ಈ ರೈಲು ವರ್ಷದಲ್ಲಿ 15 ದಿನ ಮಾತ್ರ ಸಂಚರಿಸುತ್ತದೆ. ಇನ್ನುಳಿದ ದಿನ ಲಭ್ಯವಿಲ್ಲ. ಈ ಬಾರಿ ಮುಂಬೈನಿಂದ ಬೆಂಗಳೂರು ಮೂಲಕ ದೆಹಲಿ ಸೇರಲಿದೆ. ಆದರೆ ವರ್ಷದಲ್ಲಿ 15 ದಿನವಾದರೂ ಪ್ರಯಾಣ ಮಾಡುವವರ ಭವಿಷ್ಯ ರೂಪಿಸುತ್ತದೆ ಈ ರೈಲು.
ಮುಂಬೈ(ಅ.22) ಭಾರತೀಯ ರೈಲ್ವೇಯಲ್ಲಿ ಕೆಲ ವಿಶೇಷ ರೈಲುಗಳಿವೆ. ಈ ರೈಲುಗಳು ಅಚ್ಚರಿ ಮಾತ್ರವಲ್ಲ, ಹೊಸ ಪ್ರಪಂಚಕ್ಕೆ ಕರೆದೊಯ್ಯಲಿದೆ. ಈ ಪೈಕಿ ಒಂದು ರೈಲು ವರ್ಷದಲ್ಲಿ ಕೇವಲ 15 ದಿನ ಮಾತ್ರ ಸಂಚರಿಸುತ್ತದೆ. ಇನ್ನುಳಿದ ದಿನ ಲಭ್ಯವಿಲ್ಲ. ಆದರೆ ಈ ರೈಲಿನಲ್ಲಿ ಪ್ರಯಾಣ ಮಾಡುವವರ ಭವಿಷ್ಯ ಕೂಡ ರೂಪುಗೊಳ್ಳಲಿದೆ. ಹೀಗಾಗಿ ಭಾರತದ ಈ ರೈಲಿನಲ್ಲಿ ಪ್ರಯಾಣಿಸಲು 23ಕ್ಕೂ ಹೆಚ್ಚು ದೇಶಗಳಿಂದ ಪ್ರಯಾಣಿಕರು ಆಗಮಿಸುತ್ತಾರೆ. ಈ ವರ್ಷದ ಪ್ರಯಾಣ ನವೆಂಬರ್ 16ರಂದು ಆರಂಭಗೊಳ್ಳುತ್ತಿದೆ.
ಹೌದು, ಈ ರೈಲು ವರ್ಷದ 365 ದಿನದಲ್ಲಿ ಕೇವಲ 15 ದಿನ ಮಾತ್ರ ಸಂಚಾರ ಮಾಡಲಿದೆ. ಮುಂಬೈ ಮೂಲದ ಜಾಗೃತಿ ಸೇವಾ ಸಂಸ್ಥೆ ಈ ರೈಲು ಪ್ರಯಾಣ ಆಯೋಜಿಸುತ್ತಿದೆ. ಇದು ಜಾಗೃತಿ ಮೂಡಿಸುವ ರೈಲು. ಜಾಗೃತಿ ಜೊತೆಗೆ ಪಾಲ್ಗೊಳ್ಳುವ ಪ್ರಯಾಣಿಕರ ಭವಿಷ್ಯವನ್ನು ರೂಪಿಸುತ್ತದೆ. ತಜ್ಞರು, ಸಂಶೋಧಕರು, ವಾಗ್ಮಿ ಸೇರಿದಂತೆ ಹಲವು ಕ್ಷೇತ್ರದ ದಿಗ್ಗಜರು ಈ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. 15 ದಿನ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಜೊತೆ ವಿಚಾರ ಮಂಥನ, ಚರ್ಚೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
undefined
ಈ ರೈಲು ನಿಲ್ದಾಣದಲ್ಲಿ ವರ್ಷದ 15 ದಿನ ಮಾತ್ರ ಟ್ರೈನ್ ನಿಲುಗಡೆ, ಇನ್ನುಳಿದ ದಿನ ಹಾಳುಕೊಂಪೆ!
2008ರಲ್ಲಿ ಈ ರೈಲು ಮೊದಲ ಬಾರಿಗೆ ಸಂಚಾರ ಮಾಡಿತು. ವಿಶೇಷ ಅಂದರೆ ಈ ರೈಲು ಪ್ರಯಾಣದ ಸಂಪೂರ್ಣ ವೆಚ್ಚ, ವಿವಿಧ ದೇಶಗಳಿಂದ ಆಗಮಿಸುವ ಅತಿಥಿಗಳು, ರೈಲಿನಲ್ಲಿ ಊಟ, ಆಹಾರ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ಒನ್ ಅಂಡ್ ಒನ್ಲಿ ರತನ್ ಟಾಟಾ ವಹಿಸಿದ್ದರು. ರತನ್ ಟಾಟಾ ಮೊದಲ ಸಂಚಾರದ ಸಂಪೂರ್ಣ ವೆಚ್ಚವನ್ನು ಭರಿಸಿದ್ದರು. 2008ರಿಂದ ಇದುವರೆಗೆ 23 ದೇಶಗಳಿಂಗ 75,000ಕ್ಕೂ ಹೆಚ್ಚು ಮಂದಿ ಈ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಭವಿಷ್ಯ ರೂಪಿಸಿಕೊಂಡಿದ್ದಾರೆ.
ಜಾಗೃತಿ ಸೇವಾ ಸಂಸ್ಥೆ ಪ್ರಮುಖವಾಗಿ ಯುವ ಸಮೂಹಕ್ಕೆ ಜಾಗೃತಿ ನೀಡುವ ಸಲುವಾಗಿ ಈ ರೈಲು ಸಂಚಾರ ಆಯೋಜಿಸುತ್ತಿದೆ. ವಿವಿಧ ನಗರಗಳ ಜನರ ಜೊತೆ ಸಂಪರ್ಕ,ಭಾರತದ ವಿವಿಧ ನಗರಗಳ ದರ್ಶನ, ಶಿಕ್ಷಣ, ಆರೋಗ್ಯ ನೀರು, ನೈಮರ್ಲ್ಯ, ಹಣಕಾಸು, ವ್ಯವಹಾರ ಸೇರಿದಂತೆ ಹಲವು ವಿಚಾರಗಳ ಕುರಿತು ಈ ರೈಲು ಪ್ರಯಾಣದಲ್ಲಿ ಚರ್ಚೆಗಳು, ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿದೆ. ಹಲವು ವಿದ್ವಾಂಸರು ಪಾಲ್ಗೊಳ್ಳುತ್ತಾರೆ.
ಈ ಬಾರಿಯ ಈ ಜಾಗೃತಿ ಯಾತ್ರೆ ನವೆಂಬರ್ 16ರಂದು ಆರಂಭಗೊಳ್ಳಲಿದೆ. ಮುಂಬೈನಿಂದ ಆರಂಭಗೊಂಡು, ಹುಬ್ಬಳ್ಳಿ, ಬೆಂಗಳೂರು, ಚೆನ್ನೈ ಮೂಲಕ ದೆಹಲಿ ತಲುಪಲಿದೆ. ಡಿಸೆಂಬರ್ 1 ರಂದು ಯಾತ್ರೆ ಅಂತ್ಯಗೊಳ್ಳಲಿದೆ. ಈಗಾಗಲೇ ಈ ರೈಲಿನಲ್ಲಿ ಪ್ರಯಾಣಿಸಲು ಜಾಗೃತಿ ಸಂಸ್ಥೆ ಮೂಲಕ ಹಲವರು ಟಿಕೆಟ್ ಬುಕ್ ಮಾಡಲಾಗಿದೆ.
ನವಜಾತ ಮಗುವನ್ನು ರೈಲಿನಲ್ಲಿಟ್ಟು ತಾಯಿ ಪರಾರಿ, ರೈಲ್ವೇ ಪೇದೆಯಿಂದ ಬದುಕಿತು ಕಂದಮ್ಮ!