
ಒಂದೇ ತಿಂಗಳಲ್ಲಿ ಎರೆಡರಡು ಭಾರಿ ಸ್ಫೋಟಿಸಿದ ದೇಶದ ಏಕೈಕ ಜೀವಂತ ಜ್ವಾಲಾಮುಖಿ
ಭಾರತದ ಏಕೈಕ ಜ್ವಾಲಾಮುಖಿ ಎನಿಸಿರುವ ಬ್ಯಾರೆನ್ ದ್ವೀಪದಲ್ಲಿರುವ ಜ್ವಾಲಾಮುಖಿ ಒಂದೇ ತಿಂಗಳಲ್ಲಿ ಎರಡೆರಡು ಬಾರಿ ಉಕ್ಕಿ ಕೆಂಡವುಗುಳಿದೆ. ಈ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದ ಏಕೈಕ ಜ್ವಾಲಾಮುಖಿ ಎಲ್ಲಿದೆ ಬ್ಯಾರೆನ್ ದ್ವೀಪ ಎಲ್ಲಿದೆ ಎಂಬ ಕುತೂಹಲ ನಿಮಗಿರಬಹುದು. ಆ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ..
ಎಲ್ಲಿದೆ ಈ ಜ್ವಾಲಾಮುಖಿ?
ಅಂದಹಾಗೆ ದೇಶದ ಏಕೈಕ ಸಕ್ರಿಯ ಜ್ವಾಲಾಮುಖಿ ಇರುವುದು ಅಂಡಮಾನ್ ನಿಕೋಬಾರ್ ಸಮೀಪ, ಪೋರ್ಟ್‌ಬ್ಲೇರ್‌ನಿಂದ ಸುಮಾರು 138 ಕಿಲೋ ಮೀಟರ್ ದೂರದಲ್ಲಿರುವ ಅಂಡಮಾನ್ ಸಮುದ್ರದಲ್ಲಿ ಈ ಬ್ಯಾರೆನ್ ದ್ವೀಪ ಇದ್ದು, ಇದು ದಕ್ಷಿಣ ಏಷ್ಯಾದ ಏಕೈಕ ಸಕ್ರಿಯ ಜ್ವಾಲಾಮುಖಿ ಎನಿಸಿದೆ. ಈ ಜ್ವಾಲಾಮುಖಿಯೂ ಸೆಪ್ಟೆಂಬರ್ 13 ಹಾಗೂ ಸೆಪ್ಟೆಂಬರ 20 ರಂದು ಎರಡು ಬಾರಿ ಉಕ್ಕೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದೇ ತಿಂಗಳಲ್ಲಿ ಎರಡು ಬಾರಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದವು. ಆದರೆ ಇದು ತೀವ್ರ ಸ್ವರೂಪದ್ದಾಗಿರಲಿಲ್ಲ. ಹೀಗಾಗಿ ಈ ಘಟನೆಯಿಂದ ಆ ಪ್ರದೇಶಗಳ ಸುತ್ತಮುತ್ತ ಯಾವುದೇ ಹಾನಿಯಾಗಿಲ್ಲ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಬ್ಯಾರೆನ್ ದ್ವೀಪವೂ 3 ಕಿಲೋ ಮೀಟರ್ ಚದರ ವಿಸ್ತೀರ್ಣದಲ್ಲಿದೆ. ಈ ದ್ವೀಪವೂ ಜ್ವಾಲಾಮುಖಿಯ ಶಂಕುಗಳು ಹಾಗೂ ಬೂದಿಯಿಂದ ಆವೃತವಾಗಿದೆ. ಈ ದೂರ ದೂರದಲ್ಲಿ ಬಹಳ ವಿರಳವಾಗಿ ಸಸ್ಯಗಳು ಕಾಣಲು ಸಿಗುತ್ತವೆ. ಸಮುದ್ರಮಟ್ಟದಿಂದ ಕೇವಲ 354 ಮೀಟರ್ ಎತ್ತರದಲ್ಲಿ ಈ ಬ್ಯಾರೆನ್ ದ್ವೀಪ ಇದ್ದು, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಇದು ಒಂದಾಗಿದೆ. ಅಪರೂಪದ ಭೌಗೋಳಿಕ ಲಕ್ಷಣಗಳ ಕಾರಣದಿಂದ ಈ ಬ್ಯಾರೆನ್ ದ್ವೀಪ ಮಹತ್ವ ಪಡೆದಿದೆ.
ಈ ಹಿಂದಿನ ಜ್ವಾಲಾಮುಖಿ
ಬ್ಯಾರೆನ್ ದ್ವೀಪದಲ್ಲಿ, ಇದಕ್ಕೂ ಮೊದಲು 1787 ರ ಸಮಯದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದ ಘಟನೆಗಳು ನಡೆದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಅದರ ನಂತರ 2017 ಮತ್ತು 2022 ರಲ್ಲಿಯೂ ಇಲ್ಲಿನ ಜ್ವಾಲಾಮುಖಿಯ ಚಟುವಟಿಕೆಗಳು ಗಮನಕ್ಕೆ ಬಂದಿದ್ದವು. ಇದಾದ ನಂತರ ಈ ವರ್ಷದ ಜುಲೈನಲ್ಲಿಯೂ ಒಮ್ಮೆ ಜ್ವಾಲಾಮುಖಿ ಉಕ್ಕಿದ ಘಟನೆ ನಡೆದಿತ್ತು. ಇಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಸಣ್ಣ ಘಟನೆಗಳಾಗಿದ್ದು, ಇದರಿಂದ ಮಾನವ ವಸಾಹತುಗಳಿಗೆ ಯಾವುದೇ ತಕ್ಷಣದ ಅಪಾಯ ಆಗಿಲ್ಲ, ಭೂ ವಿಜ್ಞಾನ ಅಧಿಕಾರಿಗಳು ಈ ದ್ವೀಪವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಇದನ್ನೂ ಓದಿ: ಯಾವುದೇ ಬೆಲ್ಟ್ ಇಲ್ಲದೇ 28 ಶ್ವಾನಗಳ ಜೊತೆ ವಾಕ್ ಬರುವ ಬೆಂಗಳೂರು ಮಹಿಳೆ: ವಿಡಿಯೋ ಭಾರಿ ವೈರಲ್
ಇದನ್ನೂ ಓದಿ: ಹಾವನ್ನು ಕೊರಳಿಗೆ ಸುತ್ತಿಕೊಂಡು ಸ್ಟಂಟ್ ಮಾಡಲು ಹೋಗಿ ಜೀವ ಬಿಟ್ಟ ಯುವಕ
ಇದನ್ನೂ ಓದಿ: ರೈಲ್ವೆಯ ಪ್ರತಿಷ್ಠಿತ ಎಸಿ ಕೋಚಲ್ಲಿ ಬೆಡ್‌ಶೀಟ್ ಕದ್ದು ಬ್ಯಾಗ್‌ಗೆ ತುಂಬಿಸಿ ಸಿಕ್ಕಿಬಿದ್ದ ಕುಟುಂಬ : ವೀಡಿಯೋ
ಇದನ್ನೂ ಓದಿ: ಮಿಲಿಯನ್ ವೀವ್ಸ್ ಗಳಿಸಿದ ರೀಲ್ಸ್ ಡಿಲೀಟ್‌ಗೆ ಸೂಚಿಸಿದ ಪೊಲೀಸರು: ಸಾಯುವುದಾಗಿ ಬೆದರಿಸಿದ ಯುವತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ