
ಚಂಡೀಗಢ: ಕೆನಡಾದಲ್ಲಿ ಈಗ ಪಂಜಾಬ್ ಮೂಲದ ಎಎಪಿ ನಾಯಕನ ಪುತ್ರಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, ಈ ಸಾವಿನ ಬಗ್ಗೆ ಹಲವು ಅನುಮಾನ ಮೂಡಿದೆ. 21 ವರ್ಷದ ವಂನ್ಶಿಕಾ ಸೈನಿ ನಿಗೂಢವಾಗಿ ಸಾವನ್ನಪ್ಪಿದ ಯುವತಿ. ಈಕೆ ಪಂಜಾಬ್ ಎಎಪಿ ನಾಯಕ ದವೀಂದರ್ ಸೈನಿಯವರ ಪುತ್ರಿಯಾಗಿದ್ದು, ಏಪ್ರಿಲ್ 22ರಿಂದಲೂ ಈಕೆ ನಾಪತ್ತೆಯಾಗಿದ್ದಳು. ಆದರೆ ಈಗ ಆಕೆಯ ಶವ ಕೆನಡಾದ ಒಟ್ಟವಾದಲ್ಲಿ ಪತ್ತೆಯಾಗಿದೆ. ಕೆನಡಾದ ರಾಜಧಾನಿ ಒಟ್ಟವಾದ ಕಡಲತೀರದ ಬಳಿ ವಂನ್ಶಿಕಾ ಸೈನಿ ಶವ ಪತ್ತೆಯಾಗಿದೆ. ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಂನ್ಶಿಕಾ ಸೈನಿ ಏಪ್ರಿಲ್ 22ರಿಂದಲೂ ನಾಪತ್ತೆಯಾಗಿದ್ದಳು. ಅಂದು ಮನೆ ಬಿಟ್ಟು ಹೋದ ಹುಡುಗಿ ಮತ್ತೆ ವಾಪಸ್ ಬಂದಿರಲಿಲ್ಲ.
ವಂನ್ಶಿಕಾ ಸೈನಿ ತಂದೆ ದವೀಂದರ್ ಸೈನಿ ಎಎಪಿ ಶಾಸಕ ಕುಲ್ಜಿತ್ ಸಿಂಗ್ ರಾಂಧವ್ ಆಪ್ತರಾಗಿದ್ದಾರೆ. ಅಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವಂನ್ಶಿಕಾ ಸೈನಿ ತನ್ನ ಪಿಯುಸಿ ವ್ಯಾಸಂಗದ ನಂತರ ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗಿದ್ದಳು. ಏಪ್ರಿಲ್ 18ರಂದು ತನ್ನ ಅಂತಿಮ ಪರೀಕ್ಷೆಗಳನ್ನು ಮುಗಿಸಿದ ಸೈನಿ ಓದಿನ ಜೊತೆಗೆ ಕಾಲ್ ಸೆಂಟರೊಂದರಲ್ಲಿ ಪಾರ್ಟ್‌ಟೈಮ್ ಕೆಲಸವನ್ನೂ ಮಾಡುತ್ತಿದ್ದಳು. ಆಕೆಯ ತಂದೆ ದವೀಂದರ್ ಸೈನಿ ಚಂಡೀಗಢದ ಉಪನಗರವಾದ ಡೇರಾ ಬಸ್ಸಿಯಲ್ಲಿರುವ ಸೈನಿ ಮೊಹಲ್ಲಾದಲ್ಲಿ ವಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ: 40 ಲಕ್ಷ ಸಾಲ ಮಾಡಿ ಅಮೆರಿಕಾಗೆ ಹೋದ, ಕೆಲಸ ಸಿಗದೆ ವಾಪಸ್ಸು, ಈಗ ಸಾಲದ ಮೇಲೆ ಸಾಲ!
ಏಪ್ರಿಲ್ 22 ರಿಂದ ಆಕೆಯ ಕುಟುಂಬದವರು ಹಾಗೂ ಪೋಷಕರಿಗೂ ಆಕೆ ಫೋನ್‌ನಲ್ಲಿ ಮಾತನಾಡುವುದಕ್ಕೂ ಸಿಕ್ಕಿಲ್ಲ, ಆಕೆಯ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಏಪ್ರಿಲ್ 25ರಂದು ಆಕೆ IELTS ಪರೀಕ್ಷೆ ಬರೆಯಬೇಕಿತ್ತು. ಆದರೆ ಆಕೆ ಶವವಾಗಿ ಪತ್ತೆಯಾಗಿದ್ದರಿಂದ ಕಂಗಾಲಾಗಿರುವ ಕುಟುಂಬ ಆಕೆಯ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕೆನಡಾದಲ್ಲಿರುವ ಭಾರತೀಯ ಹೈಕಮೀಷನರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ವಿಚಾರ ತಿಳಿಸಿದ್ದು, ಭಾರತದ ವಿದ್ಯಾರ್ಥಿನಿ ವಂನ್ಶಿಕಾ ಸೈನಿ ಸಾವಿನ ಸುದ್ದಿ ತಿಳಿದು ನಮಗೆ ತುಂಬಾ ದುಃಖವಾಗಿದೆ ಈ ವಿಚಾರದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಮತ್ತು ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡಲು ಸ್ಥಳೀಯ ಆಡಳಿತ ಹಾಗೂ ಸಮುದಾಯದ ಜೊತೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶದ ಉದ್ಯೋಗದ ಆಸೆಗೆ ಬೀಳ್ಬೇಡಿ... ಬ್ರೇನ್ವಾಷ್ ಮಾಡಿ ಕರೆಸಿಕೊಳ್ತಾರೆ... ಕೆನಡಾದಿಂದ ದೆಹಲಿ ಯುವಕನ ಸಂದೇಶ
ಡಿಜೆ ಹಾಡಿಗೆ ನೆನಪಾದ ಹಳೇ ಗೆಳತಿ: ಮದುವೆ ಮಂಟಪದಿಂದ ಹೊರ ನಡೆದ ವರ
ಹಾಡುಗಳನ್ನು ಕೇಳಿದಾಗ ಹಳೆ ನೆನಪುಗಳು ಕಾಡುವುದು ಸಾಮಾನ್ಯ. ಅದೇ ರೀತಿ ಇಲ್ಲೊಂದು ಕಡೆ ಮದುವೆ ಸಮಯದಲ್ಲಿ ಡಿಜೆ ಪ್ಲೇ ಮಾಡಿದ ಚನಾ ಮೇರಿಯಾ ಹಾಡು ಕೇಳಿ ಭಾವುಕನಾದ ವರನೋರ್ವ ಮದುವೆ ಮಂಟಪದಿಂದಲೇ ಹೊರ ನಡೆದಿದ್ದಾನೆ. ಇಂತಹ ಅಚ್ಚರಿಯ ಘಟನೆ ದೆಹಲಿಯಲ್ಲಿ ನಡೆದಿದ್ದಾಗಿ ವರದಿಯಾಗಿದೆ. ಬಾಲಿವುಡ್ ನಟ ರಣ್‌ಬೀರ್ ಕಪೂರ್ ನಿರ್ಮಾಣದ 'ಚನಾ ಮೇರಿಯಾ' ಹಾಡು, ವರನಿಗೆ ತನ್ನ ಹಳೆಯ ಪ್ರೇಮ ಸಂಬಂಧದ ಬಗ್ಗೆ ನೆನಪು ಮಾಡಿದೆ. ಇದರಿಂದ ದುಃಖಿತನಾದ ವರ ಮದುವೆ ಮಂಟಪದಿಂದಲೇ ಸೀದಾ ಹೊರ ನಡೆದಿದ್ದಾನೆ ಎಂದು ವರದಿಯಾಗಿದೆ. ಇದಾದ ನಂತರ ಮದುವೆ ನಿಂತು ಹೋಗಿದ್ದು, ವರನ ಸಂಬಂಧಿಕರು ಕೂಡ ಹೊರಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗುತ್ತಿದ್ದು, ಅನೇಕರು ಈ ಘಟನೆಗೆ ವಿವಿಧ ರೀತಿಯ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ