ಭಾರತದಲ್ಲಿ ಇದೀಗ ರೈಲು ಹಳಿ ತಪ್ಪಿ ನಡೆಯುತ್ತಿರುವ ದುರಂತ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ನಾಗ್ಪುರದಲ್ಲಿ ಲೋಕಮಾನ್ಯ ತಿಲಕ್-ಶಾಲಿಮಾರ್ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲು ಹಳಿ ತಪ್ಪಿದೆ.
ನಾಗ್ಪುರ(ಅ.22) ರೈಲು ಹಳಿ ತಪ್ಪಿ ದುರಂತ ಸಂಭವಿಸುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಬಹುದೊಡ್ಡ ಷಡ್ಯಂತ್ರ ಕೂಡ ಬಯಲಾಗಿದೆ. ಈ ಆತಂಕ, ತನಿಖೆಗಳ ನಡುವೆ ಇದೀಗ ನಾಗ್ಪುರದಲ್ಲಿ ಲೋಕಮಾನ್ಯ ತಿಲಕ್-ಶಾಲಿಮಾರ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ಮೂರು ಬೋಗಿಗಳು ಹಳಿ ತಪ್ಪಿ ದುರ್ಘಟನೆ ಸಂಭವಿಸಿದೆ. ಮುಂಬೈನಿಂದ ಶಾಲಿಮಾರ್‌ಗೆ ಸಂಚರಿಸುತ್ತಿದ್ದ ರೈಲು ನಾಗ್ಪುರದ ಸುಭಾಷ್ ಚಂದ್ರ ರೈಲು ನಿಲ್ದಾಣದ ಬಳಿ ಹಳಿ ತಪ್ಪಿದೆ. ಸದ್ಯದ ಮಾಹಿತಿ ಪ್ರಕಾರ, ಅದೃಷ್ಠವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಎಸ್1, ಎಸ್2 ಹಾಗೂ ಗೂಡ್ಸ್ ಬೋಗಿಗಳು ಹಳಿ ತಪ್ಪಿದೆ. ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ರೈಲ್ವೇ ಕಂಟ್ರೋಲ್ ರೂಂ ಈ ಮಾರ್ಗದಲ್ಲಿ ಸಾಗುವ ರೈಲು ಸಂಚಾರ ಬೇರೆಗೆ ವರ್ಗಾಯಿಸಿದೆ. ಇಷ್ಟೇ ಅಲ್ಲ ಹಲವು ರೈಲುಗಳು ಸಂಚಾರ ಸ್ಥಗಿತಗೊಳಿಸಲಾಗಿದೆ. ರೈಲ್ವೇ ಪೊಲೀಸ್ ಇದೀಗ ತನಿಖೆ ಆರಂಭಿಸಿದೆ. ರೈಲು ಹಳಿ ತಪ್ಪಿದ ಹಿಂದಿನ ಕಾರಣ ಶೋಧ ಆರಂಭಗೊಂಡಿದೆ.
ಇತರ ರೈಲುಗಳು ಹಳಿ ತಪ್ಪಿದಂತೆ ಲೋಕಮಾನ್ಯ ತಿಲಕ-ಶಾಲಿಮಾರ್ ಎಕ್ಸ್‌ಪ್ರೆಸ್ ಹಳಿ ತಪ್ಪಿದ ಹಿಂದೆ ಷಡ್ಯಂತ್ರದ ಅನುಮಾನಗಳು ಕಾಡಕೊಡಗಿದೆ. ಉದ್ದೇಶಪೂರ್ವಕವಾಗಿ ರೈಲು ಹಳಿಗಳಿಗೆ ಹಾನಿ ಮಾಡಿ ಹಳಿ ತಪ್ಪಿಸಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಲಾಗಿದೆ. ಇತರ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮೂರು ಬೋಗಿಗಳು ಹಳಿ ತಪ್ಪಿದೆ. ಆದರೆ ಲೋಕೋಪೈಲೆಟ್ ಜಾಗರೂಕತೆಯಿಂದ ತಕ್ಷಣವೇ ರೈಲು ನಿಲ್ಲಿಸಲಾಗಿದೆ. ರೈಲಿನ ವೇಗ ಕಡಿಮೆಯಾಗಿದ್ದ ಕಾರಣ ದುರಂತ ತಪ್ಪಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ಅಕ್ಟೋಬರ್ 18 ರಂದು ಕಲ್ಯಾಣ್ ರೈಲ್ವೇ ನಿಲ್ಧಾಣ, ಥಾಣೆ ಜಿಲ್ಲೆಯಲ್ಲೂ ಇದೇ ರೀತಿ ರೈಲು ಹಳಿ ತಪ್ಪಿತ್ತು. ಟಿಟ್ವಾಲ್ ಛತ್ರಪತಿ ಶಿವಾಜಿ ರೈಲು ಹಳಿ ತಪ್ಪಿತ್ತು. ನಿಧಾನವಾಗಿ ಸಂಚರಿಸುತ್ತಿದ್ದ ರೈಲು ಹಳಿ ತಪ್ಪಿತ್ತು. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.