
ನವದೆಹಲಿ(ಅ.14): ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬ ಇರುವುದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚುವ ಸಾಧ್ಯತೆ ಇದ್ದು, ಹೀಗಾಗಿ ಅ.20 ರಿಂದ ನ.30ರ ವರೆ 392 ವಿಶೇಷ ರೈಲುಗಳನ್ನು ಓಡಿಸುವುದಾಗಿ ರೈಲ್ವೇ ಸಚಿವಾಲಯ ಹೇಳಿದೆ.
ದುರ್ಗಾಪೂಜೆ, ದಸರಾ, ದೀಪಾವಳಿ ಹಾಗೂ ಛತ್ ಪೂಜೆ ಮುಂತಾದ ಸರಣಿ ಹಬ್ಬಗಳು ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೋಲ್ಕತಾ, ಪಟನಾ, ವಾರಣಾಸಿ ಹಾಗೂ ಲಖನೌ ಮುಂತಾದ ಕಡೆ ಹೆಚ್ಚು ರೈಲುಗಳು ಸಂಚರಿಸಲಿದೆ.
ಒಂದೆರಡು ತಿಂಗಳಲ್ಲ, 14 ತಿಂಗಳು ಮನೆಯಲ್ಲೇ ಬಂಧನ: ಬಿಡುಗಡೆಯಾದ ಮೆಹಬೂಬಾ ಮುಫ್ತಿ..!
ವಿಶೇಷ ರೈಲಿನ ದರವೇ ಇದಕ್ಕೆ ಅನ್ವಯವಾಗಲಿದೆ. ಇವುಗಳ ಸೇವೆ ನ.30ರ ವರೆಗೆ ಮಾತ್ರ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಪ್ರಾದೇಶಿಕ ರೈಲ್ವೇ ಆಯಾ ರೈಲಿನ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಲಿದೆ.
ರೈಲುಗಳು ಕೊಲ್ಕತ್ತಾ, ವಾರಣಾಸಿ, ಪಟ್ನಾ, ಲ್ಕನೋ ಸೇರಿ ಹಲವು ಪ್ರದೇಶಗಳಿಗೆ ಸಂಚರಿಸಲಿದೆ. ಕೋವಿಡ್‌ನಿಂದ ಸದ್ಯ ದೇಶಾದ್ಯಂತ 300 ವಿಶೇಷ ರೈಲುಗಳು ಕಾರ್ಯಾಚರಿಸುತ್ತಿವೆ. ಈ ಹಬ್ಬದ ರೈಲುಗಳು 55 ಕಿ.ಮೀ ವೇಗದಲ್ಲಿ ಸಂಚರಿಸಲಿವೆ. ಐಆರ್‌ಸಿಟಿಸಿ ಮತ್ತು ಪಿಆರ್‌ಎಸ್ ಟಿಕೆಟ್ ಕೌಂಟರ್‌ಗಳ ಮೂಲಕವೂ ಟಿಕೆಟ್ ಪಡೆಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ