ಪ್ರಖ್ಯಾತ ಬನ್ನಿ ಎಮ್ಮೆ ತಳಿಯ ಮೊದಲ ಪ್ರನಾಳ ಕರು ಜನನ!

By Suvarna News  |  First Published Oct 24, 2021, 12:05 PM IST

*ಪ್ರಖ್ಯಾತ ಬನ್ನಿ ಎಮ್ಮೆ ತಳಿಯ ಮೊದಲ ಪ್ರನಾಳ ಕರು ಜನನ
*‘ಬನ್ನಿ’ ಎಮ್ಮೆ ತಳಿ ಹೆಚ್ಚಿಸಲು ಐವಿಎಫ್‌ ತಂತ್ರಜ್ಞಾನ
*ಟ್ವೀಟ್‌ ಮಾಡಿ ಹರ್ಷ್‌ ವ್ಯಕ್ತಪಡಿಸಿದ ಕೇಂದ್ರ ಪಶುಸಂಗೋಪನಾ ಸಚಿವಾಲಯ  
 


ಅಹ್ಮದಾಬಾದ್‌(ಅ. 24) : ಗುಜರಾತ್‌ನ (Gujarat) ಕಛ್‌ ಪ್ರದೇಶದಲ್ಲಿ ‘ಬನ್ನಿ’(Banni) ತಳಿ ಎಮ್ಮೆಯ ಮೊದಲ ಪ್ರನಾಳ ಕರು ಜನಿಸಿದೆ. ಗಿರ್‌ ಸೋಮನಾಥ್‌ (Somanath) ಜಿಲ್ಲೆಯ ಧನೇಜಾ ಎಂಬ ಗ್ರಾಮದ ವಿನಯ್‌ ವಾಲಾ ಎಂಬ ರೈತನ ಮನೆಯಲ್ಲಿ ಈ ಪ್ರನಾಳ ಕರು (Test Tube) ಜನಿಸಿದೆ. ಬನ್ನಿ ತಳಿಯನ್ನು ಹೆಚ್ಚಿಸಲು ಮತ್ತು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಈ ಪ್ರಕ್ರಿಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬನ್ನಿ ತಳಿ ಶುಷ್ಕ ಪ್ರದೇಶದಲ್ಲೂ ಹೆಚ್ಚು ಹಾಲು ಕೊಡುವ ಸಾಮರ್ಥ್ಯವನ್ನು ಹೊಂದಿರುವ ಎಮ್ಮೆಯಾಗಿದೆ.

ಹೃದಯಾಘಾತದಿಂದ ರಫಿಕ್ ನಿಧನ,  ನೆಚ್ಚಿನ ಒಡೆಯನ ಕಳೆದುಕೊಂಡ 'ಭೀಮ'

Tap to resize

Latest Videos

undefined

ದೇಶದಲ್ಲಿ ಬನ್ನಿ ಎಮ್ಮೆ ತಳಿಯ ಮೊದಲ ಪ್ರನಾಳ ಕರು ಜನಿಸಿದೆ. ಇನ್ನೂ ಐದು ಪ್ರನಾಳ ಕರುಗಳು ಜನಿಸಬೇಕಿವೆ. ಪ್ರನಾಳ ಕರು ವ್ಯವಸ್ಥೆಯನ್ನು ರೈತನ ಮನೆ ಬಾಗಿಲವರೆಗೆ ತೆಗೆದುಕೊಂಡು ಹೋಗಿದ್ದಕ್ಕೆ ಸಂತೋಷವಾಗುತ್ತದೆ ಎಂದು ಕೇಂದ್ರ ಪಶುಸಂಗೋಪನಾ ಸಚಿವಾಲಯ ಟ್ವೀಟ್‌ ಮಾಡಿದೆ. 

 

Happy to share the good news of the birth of first calf of Buffalo breed namely - in the country . This is the first born out of 6 Banni IVF pregnancies established at the door steps of farmer namely Mr Vinay.L.Vala of Sushila Agro farms pic.twitter.com/vROwzIuLWq

— Ministry of Fisheries, Animal Husbandry & Dairying (@Min_FAHD)

 

ದೇಶಿ ಎಮ್ಮೆಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಿರುವುದರಿಂದ ನಾನು ಬನ್ನಿ ಮತ್ತು ಮುರ್ರಾ ತಳಿಗಳನ್ನು ಸಾಕಲು ಬಯಸಿದೆ. ನನ್ನಲ್ಲಿರುವ 8 ಬನ್ನಿ ತಳಿಯ ಎಮ್ಮೆಗಳು ಉತ್ತಮ ಹಾಲು ಕೊಡುತ್ತಿವೆ. ಪ್ರತಿಯೊಂದು ಎಮ್ಮೆಯೂ ಒಂದು ಸಲಕ್ಕೆ 9 ರಿಂದ 12 ಲೀಟರ್‌ ಹಾಲು ಕೊಡುತ್ತವೆ ಎಂದು ರೈತ ವಿನಯ್‌ ವಾಲಾ (Vinay L Vala) ತಿಳಿಸಿದ್ದಾರೆ. ಐವಿಎಫ್‌ ತಂತ್ರಜ್ಞಾನ (IVF Technology) ಉತ್ತಮ ಹಾಲು ಕೊಡುವ ತಳಿಗಳ ಹೆಚ್ಚಳಕ್ಕೆ ಸಹಾಯಕವಾಗಲಿದೆ.

ಶತಮಾನದ ಪದ್ಧತಿಗೆ ಬೀಳುತ್ತಾ ಬ್ರೇಕ್?: ಮುಗ್ಧ ಪ್ರಾಣಿಗಳ ರೋಧನಕ್ಕೆ ಕೊನೆ!

2017ರಲ್ಲಿ ಐವಿಎಫ್‌ ಮೂಲಕ ಜನಿಸಿದ ಮೊದಲ ಹಸುವಿನ ಕರುವಿಗೆ ಕೃಷ್ಣಾ ಎಂದು ಹೆಸರಿಡಲಾಗಿದೆ. ಗುಜರಾತ್‌ನಲ್ಲಿ ಹಸುಗಳ ಪ್ರನಾಳ ಕರುಗಳನ್ನೂ ಸೃಷ್ಟಿಸಲಾಗುತ್ತಿದ್ದು, ಒಂದು ಹಸುವಿನಿಂದ 50 ಪ್ರನಾಳ ಕರುಗಳನ್ನು ಸೃಷ್ಟಿಸಬಹುದಾಗಿದೆ. ಅದೇ ಹಸು ಸಾಮಾನ್ಯವಾಗಿ ಆದ್ರೆ 8 ರಿಂದ 10 ಕರು ಹಾಕಲಷ್ಟೇ ಸಾಧ್ಯ ಎಂದು ಪ್ರನಾಳ ಕರುಗಳ ಜವಾಬ್ದಾರಿ ವಹಿಸಿಕೊಂಡಿರುವ ಜೆಕೆ ಟ್ರಸ್ಟ್‌ನ (J K trust) ಶ್ಯಾಮ್‌ ಜವಾರ್‌ ತಿಳಿಸಿದದ್ದಾರೆ. ಭಾರತದಲ್ಲಿ 11 ಕೋಟಿಗಿಂತಲೂ ಅಧಿಕ ಎಮ್ಮೆಗಳನ್ನು ಹೊಂದಿದ್ದು, ಪ್ರಪಂಚದ ಶೇಕಡಾ 56ರಷ್ಟುಎಮ್ಮೆಗಳು ಭಾರತದಲ್ಲೇ ಇವೆ.

ಏನಿದು ಐವಿಎಫ್‌ ತಂತ್ರಜ್ಞಾನ?

ವೈಜ್ಞಾನಿಕವಾಗಿ ಮಗು ಪಡೆಯುವ ವಿಧಾನ ಇದಾಗಿದ್ದು, ಮಹಿಳೆಯಿಂದ ಅಂಡಾಣುವನ್ನು ಸಂಗ್ರಹಿಸಿ, ಅದನ್ನು ಪ್ರಯೋಗಾಲಯದಲ್ಲಿ ಪುರುಷರ ವೀರ್ಯದೊಂದಿಗೆ ಸಂಯೋಜಿಸಲಾಗುತ್ತದೆ. ಫಲವತ್ತತೆಯಾದರೆ ಅದನ್ನು ಬಳಿಕ ಇನ್ನೊಂದು ಮಹಿಳೆಯ ಅಂಡಾಶಯದಲ್ಲಿ ಇರಿಸಲಾಗುತ್ತದೆ. ಈ ವಿಧಾನದ ಸಂತಾನೋತ್ಪತಿಯನ್ನು ಐವಿಎಫ್‌ ಎನ್ನಲಾಗುತ್ತದೆ.

ಬೆಂಗಳೂರು ವೈದ್ಯರ ರೋಚಕ ಸಾಧನೆ : ಅಣ್ಣನ ಉಳಿಸಲು ಐವಿಎಫ್‌ನಲ್ಲಿ ತಂಗಿಯ ಸೃಷ್ಟಿ!

click me!