ಮುಂಬೈ: ಚಲಿಸುತ್ತಿರುವ ರೈಲನ್ನು ಏರಲು ಹೋಗಬೇಡಿ ಹಾಗೂ ಇಳಿಯುವ ಪ್ರಯತ್ನ ಮಾಡಬೇಡಿ ಎಂದು ರೈಲ್ವೆ ಇಲಾಖೆ ಆಗಾಗ ಜಾಗೃತಿ ಮೂಡಿಸುತ್ತಲೆ ಇರುತ್ತದೆ. ಆದರೂ ಜನ ಆ ಎಚ್ಚರಿಕೆಯ ಮಾತಿನ ಕಡೆ ಗಮನ ಕೊಡದೇ ಚಲಿಸುವ ರೈಲನ್ನು ಏರಲು ಹೋಗಿ ಅನಾಹುತ ಸೃಷ್ಟಿಸಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಅಮ್ಮ ಮಗಳು ಚಲಿಸುತ್ತಿರುವ ರೈಲೇರಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಬ್ಬರು ಚಲಿಸುತ್ತಿರುವ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ರೈಲ್ವೆ ಪೊಲೀಸ್ ಪೋರ್ಸ್‌ನ ಸಿಬ್ಬಂದಿಯೊಬ್ಬರು ಅವರನ್ನು ದೊಡ್ಡ ಅನಾಹುತದಿಂದ ಪಾರು ಮಾಡಿದ್ದಾರೆ. ಈ ಅಪಾಯಕಾರಿ ದೃಶ್ಯದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ರೈಲ್ವೆ ಪೊಲೀಸ್ ಪೋರ್ಸ್ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ ಕೆಳಗೆ ಬಿದ್ದ ತಾಯಿ ಮಗಳನ್ನು ರೈಲ್ವೆ ಪೊಲೀಸ್ ಕಾನಸ್ಟೇಬಲ್ ತೇಜ್‌ರಾಮ್ ರಕ್ಷಣೆ ಮಾಡಿದ್ದಾರೆ. ಇವರು ವಾಸಿ ರೈಲ್ವೆ ಸ್ಟೇಷನ್‌ನಲ್ಲಿ ಚಲಿಸುವ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಲುಕಿದ್ದರು. ನಿಮ್ಮ ಸುರಕ್ಷತೆಯ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ರೈಲ್ವೆ ಪೊಲೀಸ್ ಪೋರ್ಸ್ ಇಂಡಿಯಾ ಈ ವಿಡಿಯೋವನ್ನು ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಮಗಳು ಮೊದಲು ರೈಲೇರಿದ್ದು, ನಂತರ ತಾಯಿಯನ್ನು ರೈಲಿಗೇರಿಸಿಕೊಳ್ಳಲು ನೋಡುತ್ತಾಳೆ. ಅಷ್ಟರಲ್ಲಾಗಲೇ ರೈಲಿನ ವೇಗ ಜಾಸ್ತಿಯಾಗಿದ್ದು, ಅಮ್ಮ ಮಗಳಿಬ್ಬರು ಕೆಳಗೆ ಬೀಳುತ್ತಾರೆ. ಇನ್ನೇನು ಇಬ್ಬರು ಪ್ಲಾಟ್‌ಫಾರ್ಮ್ ಹಾಗೂ ರೈಲಿನ ಮಧ್ಯೆ ಸಿಲುಕಿಕೊಳ್ಳುತ್ತಾರೆ ಎನ್ನುವಷ್ಟರಲ್ಲಿ ಅಲ್ಲೇ ಇದ್ದ ರೈಲ್ವೆ ರಕ್ಷಣಾ ಪಡೆಯ ಪೊಲೀಸ್ ಹಾಗೂ ರೈಲಿಗಾಗಿ ಕಾಯುತ್ತಿದ್ದ ಕೆಲ ಪ್ರಯಾಣಿಕರು ಓಡೋಡಿ ಬಂದು ಮಹಿಳೆ ಹಾಗೂ ಮಗಳನ್ನು ರಕ್ಷಿಸುತ್ತಾರೆ.
ಮಿಸ್ಸಾಯ್ತು ರೈಲು, ದುಡ್ಡಿಲ್ಲ, ಫೋನಿಲ್ಲ, 300 ಕಿ.ಮೀ ನಡೆದುಕೊಂಡೇ ಮನೆ ಸೇರಿದ!
ಮುಂಬೈನ ವಾಸಿ ರಸ್ತೆ ರೈಲ್ವೆ ನಿಲ್ದಾಣದಲ್ಲಿ ( Vasai Road Station) ಡಿಸೆಂಬರ್ 13 ರಂದು ನಡೆದ ಘಟನೆ ಇದಾಗಿದೆ. ಈ ಅಪಾಯಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಬಳಸಿಕೊಂಡು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮತ್ತೆ ಜಾಗೃತಿ ಮೂಡಿಸುತ್ತಿದೆ. ಅನೇಕರು ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಏಕೆ ಅಷ್ಟೊಂದು ಆತುರ ಎಂದು ಪ್ರಶ್ನಿಸಿದ್ದಾರೆ. ಜೀವವನ್ನು ಅಪಾಯಕ್ಕಿಟ್ಟು ರೈಲೇರುವ ಸಾಹಸವೇಕೆ ಎಂದು ಕೆಲವರು ಕೇಳಿದ್ದಾರೆ. ಇಂತಹ ಸಾಹಸ ಮಾಡುವ ಮೊದಲು ತಮ್ಮ ದೈಹಿಕ ಸ್ಥಿರತೆಯ ಬಗ್ಗೆ ಗಮನಹರಿಸಬೇಕು ಎಂದು ಒಬ್ಬರು ಸಲಹೆ ನೀಡಿದ್ದಾರೆ. ಅನೇಕರು ಅಮ್ಮ ಮಗಳನ್ನು ರಕ್ಷಿಸಿದ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಕೆಲ ಪ್ರಯಾನಿಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಫಲಿಸಲಿಲ್ಲ ಚಿಕಿತ್ಸೆ: ವಿಶಾಖಪಟ್ಟಣದಲ್ಲಿ ರೈಲು - ಪ್ಲಾಟ್‌ಫಾರ್ಮ್ ಮಧ್ಯೆ ಸಿಲುಕಿದ್ದ ಯುವತಿ ಬಲಿ
ಕೆಲದಿನಗಳ ಹಿಂದೆ ಮಹಾರಾಷ್ಟ್ರದ(Maharashtra) ಗೊಂಡಿಯಾ (Gondia) ರೈಲು ನಿಲ್ದಾಣದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನಿಂದ ಕೆಳಗಿಳಿಯಲು ಹೋಗಿ ಕೆಳಗೆ ಬಿದ್ದಿದ್ದರು, ಕೂಡಲೇ ಅಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಮಹಿಳೆ ಹಳಿಗೆ ಬೀಳುವ ಮೊದಲು ಆಕೆಯನ್ನು ಪಕ್ಕಕ್ಕೆ ಎಳೆದು ರಕ್ಷಣೆ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ