
ನ್ಯೂಯಾರ್ಕ್(ಏ.29)ಭಾರತದಲ್ಲಿ ಕಡುಬಡತನ ನಿವಾರಿಸುವ ಯೋಜನೆಗೆ ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಕೆಲ ದಶಕಗಳ ಹಿಂದೆ ಭಾರತವನ್ನು ಕಡು ಬಡತನದ ರಾಷ್ಟ್ರ, ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ದೇಶ, ಹಾವಾಡಿಗರ ದೇಶ ಎಂದೇ ಪಾಶ್ಚಿಮಾತ್ಯ ದೇಶಗಳು ಗುರುತಿಸಿತ್ತು. ಆದರೆ ಈಗ ಭಾರತ ಬದಲಾಗಿದೆ. ವಿಶ್ವದಲ್ಲೇ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿದೆ. ಇದರ ಜೊತೆಗೆ ಭಾರತ ಸರ್ಕಾರದ ಹಲವು ಯೋಜನೆಗಳು ದೇಶದ ಜನರನ್ನು ಕಡು ಬಡತನದಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದೆ. ಇದೀಗ ವಿಶ್ವಬ್ಯಾಂಕ್ ಭಾರತದ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಕಳೆದ 10 ವರ್ಷದಲ್ಲಿ ಭಾರತ ಬರೋಬ್ಬರಿ 17.1 ಕೋಟಿ ಜನರನ್ನು ಕಡು ಬಡತನದಿಂದ ಹೊರತಂದಿದೆ ಎಂದಿದೆ.
2011-12 ಮತ್ತು 2022-23ರ ನಡುವಿನ ಅವಧಿಯಲ್ಲಿ ಭಾರತದ 17.1 ಕೋಟಿ ಜನ ತೀವ್ರ ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. ‘ಕಳೆದ ದಶಕದಲ್ಲಿ, ಭಾರತದಲ್ಲಿ ಬಡತನ ಗಣನೀಯವಾಗಿ ಕಡಿಮೆಯಾಗಿದೆ. 2011-12ರಲ್ಲಿ ಶೇ.16.2ರಷ್ಟಿದ್ದ ತೀವ್ರ ಬಡತನ (ದಿನಕ್ಕೆ 184 ರೂಪಾಯಿಗಿಂತ ಕಡಿಮೆ ಆದಾಯದಲ್ಲಿ ಬದುಕುವವರು) 2022-23ರಲ್ಲಿ ಶೇ.2.3ಕ್ಕೆ ಇಳಿದಿದ್ದು, 17.1 ಕೋಟಿ ಜನ ತೀವ್ರ ಬಡತನದಿಂದ ಹೊರಬಂದಿದ್ದಾರೆ’ ಎಂದು ವಿಶ್ವ ಬ್ಯಾಂಕ್ ಭಾರತದ ಕುರಿತಾದ ತನ್ನ ‘ಬಡತನ ಮತ್ತು ಇಕ್ವಿಟಿ ಬ್ರೀಫ್’ ವರದಿಯಲ್ಲಿ ತಿಳಿಸಿದೆ.
ಪುಕ್ಕಟ್ಟೆ ಕೊಡುಗೆಗಳಿಂದ ಬಡತನ ನಿವಾರಣೆ ಅಸಾಧ್ಯ : ಇನ್ಫಿ ಎನ್.ಆರ್.ನಾರಾಯಣ ಮೂರ್ತಿ
ವರದಿಯಲ್ಲೇನಿದೆ?
-ತೀವ್ರ ಬಡತನವು ಗ್ರಾಮೀಣ ಪ್ರದೇಶದಲ್ಲಿ ಶೇ.18.4ರಿಂದ ಶೇ.2.8ಕ್ಕೆ ಮತ್ತು ನಗರ ಪ್ರದೇಶದಲ್ಲಿ ಶೇ.10.7ರಿಂದ ಶೇ.1.1ಕ್ಕೆ ಇಳಿದಿದೆ. ಇದರಿಂದಾಗಿ ಗ್ರಾಮೀಣ-ನಗರ ಅಂತರವು ಶೇ.7.7ರಿಂದ ಶೇ.1.7ಕ್ಕೆ ಇಳಿದಿದೆ. ಶೇ.16ರಷ್ಟು ವಾರ್ಷಿಕ ಕುಸಿತವಾಗಿದೆ.
-2011-12ರಲ್ಲಿ ದೇಶದ ಅತಿ ಬಡವರಲ್ಲಿ ಶೇ.65ರಷ್ಟು ಮಂದಿ ಭಾರತದ 5 ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದವರಾಗಿದ್ದರು. 2022-23ರ ವೇಳೆಗೆ ಒಟ್ಟಾರೆ ತೀವ್ರ ಬಡತನ ಇಳಿಕೆಗೆ ಈ ರಾಜ್ಯಗಳು ಮೂರನೇ ಎರಡರಷ್ಟು ಕೊಡುಗೆ ನೀಡಿವೆ.
-2021-22ರಿಂದ ಉದ್ಯೋಗ ಬೆಳವಣಿಗೆಯು ದುಡಿಯುವ ವಯಸ್ಸಿನ ಜನಸಂಖ್ಯೆಗಿಂತ ಹೆಚ್ಚಾಗಿದೆ. ವಿಶೇಷವಾಗಿ ಮಹಿಳೆಯರಲ್ಲಿ ಉದ್ಯೋಗ ದರಗಳು ಹೆಚ್ಚುತ್ತಿವೆ. ನಗರ ನಿರುದ್ಯೋಗವು 2024-25ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.6.6 ಕ್ಕೆ ಇಳಿದಿದೆ. ಇದು 2017-18ರ ನಂತರ ಅತ್ಯಂತ ಕಡಿಮೆ.
-2018-19ರ ನಂತರ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಪುರುಷ ಕಾರ್ಮಿಕರ ಸ್ಥಳಾಂತರವಾಗಿದೆ. ಕೃಷಿಯಲ್ಲಿ ಗ್ರಾಮೀಣ ಮಹಿಳಾ ಕಾರ್ಮಿಕರ ಸಂಖ್ಯೆ ಹೆಚ್ಚಿದೆ.
-ಯುವ ನಿರುದ್ಯೋಗ ಶೇ.13.3ರಷ್ಟಿದ್ದು, ಉನ್ನತ ಶಿಕ್ಷಣ ಪದವೀಧರರಲ್ಲಿ ಶೇ.29ಕ್ಕೆ ಏರಿದೆ.
-ಸ್ವ-ಉದ್ಯೋಗ ಹೆಚ್ಚುತ್ತಿದ್ದು, ಗ್ರಾಮೀಣ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಮಹಿಳಾ ಉದ್ಯೋಗ ದರವು ಶೇ.31ರಷ್ಟಿದ್ದರೂ, ಲಿಂಗ ಅಸಮಾನತೆಗಳು ಉಳಿದಿವೆ.
ಸಾವಿಗೀಡಾದ ಅಮ್ಮ, ಮನೆಬಿಟ್ಟು ಹೋದ ಅಪ್ಪ: ಮೊಮ್ಮಗನ ಸಾಕಲಾಗದೇ 200 ರೂಗೆ ಮಾರಿದ ಅಜ್ಜಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ