1966ರಲ್ಲಿ ಪತನವಾದ ಏರಿಂಡಿಯಾದಲ್ಲಿದ್ದ 2 ಭಾರತೀಯ ಪತ್ರಿಕೆ ಪತ್ತೆ| ಭಾರತಕ್ಕೆ ಪ್ರಥಮ ಮಹಿಳಾ ಪ್ರಧಾನ ಮಂತ್ರಿ’ ಎಂಬ ತಲೆಬರಹ| ಇಂದಿರಾಗಾಂದಿ ಅವರು 1966ರ ಲೋಕಸಭೆ ಚುನಾವಣೆ ಜಯಿಸಿದ ಕುರಿತಾಗಿ ವರದಿ
ಲಂಡನ್(ಜು.14): ಇಂದಿರಾಗಾಂದಿ ಅವರು 1966ರ ಲೋಕಸಭೆ ಚುನಾವಣೆ ಜಯಿಸಿದ ಕುರಿತಾಗಿ ‘ಭಾರತಕ್ಕೆ ಪ್ರಥಮ ಮಹಿಳಾ ಪ್ರಧಾನ ಮಂತ್ರಿ’ ಎಂಬ ತಲೆಬರಹ ಹೊಂದಿದ್ದ ಭಾರತದ ದಿನಪತ್ರಿಕೆ ಪ್ರತಿಗಳು ಪಶ್ಚಿಮ ಯುರೋಪ್‌ನಲ್ಲಿರುವ ಎತ್ತರದ ಮಾಂಟ್ ಬ್ಲಾಂಕ್ ಎಂಬ ಮಂಜುಗಡ್ಡೆಯ ಪರ್ವತದಲ್ಲಿ ಪತ್ತೆಯಾಗಿವೆ.
1966ರ ಜನವರಿ 24ರಂದು ಪತನಗೊಂಡಿದ್ದ ಭಾರತದ ಏರ್ ಇಂಡಿಯಾ ವಿಮಾನದಲ್ಲಿದ್ದ ಡಜನ್‌ಗಟ್ಟಲೇ ಪತ್ರಿಕೆಗಳು ದಟ್ಟಮಂಜಿನ ಪರ್ವತದಲ್ಲಿ ಹುದುಗಿದ್ದವು. ಈ ಪೈಕಿ ನ್ಯಾಷನಲ್ ಹೆರಾಲ್ಡ್ ಹಾಗೂ ಎಕಾನಮಿಕ್ ಟೈಮ್ಸ್ ಪತ್ರಿಕೆಗಳು ಇದೀಗ ಇದೇ ಪರ್ವತದಲ್ಲಿ ರೆಸಾರ್ಟ್‌ವೊಂದರ ಮಾಲಿಕ ಟಿಮೋತ್ ಮೊಟ್ಟಿನ್ ಅವರ ಕಣ್ಣಿಗೆ ಬಿದ್ದಿವೆ.
undefined
ಮೋದಿಗೆ ಶೀಘ್ರ ‘ಏರ್‌ಫೋರ್ಸ್ 1’ ರೀತಿ ವಿಮಾನ!
ದಿನಪತ್ರಿಕೆಗಳು ಉತ್ತಮ ಸ್ಥಿತಿಯಲ್ಲಿದ್ದು, ಈಗಲೂ ಓದಲು ಯೋಗ್ಯವಾಗಿವೆ ಎಂದು ಮೊಟ್ಟಿನ್ ಅವರು ಸ್ಥಳೀಯ ಫ್ರೆಂಚ್ ಪತ್ರಿಕೆಗೆ ತಿಳಿಸಿದ್ದಾರೆ. 54 ವರ್ಷದ ಹಿಂದೆ ವಿಮಾನದ ನಿಯಂತ್ರಣದ ಸಂವಹನದ ಕೊರತೆಯಿಂದಾಗಿ ಏರ್ ಇಂಡಿಯಾದ ಬೋಯಿಂಗ್ 707 ವಿಮಾನವು ಪತನಗೊಂಡಿತ್ತು. ಈ ಘಟನೆಯಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ 177 ಮಂದಿ ಮಡಿದಿದ್ದರು.