Himveers 12,500 ಫೀಟ್ ಎತ್ತರದಲ್ಲಿ ಕಬಡ್ಡಿ ಆಡಿದ ಐಟಿಬಿಪಿ ಯೋಧರು!

Suvarna News   | Asianet News
Published : Mar 13, 2022, 06:07 PM ISTUpdated : Mar 13, 2022, 06:09 PM IST
Himveers 12,500 ಫೀಟ್ ಎತ್ತರದಲ್ಲಿ ಕಬಡ್ಡಿ ಆಡಿದ ಐಟಿಬಿಪಿ ಯೋಧರು!

ಸಾರಾಂಶ

ಐಟಿಬಿಪಿ ಟೀಮ್ ನ ಕಬಡ್ಡಿ ಕ್ರೇಜ್ 12500 ಫೀಟ್ ಎತ್ತರದಲ್ಲಿ ಕಬಡ್ಡಿ ಆಡಿದ ಐಟಿಬಿಪಿ ಯೋಧರು ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡ ಐಟಿಬಿಪಿ

ನವದೆಹಲಿ (ಮಾ.13): ಕೊರೆಯುವ ಚಳಿಯಲ್ಲಿ ಬೆಚ್ಚಗಿನ ಸ್ಥಳ ಹುಡುಕಾಟ ನಡೆಸುವವರೇ ಹೆಚ್ಚು. ಆದರೆ, ಗಡಿ ರಕ್ಷಣೆಯಲ್ಲಿ ನಿರತರಾದ ಸೈನಿಕರಿಗೆ ಇಂಥ ಭಾಗ್ಯಗಳಿಲ್ಲ. ಮಳೆ, ಚಳಿ, ಗಾಳಿ, ಬಿಸಿಲು ಏನೇ ಇದ್ದರೂ ಅವರು ಡ್ಯೂಟಿಗೆ ಯಾವುದೂ ಅಡ್ಡಿಯಾಗುವುದಿಲ್ಲ. ಇಂಥ ಸಮಯದಲ್ಲಿ  ಮನಸ್ಸನ್ನು ಆಹ್ಲಾದಕರವಾಗಿರಿಸಿಕೊಳ್ಳಲು ತಾವಿರುವ ಸ್ಥಳದಲ್ಲೇ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಹೆಚ್ಚು. ಅಂಥದ್ದೆ ಒಂದು ವಿಡಿಯೋವನ್ನು ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (Indo-Tibetan Border Police) ಬಿಡುಗಡೆ ಮಾಡಿದೆ.

ಈ ವಿಡಿಯೋದಲ್ಲಿ ಐಟಿಬಿಪಿಯ (ITBP) ಯೋಧರು ಅಂದಾಜು 12,500 ಫೀಟ್ ಉತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯಲ್ಲಿ (Himalaya Range) ಕಬಡ್ಡಿ (Kabaddi)ಆಡುತ್ತಿದ್ದಾರೆ. ಐಟಿಬಿಪಿ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲಿಯೇ ಇದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಈವರೆಗೂ 43 ಸಾವಿರ ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದಾರೆ.

"ಫುಲ್ ಆಫ್ ದಿ ಜೋಶ್, ಪ್ಲೇಯಿಂಗ್ ಇನ್ ದಿ ಸ್ನೋ" ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ನ ಹಿಮ್ ವೀರ್ಸ್(Himveers) ಹಿಮಾಚಲ ಪ್ರದೇಶದಲ್ಲಿರುವ 12500 ಫೀಟ್ ಎತ್ತರದ ಹಿಮಾಲಯ ಶ್ರೇಣಿಯಲ್ಲಿ ಕಬಡ್ಡಿ ಆಡುತ್ತಿದ್ದಾರೆ ಎಂದು ಐಟಿಬಿಪಿ ಈ ವಿಡಿಯೋಗೆ ಬರೆದುಕೊಂಡಿದೆ. ಫಿಟ್ ನೆಸ್ ಮೋಟಿವೇಷನ್, ಫಿಟ್ ಇಂಡಿಯಾ ಎನ್ನುವ ಹ್ಯಾಶ್ ಟ್ಯಾಗ್ ಅನ್ನೂ ಹಾಕಿದ್ದು, ಕೇಂದ್ರ ಸಚಿವರಾದ ಕಿರಣ್ ರಿಜಿಜು, ಅನುರಾಗ್ ಠಾಕೂರ್ ಹಾಗೂ ಫಿಟ್ ಇಂಡಿಯಾ ಖಾತೆಯನ್ನು ಟ್ಯಾಗ್ ಮಾಡಿದೆ.


ಮರಗಟ್ಟುವಂಥ ಚಳಿಯಲ್ಲಿ ಐಟಿಬಿಪಿ ಯೋಧರು, ಜಾಕೆಟ್ ಗಳು ಹಾಗೂ ಪ್ಯಾಡ್ ಗಳಿಂದ ತುಂಬಿದ್ದ ಡ್ರೆಸ್ ಗಳು ಮತ್ತು ಹಿಮದ ಮೇಲೆ ನಡೆಯಲು ಸಹಕಾರಿಯಾಗು ಬೂಟ್ ಗಳನ್ನು ಧರಿಸಿ ಕಬಡ್ಡಿ ಆಡಲು ಇಳಿದಿದ್ದರು, ಐಟಿಬಿಪಿ ಪ್ರಕಟಿಸಿರುವ ವಿಡಿಯೋದಲ್ಲಿ ಎರಡು ತಂಡಗಳ ಕಬಡ್ಡಿ ಆಡುತ್ತಿದ್ದು, ಒಬ್ಬನನ್ನು ಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ. ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಲಾಹೌಲ್-ಸ್ಪಿತಿ ಪ್ರದೇಶದಲ್ಲಿ ವಿಡಿಯೋ ಶೂಟ್ ಆಗಿರುವ ಸಾಧ್ಯತೆ ಕಾಣುತ್ತಿದೆ. ಪ್ರಸ್ತುತ ಈ ಪ್ರದೇಶದ ತಾಪಮಾನ ಶೂನ್ಯ ಡಿಗ್ರಿ ಸೆಲ್ಸಿಯಸ್ ಗಿಂತಲೂ ಕೆಳಗೆ ಇಳಿದಿದೆ. ಹಿಮಾವೃತ ಪ್ರದೇಶಗಳಲ್ಲಿ ಸೈನಿಕರು ಮಾನಸಿಕ ಹಾಗೂ ದೈಹಿಕವಾಗಿ ಗಟ್ಟಿಯಾಗಿರುವ ನಿಟ್ಟಿನಲ್ಲಿ ಕಬಡ್ಡಿ ಕ್ರೀಡೆಯನ್ನಯ ಆಡಿಸಲಾಗುತ್ತದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೊಣಕಾಲೆತ್ತರದ ಹಿಮದ ಮೇಲೆ ಯೋಧರ ವಾಲಿಬಾಲ್‌ ಆಟ
ಕಳೆದ ಜನವರಿಯಲ್ಲಿ ಇಂಥದ್ದೇ ಒಂದು ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.  ಭಾರತೀಯ ಯೋಧನೊಬ್ಬ ಸುರಿಯುತ್ತಿರುವ ಹಿಮಗಾಳಿಯನ್ನು ಲೆಕ್ಕಿಸದೇ ಅಚಲವಾಗಿ ನಿಂತು ದೇಶ ಕಾಯುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ, ರಾಶಿಬಿದ್ದಿರುವ ಮೊಣಕಾಲೆತ್ತರದ ಹಿಮದಲ್ಲಿ ಯೋಧರು ವಾಲಿಬಾಲ್‌ ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.. ಆ ಮೈನಸ್‌ ಡಿಗ್ರಿ ಚಳಿಯಲ್ಲೂ ಯೋಧರ ಕ್ರೀಡಾಸ್ಪೂರ್ತಿಗೆ ನೆಟ್ಟಿಗರು ಭೇಷ್‌ ಎಂದಿದ್ದರು. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ (Awanish Sharan)ಶೇರ್ ಮಾಡಿದ್ದರು. ಅತ್ಯುತ್ತಮ 'ಚಳಿಗಾಲದ ಆಟಗಳು.' ನಮ್ಮ ಜವಾನರು  ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿತ್ತು. ಭಾರತೀಯ ಯೋಧರು ಶೀತ, ಚಳಿ ವಾತಾವರಣವನ್ನು ಎದುರಿಸಿ ಹಿಮದ ಮೇಲೆ ವಾಲಿಬಾಲ್ ಆಡುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. -20 ಡಿಗ್ರಿ ಸೆಲ್ಸಿಯಸ್ ನಲ್ಲಿ ಅಂದು ಐಟಿಬಿಪಿ ಸೈನಿಕರೇ ಭಾರತ-ಚೀನಾ ಗಡಿಯಲ್ಲಿ ವಾಲಿಬಾಲ್ ಪಂದ್ಯವನ್ನು ಆಡಿದ್ದರು ಎನ್ನುವುದು ಆಮೇಲೆ ಬಹಿರಂಗವಾಗಿತ್ತು.

ಭೀಕರ ಹಿಮಪಾತಕ್ಕೆ ಅಂಜದೆ ನಿಂತ ಗಂಡು... ಭಾರತೀಯ ಯೋಧನ ವಿಡಿಯೋ ವೈರಲ್‌
ಪ್ರವಾಹವೇ ಬರಲಿ, ಭೂಕಂಪವಾಗಲಿ ಹೀಗೆ ಎಂಥಹದ್ದೇ ನೈಸರ್ಗಿಕ ವಿಕೋಪಗಳು ಸಂಭವಿಸಲಿ ತಕ್ಷಣವೇ ದೇಶದ ನಾಗರಿಕ ರಕ್ಷಣೆಗೆ ಧಾವಿಸುವುದು ಭಾರತೀಯ ಸೇನೆ. ಮಳೆ, ಮೈ ಕೊರೆಯುವ ಚಳಿ, ಬಿಸಿಲೆನ್ನದೆ ದೇಶ ಕಾಯವ ಯೋಧರು ಪೋಷಕರು, ಹೆಂಡತಿ ಮಕ್ಕಳಿಂದ ದೂರವುಳಿದು ದೇಶವನ್ನು ಕಾಯಲು ತೆರಳುತ್ತಾರೆ.  ತಾವಿದ್ದಲ್ಲೇ ತಮ್ಮ ಜೊತೆ ಇರುವವರನ್ನೇ ಕುಟುಂಬವೆಂದು ತಿಳಿದು ಸಂಭ್ರಮಿಸಿ ಖುಷಿ ಪಡುವ ಸೈನಿಕರ ಮನಸ್ಥಿತಿ ಪದಗಳಿಗೆ ನಿಲುಕದ್ದು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?