ವಿದೇಶಕ್ಕೆ ದೇಶದಿಂದ ಮೊದಲ ರೈಲು; ಬಾಂಗ್ಲಾಗೆ ಗುಂಟೂರು ಮೆಣಸು ಸಾಗಣೆ

Kannadaprabha News   | Asianet News
Published : Jul 13, 2020, 07:34 PM IST
ವಿದೇಶಕ್ಕೆ ದೇಶದಿಂದ ಮೊದಲ ರೈಲು; ಬಾಂಗ್ಲಾಗೆ ಗುಂಟೂರು ಮೆಣಸು ಸಾಗಣೆ

ಸಾರಾಂಶ

ಗಡಿಯಿಂದ ಆಚೆಗೆ ಇದೇ ಮೊದಲ ಬಾರಿಗೆ ಭಾರತೀಯ ರೈಲೊಂದು ಸಂಚಾರ ಆರಂಭಿಸಿದೆ. ಬಾಂಗ್ಲಾದೇಶಕ್ಕೆ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಪ್ರಸಿದ್ಧ ಗುಂಟೂರು ಮೆಣಸಿನಕಾಯಿಯನ್ನು ರಫ್ತು ಮಾಡಲಾಗಿದೆ. ವಿಶೇಷ ಸರಕು ರೈಲಿನಲ್ಲಿ ಮೆಣಸಿನಕಾಯಿನ್ನು ಅಲ್ಲಿಗೆ ಕಳಿಸಲಾಗಿದೆ.

ನವದೆಹಲಿ (ಜು. 13): ಗಡಿಯಿಂದ ಆಚೆಗೆ ಇದೇ ಮೊದಲ ಬಾರಿಗೆ ಭಾರತೀಯ ರೈಲೊಂದು ಸಂಚಾರ ಆರಂಭಿಸಿದೆ. ಬಾಂಗ್ಲಾದೇಶಕ್ಕೆ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಪ್ರಸಿದ್ಧ ಗುಂಟೂರು ಮೆಣಸಿನಕಾಯಿಯನ್ನು ರಫ್ತು ಮಾಡಲಾಗಿದೆ. ವಿಶೇಷ ಸರಕು ರೈಲಿನಲ್ಲಿ ಮೆಣಸಿನಕಾಯಿನ್ನು ಅಲ್ಲಿಗೆ ಕಳಿಸಲಾಗಿದೆ.

ಆಂಧ್ರಪ್ರದೇಶದ ಗುಂಟೂರು ರೈತರು ಹಾಗೂ ವರ್ತಕರು ಈ ಮುನ್ನ ರಸ್ತೆ ಮುಖಾಂತರ ಮೆಣಸಿನಕಾಯಿಯನ್ನು ಸಣ್ಣ ಪ್ರಮಾಣದಲ್ಲಿ ಬಾಂಗ್ಲಾದೇಶಕ್ಕೆ ಕಳಿಸುತ್ತಿದ್ದರು. ಅದರೆ ಕೊರೋನಾ ವೈರಸ್‌ ಲಾಕ್‌ಡೌನ್‌ ಕಾರಣ ರಸ್ತೆ ಸಂಚಾರ ಹಾಗೂ ರೈಲು ಸಂಚಾರ ನಿಂತು ಹೋಯಿತು.

ಇದರಿಂದಾಗಿ ರೈತರು ಹಾಗೂ ವರ್ತಕರಿಗೆ ರಫ್ತು ಸಮಸ್ಯೆಯಾಯಿತು. ಹೀಗಾಗಿ ರೈಲ್ವೆ ಅಧಿಕಾರಿಗಳು ವರ್ತಕರನ್ನು ಸಂಪರ್ಕಿಸಿ, ರೈಲು ಮೂಲಕ ಉತ್ಪನ್ನ ಸಾಗಿಸಬಹುದು ಎಂದು ತಿಳಿಸಿದರು. ಈ ಪ್ರಕಾರ, ಗುಂಟೂರು ಸನಿಹದ ರೆಡ್ಡಿಪಾಳೆಂನಿಂದ ಬಾಂಗ್ಲಾದೇಶದ ಬೆನಾಪೋಲ್‌ಗೆ ಭಾರೀ ಪ್ರಮಾಣದ ಮೆಣಸಿನಕಾಯಿಯನ್ನು ಜುಲೈ 10ರಂದು ವಿಶೇಷ ರೈಲಿನಲ್ಲಿ ರಫ್ತು ಮಾಡಲಾಗಿದೆ.

ರೈಲು ಹೊರಡುವ 2 ನಿಮಿಷ ಮುನ್ನ ಇನ್ನು ಗಂಟೆ ಮೊಳಗುತ್ತೆ!

ರೈಲಿನಲ್ಲಿ ರಫ್ತು ಮಾಡುವುದರಿಂದ ಸಾಗಣೆ ವೆಚ್ಚ ತಗ್ಗಿದೆ. ಲಾರಿಗಳಲ್ಲಿ ಸಾಗಿಸಬೇಕಾದಾಗ ಟನ್‌ಗೆ 7 ಸಾವಿರ ರು. ಖರ್ಚಾಗುತ್ತಿತ್ತು. ಆದರೆ ರೈಲಿನಲ್ಲಿ ಸಾಗಿಸಿದ್ದರಿಂದ ಟನ್‌ಗೆ ಕೇವಲ 4,608 ರು. ಖರ್ಚಾಗಿದೆ. ಪ್ರತಿ ಗೂಡ್ಸ್‌ ಬೋಗಿಯಲ್ಲಿ 466 ಚೀಲಗಳಂತೆ 16 ಬೋಗಿಗಳಲ್ಲಿ 384 ಟನ್‌ ಮೆಣಸಿನಕಾಯಿ ಸಾಗಿಸಲಾಗಿದೆ.

ಕರ್ನಾಟಕದ ಬ್ಯಾಡಗಿ ರೀತಿ ಗುಂಟೂರು ಸುತ್ತಮುತ್ತಲಿನ ಭಾಗ ಮೆಣಸಿನಕಾಯಿ ಬೆಳೆಯುವುದಕ್ಕೆ ಪ್ರಸಿದ್ಧಿ ಪಡೆದಿದ್ದು, ಅದಕ್ಕೆಂದೇ ಇದಕ್ಕೆ ಗುಂಟೂರು ಮೆಣಸಿನಕಾಯಿ ಎಂದೇ ಕರೆಯಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು