ಪತಂಜಲಿ ಸಂಸ್ಥೆ ಸಂಸ್ಥಾಪಕ ಯೋಗಗುರು ಬಾಬಾ ರಾಮ್‌ದೇವ್| ಆನೆ ಮೇಲೆ ಯೋಗಾಸನ ಮಾಡಲು ಹೋಗಿ ಉರುಳಿ ಬಿದ್ದ ಬಾಬಾ ರಾಮ್‌ದೇವ್!
ನವದೆಹಲಿ(ಅ.14): ಪತಂಜಲಿ ಸಂಸ್ಥೆ ಸಂಸ್ಥಾಪಕ ಯೋಗಗುರು ಬಾಬಾ ರಾಮ್‌ದೇವ್ ಅವರು ಆನೆಯ ಮೇಲೆ ಕುಳಿತು ಯೋಗ ಮಾಡಲು ಹೋಗಿ ಉರುಳಿ ಬಿದ್ದ ಘಟನೆ ನಡೆದಿದೆ.
ಮಥುರಾದಲ್ಲಿ ಆನೆಯ ಮೇಲೆ ಏರಿ ಕುಳಿತುಕೊಂಡಿದ್ದ ಬಾಬಾ ರಾಮ್‌ದೇವ್ ಅವರು ಯೋಗಾಸನ ಮಾಡುತ್ತಿದ್ದರು. ಈ ವೇಳೆ ಆನೆ ತನ್ನ ದೇಹವನ್ನು ಕುಲುಕ್ಕಿದ್ದರಿಂದ ಆಯ ತಪ್ಪಿದ ರಾಮ್‌ದೇವ್ ಅವರು ಆನೆಯ ಮೇಲಿನಿಂದ ಕೆಳಕ್ಕೆ ಉರುಳಿ ಬಿದ್ದಿದ್ದಾರೆ. ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಬಾಬಾ ರಾಮ್‌ದೇವ್ ಶೀಘ್ರ ಗುಣಮುಖರಾಗಲಿ ಎಂದು ಹಲವು ನೆಟ್ಟಿಗರು ಹಾರೈಸಿದ್ದಾರೆ.
Baba Ramdev fell from elephant while doing yoga.He has been injured and admitted to the hospital pic.twitter.com/lcNpGABTTN
— charan srivastava (@Charanns)ಈ ಹಿಂದೆಯೂ ಖಾಲಿ ರಸ್ತೆಯಲ್ಲಿ ಸೈಕಲ್ ತುಳಿಯುತ್ತಿದ್ದಾಗ ರಾಮ್‌ದೇವ್ ಅವರ ಸೈಕಲ್ ಮಳೆ ಬಂದಿದ್ದರಿಂದ ಸ್ಕಿಡ್ ಆಗಿ ಬಿದ್ದಿದ್ದ ವಿಡಿಯೋ ಸಹ ವೈರಲ್ ಆಗಿತ್ತು.