ಬೆಳಗ್ಗಿನ ಉಪಹಾರಕ್ಕೆ ದೋಸೆಯ ಜೊತೆ ಸಾಂಬಾರ್ ನೀಡಿದ ಹೋಟೆಲ್
ಬಿಲ್ ನಲ್ಲಿ ಸಾಂಬಾರ್ ಗೆ ಪ್ರತ್ಯೇಕವಾಗಿ 100 ರೂಪಾಯಿ ನಮೂದು
ಇದನ್ನು ಪ್ರಶ್ನಿಸಿದ್ದಕ್ಕೆ ಪ್ರವಾಸಿಗನನ್ನು ಕೋಣೆಯಲ್ಲಿ ಕೂಡಿಹಾಕಿದ ಹೋಟೆಲ್ ಮಾಲೀಕ
ತಿರುವನಂತಪುರ (ಮಾ.13): ಇಡ್ಲಿ ತೊಗೊಂಡ್ರೆ ಚಟ್ನಿ ಫ್ರೀ, ದೋಸೆ ( Dose ) ತೆಗೆದುಕೊಂಡರೆ ಸಾಂಬಾರ್ ( Sambar ) ಫ್ರೀ ಅನ್ನೋ ಕಾಲ ಎಲ್ಲಾ ಇನ್ನು ಮುಂದೆ ಮಾಯವಾಗಬಹುದು. ಅದಕ್ಕೆ ಕಾರಣ ಕೇರಳ (kerala) ರಾಜ್ಯದಲ್ಲಿ ನಡೆದಿರುವ ಒಂದು ಘಟನೆ. ಬೆಳಗ್ಗಿನ ಉಪಹಾರಕ್ಕೆ ಹೋಟೆಲ್ ಗೆ ಬಂದಿದ್ದ ಪ್ರವಾಸಿಗನೋರ್ವನಿಗೆ ಕೇರಳ ಹೋಟೆಲ್ ವೊಂದರ (Kerala Hotel) ಮಾಲೀಕ ದೋಸೆ ಸಾಂಬಾರ್ ನೀಡಿದ್ದ. ಬಿಲ್ ನೀಡುವಾಗ ಸಾಂಬಾರ್ ಗೆ ಪ್ರತ್ಯೇಕವಾಗಿ 100 ರೂಪಾಯಿ (Charged 100 rs for Sambar) ಹಾಕಿದ್ದ. "ಸಾಂಬಾರ್ ಗೆ ಯಾಕೆ 100 ರೂಪಾಯಿ ಬಿಲ್ ಹಾಕಿದ್ದೀರಾ" ಎಂದು ಪ್ರವಾಸಿಗ ಕೇಳಿದ್ದೇ ತಪ್ಪಾಗಿ ಕಂಡಿದೆ. ಹೋಟೆಲ್ ನ ಮಾಲೀಕ, ಪ್ರವಾಸಿಗನನ್ನು ರೂಮ್ ನಲ್ಲಿ ಕೂಡಿ (Locked in Room) ಹಾಕಿ ಸತಾಯಿಸಿದ್ದಾನೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರವಾಸಿಗನನ್ನು ಹೋಟೆಲ್ ಕೋಣೆಯಿಂದ ಹೊರತಂದಿದ್ದಾರೆ.
ಕೇರಳದ ಇಡುಕ್ಕಿ (Idukki) ಜಿಲ್ಲೆಯ ನೆಡುಂಕಂಡಂನಲ್ಲಿ (Nedumkandam) ಹೋಟೆಲ್ ಮಾಲೀಕನ ನಾಚಿಕೆಗೇಡಿನ ಕೃತ್ಯ ಬೆಳಕಿಗೆ ಬಂದಿದೆ. ಇಲ್ಲಿನ ಕೊಂಬಮಕ್ಕು (Kombamukku ) ಎನ್ನುವ ಪ್ರದೇಶಕ್ಕೆ ಕೊಟ್ಟಾಯಂನಿಂದ (Kottayam ) ಆರು ಮಂದಿ ಪ್ರವಾಸಕ್ಕೆ ಬಂದಿದ್ದರು. ಹೋಟೆಲ್ ನಲ್ಲಿ ಕೋಣೆಯನ್ನೂ ಕಾಯ್ದಿರಿಸಿದ್ದ ಇವರಿಗೆ ಶನಿವಾರ ಬೆಳಗಿನ ಉಪಹಾರವನ್ನು ಎಂದಿನಂತೆ ನೀಡಲಾಗಿತ್ತು. ಬಳಿಕ ಸರ್ವರ್ ತಂದುಕೊಟ್ಟ ಬಿಲ್ ನಲ್ಲಿ ಸಾಂಬಾರ್ ಗೆ 100 ರೂಪಾಯಿ ಹಾಕಲಾಗಿತ್ತು. ಸಾಂಬಾರ್ ಗೆ ಹಾಕಿರುವ ದರವನ್ನು ಪ್ರಶ್ನೆ ಮಾಡಿದ ಒಬ್ಬ ವ್ಯಕ್ತಿಯನ್ನು ಹತ್ತಿರದಲ್ಲೇ ಇದ್ದ ಕೋಣೆಯಲ್ಲಿ ಹೋಟೆಲ್ ನ ಮಾಲೀಕ ಕೂಡಿ ಹಾಕಿದ್ದಾನೆ.
ಪ್ರತಿ ವ್ಯಕ್ತಿಗೆ ನೀಡಿದ ಸಾಂಬಾರ್ ಬೆಲೆಯನ್ನು 100 ರೂಪಾಯಿ ಎಂದು ಹಾಕಲಾಗಿತ್ತು. ವಿಪರೀತ ದರದ ಬಗ್ಗೆ ರೆಸ್ಟೋರೆಂಟ್ ನ ಮಾಲೀಕರೊಂದಿಗೆ ಚರ್ಚೆ ನಡೆದು ವಾಗ್ವಾದಕ್ಕೆ ಕಾರಣವಾಗಿದೆ. ಪ್ರವಾಸಿಗರೊಬ್ಬರು ವಿವಾದವನ್ನು ವಿಡಿಯೋ ಮಾಡಿದ್ದಾರೆ. ನಂತರ ಮಾಲೀಕರು ಅವರೆಲ್ಲರನ್ನೂ ಕೊಠಡಿಗೆ ಬೀಗ ಹಾಕಿದರು. ಮಾಹಿತಿ ಪಡೆದ ನೆಡುಂಕಂಡಂ ಪೊಲೀಸರು (Nedumkandam police) ಸ್ಥಳಕ್ಕೆ ಧಾವಿಸಿ, ವಿಷಯವನ್ನು ಇತ್ಯರ್ಥ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ (Hotel and Restaurant Association ) ಮತ್ತು ಹೋಂಸ್ಟೇ ರೆಸಾರ್ಟ್ ಅಸೋಸಿಯೇಶನ್‌ನ (Homestay Resort Association) ಪದಾಧಿಕಾರಿಗಳು ಉಪಸ್ಥಿತರಿದ್ದರು.
Horror Restaurant: ಇಲ್ಲಿ ದೆವ್ವಗಳೇ ಊಟ ಬಡಿಸುತ್ತವೆ, ಬೆಚ್ಚಿ ಬೀಳಿಸುತ್ತವೆ..
ಇತ್ತೀಚೆಗೆ ಮೈಸೂರಿನಲ್ಲೂ ಇಂಥ ಘಟನೆಯೊಂದು ನಡೆದಿತ್ತು. ಕೆಟ್ಟು ಹೋದ ಸಾಂಬಾರ್ ನೀಡಿದ ಹೋಟೆಲ್‌ಗೆ ಗ್ರಾಹಕ ಗ್ರಹಚಾರ ಬಿಡಿಸಿದ್ದಾರೆ. ಮೈಸೂರಿನ ಪ್ರತಿಷ್ಠಿತ ಮೈಸೂರು ಮೈಲಾರಿ ಹೋಟೆಲ್‌ನಲ್ಲಿ ದೋಸೆ ತೆಗೆದುಕೊಂಡ ಗ್ರಾಹಕನಿಗೆ ತಿಂಡಿಯ ಜೊತೆ ಸರ್ವ್ ಮಾಡಿದ ಸಾಂಬಾರ್ ಕೆಟ್ಟು ಹೋಗಿತ್ತು. ಇದರಿಂದ ಕೆರಳಿದ ಗ್ರಾಹಕ ಈ ಸಂಬಂಧ ಆಕ್ಷೇಪ ವ್ಯಕ್ತಪಡಿಸಿ ವಿಡಿಯೋವೊಂದನ್ನು ಮಾಡಿದ್ದು, ವಿಡಿಯೋದಲ್ಲಿ ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಪ್ರತಿಷ್ಠಿತ ಹೋಟೆಲ್‌ನಲ್ಲಿ ಸ್ವಚ್ಛತೆ ಚೆನ್ನಾಗಿರುತ್ತದೆ, ಆಹಾರ ಉತ್ತಮವಾಗಿರುತ್ತದೆ ಎಂದುಕೊಂಡು ಬರುತ್ತೇವೆ. ಆದರೆ, ಇಲ್ಲೇ ಹುಳಿ ಬಂದ ಸಾಂಬಾರ್ ನೀಡಿದ್ದಾರೆ. 150 ರೂ. ದೋಸೆ ತಿಂದು ಸಾವಿರ ರೂ. ಚಿಕಿತ್ಸೆಗೆ ಕಟ್ಟಬೇಕ' ಎಂದು ಗ್ರಾಹಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bengaluru: ಕೋವಿಡ್‌ನಿಂದ ಆರ್ಥಿಕ ಸಂಕಷ್ಟ: ಹೋಟೆಲ್‌ಗಳಿಗೆ ಶೇ.50 ತೆರಿಗೆ ವಿನಾಯ್ತಿ
ಇದಕ್ಕೆ ಪ್ರತಿಯಾಗಿ ಮ್ಯಾನೇಜರ್ ಸಾಂಬಾರ್ ಮೂಸಿ ನೋಡಿ, ಅದು ನಿಜವಾಗಿಯೂ ಕೆಟ್ಟಿದ್ದರಿಂದ ಮರು ಮಾತಾಡದೆ ಸುಮ್ಮನಾಗಿದ್ದಾರೆ. ಹಣದಲ್ಲಿ ಡಿಸ್ಕೌಂಟ್ ಕೊಡುತ್ತೇವೆಂದರೂ ಕೇಳದ ಗ್ರಾಹಕ, ಹೋಟೆಲ್‌ನ ಈ ಅಸಡ್ಡೆಗೆ ಸರಿಯಾದ ಪಾಠ ಕಲಿಸುವುದಾಗಿ ಹೇಳಿದ್ದಾರೆ.