
ಪಾಟ್ನಾ(ಜು.14): ಕೊರೋನಾ ವೈರಸ್ ವಿರುದ್ಧ ಹೋರಾಡಲು ತುರ್ತು ಲಸಿಕೆ ಅಥವಾ ಔಷಧದ ಅಗತ್ಯವಿದೆ. ಇದುವರೆಗೂ ಯಾವ ಕೊರೋನಾ ಔಷಧಿ ಮಾರುಕಟ್ಟೆಗೆ ಬಂದಿಲ್ಲ. ಈ ಆತಂಕ ನಡುವೆ ಭಾರತದ ಮೊಟ್ಟ ಮೊದಲ ಕೊರೋನಾ ಔಷಧ ಕೋವ್ಯಾಕ್ಸಿನ್ ಆರಂಭಿಕ ಹಂತದ ಪ್ರಯೋಗ ಯಶಸ್ವಿಗೊಳಿಸಿ ಇದೀಗ ಮಾನವನ ಮೇಲೆ ಪ್ರಯೋಗ ಆರಂಭಿಸಿದೆ.
ದೇಶದಲ್ಲಿ 9 ಲಕ್ಷ ದಾಟಿದ ಸೋಂಕಿತರು: ಕೇವಲ 5 ದಿನದಲ್ಲಿ 1.13 ಲಕ್ಷ ಹೊಸ ಕೇಸು!...
ಪಾಟ್ನಾ ಏಮ್ಸ್ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತರಾಗಿ ಬಂದ 10 ಮಂದಿಗೆ ಕೋವ್ಯಾಕ್ಸಿನ್ ಔಷದ ಪ್ರಯೋಗ ಮಾಡಲಾಗುತ್ತಿದೆ. ಈಗಾಗಲೇ ಮೊದಲ ಡೋಸೇಜ್ ನೀಡಲಾಗಿದೆ. ಔಷಧ ನೀಡಿರುವ ಸೋಂಕಿತರಲ್ಲಿ ಚೇತರಿಕೆ ಕಂಡು ಬರುತ್ತಿದೆ. ಇನ್ನು 14 ದಿನಗಳ ಬಳಿಕ 2ನೇ ಹಂತದ ಡೋಸೇಜ್ ನೀಡಲಾಗುತ್ತದೆ.
ಕೊರೋನಾ ಮಾತ್ರೆ ಈಗ ಕೇವಲ 75 ರೂ.!.
ಕೋವ್ಯಾಕ್ಸಿನ್ ಔಷಧವನ್ನು 22 ರಿಂದ 50 ವರ್ಷ ವಯಸ್ಸಿನೊಳಗಿನ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತಿದೆ. ಇಷ್ಟೇ ಅಲ್ಲ ಪ್ರಯೋಗಕ್ಕೆ ಮುಂದೆ ಬಂದಿರುವ 10 ಮಂದಿ ಮೇಲೆ ತೀವ್ರ ನಿಗಾ ಇರಿಸಲಾಗುವುದು ಎಂದು ಪಾಟ್ನ ಏಮ್ಸ್ ಸುಪರಿಡೆಂಟ್ ಸಿಎಂ ಸಿಂಗ್ ಹೇಳಿದ್ದಾರೆ.
ಕೋವ್ಯಾಕ್ಸಿನ್ ಔಷಧವನ್ನು ಭಾರತ್ ಬಯೋಟೆಕ್ ಸಂಶೋಧನೆ ನಡೆಸಿದೆ. ಪ್ರಯೋಗದ ಯಶಸ್ವಿಯಾದ ಬಳಿಕ ಹೈದರಾಬಾದ್‌ನಲ್ಲಿರುವ ಫಾರ್ಮಸಿಯಲ್ಲಿ ಸುಮಾರು 200 ಮಿಲಿಯನ್ ಔಷಧ ತಯಾರಿಸಲಾಗುವುದು ಎಂದು ಭಾರತ್ ಬಯೋಟೆಕ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ