ನೀಡಬಹುದು. ದೇಶದ ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳಬಲ್ಲದು.

89

ರಾಘವೇಂದ್ರ ಭಟ್‌ ಶುದ್ಧ ಶಾಕಾಹಾರಿ. ಆದರೆ ಚಿಕನ್‌ ಅಂಗಡಿಯಲ್ಲಿ ಇವರ ಅಕೌಂಟ್‌ ಇದೆ. ಇವರ ಮನೆಗೆ ಪ್ರತಿದಿನ ಚಿಕನ್‌ ರೈಸ್‌, ಹಸಿ ಮಾಂಸ, ಬೇಯಿಸಿದ ಮೊಟ್ಟೆಗಳ ಪಾರ್ಸೆಲ್‌ ಬರುತ್ತದೆ. ಶ್ವಾನಗಳಿಗೆ ಮಾಂಸಾಹಾರ ಬೇಕೇಬೇಕು. ಮಾಂಸಾಹಾರ ತಂದು ಹಾಕಲೆಂದೆ ಒಬ್ಬನನ್ನು ನೇಮಕ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಶ್ವಾನಗಳ ಆಹಾರಕ್ಕೆಂದೆ 15-20 ಸಾವಿರ ವೆಚ್ಚ ಮಾಡುತ್ತಾರೆ.

99

ನನಗೆ ನಾಯಿ ಸಾಕುವುದು ಹವ್ಯಾಸ. ನಾಯಿಗಳಿಂದ ಹಣ ಮಾಡುವ ಉದ್ದೇಶ ಇಲ್ಲ. ಬಂದ ಸಂಬಳದಲ್ಲಿ ಕೆಲವು ಭಾಗವನ್ನು ನಾಯಿಗಳಿಗಾಗಿ ವಿನಿಯೋಗಿಸುತ್ತೇನೆ. ನಾಯಿಗಳ ನಿಷ್ಟೆ, ವಿಧೇಯತೆ ಖುಷಿ ಕೊಡುವ ಸಂಗತಿ ಎಂದು ರಾಘವೇಂದ್ರ ಭಟ್‌ ತಿಳಿಸಿದ್ದಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ಕೈಗಾ ಅಣುಸ್ಥಾವರ: ಅಣು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮ ನಿರ್ಭರತೆ: ಡಾ.ಅಜಿತ್ ಕುಮಾರ್ ಮೊಹಂತಿ
Recommended image2
ಬೆಂಗಳೂರು–ಅಶೋಕಪುರಂ ಮೆಮು ರೈಲು ವಿಳಂಬ, ಬಿಡದಿಯಲ್ಲಿ ಪ್ರಯಾಣಿಕರ ಪ್ರತಿಭಟನೆ, ಲಘು ಲಾಠಿ ಚಾರ್ಜ್!
Recommended image3
ರಾಮನಗರದಲ್ಲಿ ಮಾರ್ಚ್‌5 ರಂದು ಉದ್ಯೋಗ ಮೇಳ, ಬರೋಬ್ಬರಿ 171 ಕಂಪೆನಿಗಳು ಭಾಗಿ, ನೀವು ಸಿದ್ಧರಿದ್ದೀರಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved