
ನವದೆಹಲಿ(ಸೆ.21): ಸೋಮವಾರದಿಂದ 40 ‘ತದ್ರೂಪಿ ರೈಲು’ (ಕ್ಲೋನ್ ಟ್ರೇನ್) ಸಂಚಾರ ಆರಂಭಿಸಲಿವೆ. ವೇಟಿಂಗ್ ಲಿಸ್ಟ್ನಲ್ಲಿರುವ ಪ್ರಯಾಣಿಕರು ಹಾಗೂ ಕೊನೇ ಕ್ಷಣದಲ್ಲಿ ಪ್ರಯಾಣದ ಪ್ಲ್ಯಾನ್ ಮಾಡಿಕೊಳ್ಳುವವರಿಗೆ ಇದರಿಂದ ನೆರವಾಗಲಿದೆ.
ಅಧಿವೇಶನ: ಕಡ್ಡಾಯ ಟೆಸ್ಟ್‌ನಲ್ಲಿ ಸಚಿವ ಸರೇಶ್ ಅಂಗಡಿಗೆ ಕೊರೋನಾ ದೃಢ
ಮೂಲ ರೈಲಿನ ನಿಗದಿತ ಸಮಯದ ಮುನ್ನ ಹಾಗೂ ಮೂಲ ರೈಲಿನ ಸಂಖ್ಯೆಯಲ್ಲೇ ತದ್ರೂಪಿ ರೈಲು ಸಂಚಾರ ಆರಂಭಿಸುತ್ತದೆ. ಮೂಲ ರೈಲು ತಲುಪುವ ನಿಗದಿತ ಸಮಯದ 2-3 ತಾಸು ಮೊದಲೇ ಇದು ಗಮ್ಯ ಸ್ಥಳ ತಲುಪುತ್ತದೆ. ಮೂಲ ರೈಲಿಗಿಂತ ಕಡಿಮೆ ನಿಲುಗಡೆ ಹಾಗೂ ಹೆಚ್ಚು ವೇಗ ಹೊಂದಿರುತ್ತದೆ. ಇವುಗಳಲ್ಲಿ ಹೆಚ್ಚಿನವು 3 ಟಯರ್ ಎಸಿ ಕೋಚ್ ಹೊಂದಿರುವ ರೈಲುಗಳಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕ್ಲೋನ್ ರೈಲುಗಳಿಗೆ ರೈಲು ಸಂಚರಿಸುವ 10 ದಿನದ ಮುನ್ನ ಟಿಕೆಟ್ ಬುಕ್ ಮಾಡಲು ಅವಕಾಶವಿದೆ. ಬುಕ್ಕಿಂಗ್ ಸೆ.19ರಿಂದಲೇ ಆರಂಭವಾಗಿದೆ.
ಕರ್ನಾಟಕದ ರೈಲುಗಳು:
ವಾಸ್ಕೋ- ಹಜರತ್ ನಿಜಾಮುದ್ದೀನ್ (ಬೆಳಗಾವಿ ಮೂಲಕ), ಬೆಂಗಳೂರು- ದಾನಾಪುರ, ಯಶವಂತಪುರ- ನಿಜಾಮುದ್ದೀನ್
ಬೆಂಗ್ಳೂರು-ಮೈಸೂರು ಸೇರಿ 80 ವಿಶೇಷ ರೈಲು: ಟಿಕೆಟ್ ಬುಕ್ಕಿಂಗ್ ಇಂದಿನಿಂದ ಆರಂಭ
ಕರ್ನಾಟಕದಲ್ಲಿ ಸಂಚರಿಸುವ 6 ಕ್ಲೋನ್ ರೈಲು
- ವಾಸ್ಕೋ-ಹಜರತ್ ನಿಜಾಮುದ್ದೀನ್ (ದಿಲ್ಲಿ) ಗೋವಾ ಎಕ್ಸ್‌ಪ್ರೆಸ್ ರೈಲು ಬೆಳಗಾವಿ ಮಾರ್ಗವಾಗಿ ಸಂಚಾರ. ಪ್ರತಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ವಾಸ್ಕೋದಿಂದ ಯಾನ. ರೈಲಿನ ಸಂಖ್ಯೆ 07379.
- ಹಜರತ್ ನಿಜಾಮುದ್ದೀನ್-ವಾಸ್ಕೋ ರೈಲು ಪ್ರತಿ ಭಾನುವಾರ ಮಧ್ಯಾಹ್ನ 1ಕ್ಕೆ ನಿಜಾಮುದ್ದೀನ್‌ನಿಂದ ಸಂಚಾರ. ಬೆಳಗಾವಿ ಮಾರ್ಗವಾಗಿ ಯಾನ. ರೈಲಿನ ಸಂಖ್ಯೆ 07380.
- ಬೆಂಗಳೂರು-ದಾನಾಪುರ (ಪಟನಾ) ರೈಲು ಪ್ರತಿ ಸೋಮವಾರ ಬೆಳಗ್ಗೆ 8ಕ್ಕೆ ಬೆಂಗಳೂರಿನಿಂದ ಸಂಚಾರ. ರೈಲು ಸಂಖ್ಯೆ 06509.
- ದಾನಾಪುರ-ಬೆಂಗಳೂರು ರೈಲು ಪ್ರತಿ ಬುಧವಾರ ದಾನಾಪುರದಿಂದ ಮುಂಜಾನೆ ಸಂಜೆ 6.10ಕ್ಕೆ ಸಂಚಾರ. ರೈಲು ಸಂಖ್ಯೆ 06510.
- ಯಶವಂತಪುರ-ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಪ್ರತಿ ಬುಧವಾರ ಹಾಗೂ ಶನಿವಾರ ಯಶವಂತಪುರದಿಂದ ಮಧ್ಯಾಹ್ನ 1.55ಕ್ಕೆ ಸಂಚಾರ. ಹುಬ್ಬಳ್ಳಿ, ಬೆಳಗಾವಿಯಲ್ಲಿ ನಿಲುಗಡೆ. . ರೈಲು ಸಂಖ್ಯೆ 06523
- ನಿಜಾಮುದ್ದೀನ್-ಯಶವಂತಪುರ ರೈಲು ಪ್ರತಿ ಶನಿವಾರ ಹಾಗೂ ಮಂಗಳವಾರ ಬೆಳಗ್ಗೆ 8.45ಕ್ಕೆ ನಿಜಾಮುದ್ದೀನ್‌ನಿಂದ ಸಂಚಾರ. ಬೆಳಗಾವಿ, ಹುಬ್ಬಳ್ಳಿಯಲ್ಲಿ ನಿಲುಗಡೆ. ರೈಲು ಸಂಖ್ಯೆ 06524.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ